SSY: ಮನೆಯಲ್ಲಿ ಹೆಣ್ಮಕ್ಳಿದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ದುಡ್ಡು ದಬಲ್ ಮಾಡೋ ಬೆಸ್ಟ್ ಪ್ಲಾನ್ ಗೊತ್ತಾ?

SSY: ಹೆಣ್ಣು ಮಕ್ಕಳ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವಂತಹ ನಿರ್ಧಾರ ಪ್ರತಿ ಬಾರಿ ಕೂಡ ಸಾಕಷ್ಟು ಉತ್ತಮವಾಗಿರುತ್ತದೆ ಯಾಕೆಂದರೆ ಪ್ರತಿಯೊಂದು ಸರ್ಕಾರಗಳು ಕೂಡ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸ್ವಾವಲಂಬಿಯಾಗಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿ ವಿಶೇಷವಾಗಿ ಕೆಲವೊಂದು ಹೂಡಿಕೆ ಮಾಡುವಂತಹ ಯೋಜನೆಗಳು ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿ ಲಾಭವನ್ನು ನೀಡುವಂತಹ ಯೋಜನೆಗಳಾಗಿವೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ.

ಸುಕನ್ಯಾ ಸಮೃದ್ಧಿ ಯೋಜನೆ

ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದ್ರೆ ಅವರ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡುವುದಕ್ಕೆ ಹೊರಟರೆ ಅವರ ಮದುವೆ ಹಾಗೂ ಉನ್ನತ ವ್ಯಾಸಂಗ ಸೇರಿದಂತೆ ಸಾಕಷ್ಟು ಪ್ರಮುಖ ಘಟ್ಟದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಈ ಯೋಜನೆ ಸಂಪೂರ್ಣವಾಗಿ ನೀಡುತ್ತದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಹೆಣ್ಣು ಮಕ್ಕಳಿಗೆ ಪ್ರಾರಂಭ ಮಾಡಿದೆ. ಹತ್ತು ವರ್ಷಕ್ಕಿಂತ ಒಳಗೆ ಇರುವಂತಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಈ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಬಹುದಾಗಿದೆ. ಕನಿಷ್ಠ 250 ರೂಪಾಯಿಗಳಿಂದ ಪ್ರಾರಂಭಿಸಿ ಗರಿಷ್ಟ 1.50 ಲಕ್ಷ ರೂಪಾಯಿಗಳವರೆಗು ಕೂಡ ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ ಎಲ್ಲಕ್ಕಿಂತ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದು ಅಂದ್ರೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ವಾರ್ಷಿಕ 8.2% ಬಡ್ಡಿ ದರವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಸರ್ಕಾರ ಜಾರಿಗೆ ತಂದಿರುವಂತಹ ಯಾವುದೇ ಯೋಜನೆಗಳಲ್ಲಿ ಕೂಡ ನೀವು ಇಷ್ಟೊಂದು ದೊಡ್ಡ ಮಟ್ಟದ ಬಡ್ಡಿಯ ರಿಟರ್ನ್ ಅನ್ನು ನೋಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಇದು ಜಾರಿಗೆ ಬಂದಂತಹ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ಸಾಕಷ್ಟು ವೇಗವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಇನ್ನು ಇನ್ಕಮ್ ಟ್ಯಾಕ್ಸ್ 80 c ಪ್ರಕಾರ ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ನೀವು ಈ ಯೋಜನೆಯ ಮೇಲೆ ಪಡೆದುಕೊಳ್ಳಬಹುದಾಗಿದೆ. ಇನ್ನು ಮೆಚುರಿಟಿ ಅವರಿಗಿಂತ ಮುಂಚೆ ನೀವು 50 ಪ್ರತಿಶತ ಹಣವನ್ನ ನಿಮ್ಮ ಹೂಡಿಕೆ ಮೇಲೆ ವಾಪಸ್ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಮೆಚುರಿಟಿ ಅವರಿಗಿಂತ ಮುಂಚೆ ಆ ಹೆಣ್ಣು ಮಗಳು ಮರಣ ಹೊಂದಿದ್ದರೆ ಅವರ ಹೆಸರಿನಲ್ಲಿ ಇರುವಂತಹ ಹಣವನ್ನು ಅವರ ಪೋಷಕರು ಪಡೆದುಕೊಳ್ಳಬಹುದಾಗಿದೆ. ಇನ್ನು ಅಕೌಂಟ್ ಕ್ಲೋಸ್ ಮಾಡೋದಕ್ಕೆ ನೀವು ಯಾವುದೇ ರೀತಿಯ ಹೆಚ್ಚುವರಿ ಪೆನಾಲ್ಟಿಯನ್ನು ನೀಡಬೇಕಾದ ಅಗತ್ಯವಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಯಾವ ರೀತಿಯಲ್ಲಿ ಹಣ ಹೆಚ್ಚಾಗಿ ಪಡೆಯಬಹುದು ಉದಾಹರಣೆ!

ಇನ್ನು ಈ ಯೋಜನೆಯಲ್ಲಿ ನೀವು ವರ್ಷಕ್ಕೆ ಹತ್ತು ಸಾವಿರ ರೂಪಾಯಿಗಳ ಹೂಡಿಕೆಯನ್ನ ಐದು ವರ್ಷದಿಂದ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ 2021 ರಿಂದ ಪ್ರಾರಂಭ ಮಾಡಿದ್ದೀರಿ ಎಂಬುದಾಗಿ ಭಾವಿಸಿ. ಆ ಸಂದರ್ಭದಲ್ಲಿ ನೀವು 1.50 ಲಕ್ಷ ರೂಪಾಯ್ಗಳ ಹಣವನ್ನು ಹೂಡಿಕೆ ಮಾಡಿದ್ದೀರಿ ಹಾಗೂ ಬಡ್ಡಿಯನ್ನು 3.11 ಲಕ್ಷಗಳಿಗಿಂತ ಹೆಚ್ಚಾಗಿ ಪಡೆದುಕೊಂಡಿದ್ದೀರಿ. ಆಗ 2042ರ ಮೆಚುರಿಟಿ ಸಂದರ್ಭದಲ್ಲಿ ನಿಮಗೆ ಒಟ್ಟಾರೆಯಾಗಿ ಸಿಗುವಂತಹ ಹಣ 4.61 ಲಕ್ಷಗಳಿಗೂ ಹೆಚ್ಚು ಆಗಿರುತ್ತದೆ.

SSY