Business Ideas: ನಿಮ್ಮ ಬಳಿ ಸಾವಿರ ರೂಪಾಯಿ ಇದ್ಯಾ? ಈ ಬ್ಯುಸನೆಸ್ ಮಾಡಿದ್ರೆ ಸಾಕು ತಿಂಗಳಿಗೆ 30ಸಾವಿರ ರೂಪಾಯಿ ಆದಾಯ ಫಿಕ್ಸ್!

Business Ideas: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ವಂತ ಉದ್ಯೋಗ ಮಾಡಲು ಇಚ್ಚಿಸುತ್ತಿದ್ದಾರೆ. ಆದರೆ ಕೆಲವರಿಗೆ ಯಾವ ಉದ್ಯೋಗ ಮಾಡಬೇಕು ಎನ್ನುವ ಗೊಂದಲ ಇರುತ್ತದೆ. ಆಗ ಸ್ನೇಹಿತರ ಸಹಾಯದಿಂದ ನಿಮಗೆ ಉಪಯುಕ್ತವಾಗಿರುವ ಸಲಹೆ ಪಡೆದು ಉದ್ಯೋಗ ಆರಂಭಿಸಬೇಕು. ಅಲ್ಲದೆ ಕೋವಿಡ್ ನಂತರ ಬಹುತೇಕ ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿರುವುದರಿಂದಲೂ ಜನರು ಸ್ವಂತ ಉದ್ಯೋಗದ ಕಡೆ ಮನಸ್ಸು ಮಾಡುತ್ತಿದ್ದಾರೆ. ಇದನ್ನೂ ಓದಿ: Job Tips: ಪದೇ ಪದೇ ಕೆಲಸ ಬದಲಾಯಿಸುವುದರಲ್ಲಿಯೂ ಇದೆ ಬೆನಿಫೀಟ್; ಏನು ಗೊತ್ತಾ?

ಇನ್ನು ಕೆಲವರಿಗೆ ಯಾವ ಉದ್ಯೋಗ ಮಾಡಿದರೆ ಲಾಭ ಆಗುತ್ತದೆ ಎಂದು ತಿಳಿದಿರುತ್ತದೆ. ಆದರೆ ಕೈಯ್ಯಲ್ಲಿ ಬಂಡವಾಳ ಇಲ್ಲದಿರುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಕಡಿಮೆ ಹಣದಲ್ಲಿ ನೀವು ಹೆಚ್ಚಿನ ಲಾಭ ನೀಡುವ ಸ್ವಂತ ಉದ್ಯೋಗವನ್ನು ಮಾಡಬಹುದು. ಇಂತಹವರು ಆಲೂಗಡ್ಡೆ, ಬಾಳೆಕಾಯಿ ಚಿಪ್ಸ್ ವ್ಯಾಪಾರ ಆರಂಭಿಸಬಹುದು. ಈಗ ತಿಂಡಿ-ತಿನಿಸುಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹಾಗಾಗಿ ನೀವು ಕೂಡ ಈ ಉದ್ಯಮ ಆರಂಭಿಸಿದರೆ ನಿಮಗೆ ಹೆಚ್ಚಿನ ಲಾಭ ಬರುತ್ತದೆ. ಇದನ್ನೂ ಓದಿ:Kannada Bigg Boss Season 9:  ವಾರಾಂತ್ಯದ ಬಿಗ್ ಎಲಿಮಿನೇಷನ್ಸ್; ಅಮೂಲ್ಯ ಜೊತೆಗೆ ಅರುಣ್ ಸಾಗರ್ ಕೂಡ ಮನೆಗೆ; ಅರುಣ್ ಔಟ್ ಆಗೋದಕ್ಕೆ ಅಸಲಿ ಕಾರಣ ವೋಟಿಂಗ್ ಅಲ್ವಂತೆ ನೋಡಿ!?

ಕೇವಲ ೮೫೦ರೂ.ಗೆ ಯಂತ್ರವನ್ನು ಖರೀದಿಸುವ ಮೂಲಕ ನೀವು ಈ ಉದ್ಯಮವನ್ನು ಆರಂಭಿಸಬಹುದು. ನಿಮಗೆ ಲಾಭ ಬರುವುದು ಆರಂಭವಾಗುತ್ತಿದ್ದಂತೆ ನೀವು ನಿಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು. ಇದಲ್ಲದೆ ಕಚ್ಚಾವಸ್ತುಗಳಿಗೆ ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಚಿಪ್ಸ್ ತಯಾರಿಸುವ ಯಂತ್ರವು ಆನ್ಲೈನ್ನ್ನಲ್ಲೂ ಲಭ್ಯವಿದೆ. ಚಿಪ್ಸ್ನ್ನು ಯಾವುದೇ ಮೇಜಿನ ಮೇಲೆ ಇಡುವ ಮೂಲಕ ಕತ್ತರಿಸಬಹುದು. ಈ ಮಿಷನ್ ಹೆಚ್ಚಿನ ವಿದ್ಯುತ್ನ್ನು ಕೂಡ ಬಯಸುವುದಿಲ್ಲ. ಆದ್ದರಿಂದ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ಈ ಉದ್ಯಮ ಶುರು ಮಾಡಬಹುದು.

ವಾಸ್ತವವಾಗಿ ಈ ಮಿಷನ್ ಕೆಲಸ ಮಾಡಲು ವಿದ್ಯುತ್ ಅವಶ್ಯಕತೆಯೇ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿ ಫ್ರೆಶ್ ಫ್ರೈಡ್ ಹಾಟ್ ಚಿಪ್ಸ್ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ. ನೀವು ಉತ್ತಮ ಗುಣಮಟ್ಟ ಹಾಗೂ ರುಚಿರುಚಿಯಾದ ಚಿಪ್ಸ್ ತಯಾರಿಸಿದರೆ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಇದನ್ನೂ ಓದಿ:Money saving tips:ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಹಣ ಕೈಯಲ್ಲಿ ಉಳಿಯುತ್ತಿಲ್ವಾ ? ಗರುಡ ಪುರಾಣದಲ್ಲಿ ಇದೆ ಇದಕ್ಕೊಂದು ಪರಿಹಾರ ಏನು ಗೊತ್ತಾ?

ಈ ಚಿಪ್ಸ್ ವ್ಯಾಪಾರವನ್ನು ನೀವು ಮನೆಯ ಮುಂದೆ ಸಣ್ಣ ಬಂಡಿ ಇಟ್ಟುಕೊಂಡು ಅಥವಾ ಸಣ್ಣ ಸ್ಟಾಲ್ ಇಟ್ಟುಕೊಂಡು ಸಹ ಶುರು ಮಾಡಬಹುದು. ನಿಮ್ಮ ಏರಿಯಾದ ಕೆಲವು ಅಂಗಡಿಕಾರರೊಡನೆ ಮಾತನಾಡಿಕೊಂಡು ಒಡಂಬಡಿಕೆ ಸಹ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರ ಶೀಘ್ರವಾಗಿ ವಿಸ್ತರಿಸುತ್ತದೆ ಹಾಗೂ ಹೆಚ್ಚು ಜನರನ್ನು ತಲುಪುತ್ತದೆ.

ದಿನವೊಂದಕ್ಕೆ ನೀವು ೧೦ ಕೆ.ಜಿ. ಆಲೂಗಡ್ಡೆ ಚಿಪ್ಸ ಮಾಡಿದರೆ ನೀವು ಒಂದು ಸಾವಿರ ರೂ. ಗಳಿಸಬಹುದು. ನೀವು ಉಚಿತವಾಗಿ ಮಾರ್ಕೆಟಿಂಗ್ ಮಾಡಲು ಸಾಮಾಜಿಕ ಜಾಲತಾಣಗಳನ್ನು, ನಿಮ್ಮ ಸ್ನೇಹಿತರನ್ನು ಬಳಸಿಕೊಳ್ಳಬಹುದು.

Business Ideasget profitsmall businessಬಂಡವಾಳ ಹೂಡಿಕೆವ್ಯಾಪಾರ