Actor Shakti Prasad: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಶಕ್ತಿ ಪ್ರಸಾದ್ ಕುಟುಂಬಕ್ಕೆ ’ಸರ್ಜಾ’ ಸರ್ ನೇಮ್ ಇಟ್ಕೊಂಡಿದ್ದು ಯಾಕೆ ಗೊತ್ತಾ? ಅಯ್ಯೋ ನಿಜಕ್ಕೂ ಗ್ರೇಟ್ ಕಣ್ರಿ!

Actor Shakti Prasad: ಕನ್ನಡ ಚಿತ್ರರಂಗವನ್ನು ಹಲವು ಕಲಾವಿದರು ಆಳಿ ಹೋಗಿದ್ದಾರೆ. ಇಂದಿಗೂ ನೆನಪಿನಲ್ಲಿರುವ ಖಳನಟರೆಂದರೆ ಅದು ವಜ್ರಮುನಿ, ಸುಧೀರ್, ಮುಖ್ಯಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ್, ಧೀರೇಂದ್ರ ಗೋಪಾಲ್, ಮಸ್ಸೂರಿ ಕೃಷ್ಣಮೂರ್ತಿ ಹಲವರನ್ನು ನಾವು ಸ್ಮರಿಸಿಕೊಳ್ಳಬಹುದು. ಇಂತಹ ಖಳನಟರಾಗಿ ತೆರೆಯ ಮೇಲೆ ಮಿಂಚಿದವರಲ್ಲಿ ಶಕ್ತಿ ಪ್ರಸಾದ ಕೂಡ ಒಬ್ಬರು. ಇವರು ನಮ್ಮ ಕನ್ನಡದ ಕಂಠಿರವ, ನಟಸಾರ್ವಭೌಮ ಡಾ.ರಾಜ್ ಕುಮಾರ್ (Dr. Rajkumar) ಅವರ ಜೊತೆಯೇ ಸುಮಾರು ೨೫ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.

ಶಕ್ತಿ ಪ್ರಸಾದ್ ಅವರ ಮೂಲ ಹೆಸರು ರಾಮಸ್ವಾಮಿ. ಹಾಗಾದರೆ ಶಕ್ತಿ ಪ್ರಸಾದ್ (Shakti prasad) ಎನ್ನುವ ಹೆಸರು ಹೇಗೆ ಬಂತು? ಯಾರು ಈ ರೀತಿ ನಾಮಕರಣ ಮಾಡಿದರು ಎಂದು ತಿಳಿದುಕೊಳ್ಳಬೇಕಾಗುತ್ತದೆ. ರಾಮಸ್ವಾಮಿಯವರು ತುಮಕೂರು ಜಿಲ್ಲೆಯ ಮಧುಗಿರಿಯವರು. ಇವರು ಬಾಲ್ಯದಿಂದಲೂ ಗರಡಿ ಮನೆಗಳಿಗೆ ತೆರಳಿ ತಮ್ಮ ದೇಹವನ್ನು ಕಟುಮಸ್ತಾಗಿ ರೂಪಿಸಿಕೊಂಡಿದ್ದರು. ರಾಮಸ್ವಾಮಿ ಅವರು ಬೆಂಗಳೂರಿನ ಚಾಮರಾಜಪೇಟೆಯ ಹೈಸ್ಕೂಲಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರನ್ನು ಎಲ್ಲರೂ ದೈಹಿಕ ಶಿಕ್ಷಕರು ಎಂದೇ ಕರೆಯುತ್ತಿದ್ದರು. ಯಾಕೆಂದರೆ ಸಮಯ ಸಿಕ್ಕಿದಾಗಲೆಲ್ಲ ತಮ್ಮ ವಿದ್ಯಾರ್ಥಿಗಳಿಗೆ ವ್ಯಾಯಾಮ ಹೇಳಿಕೊಡುತ್ತಿದ್ದರು.

ರಾಮಸ್ವಾಮಿಯವರಿಗೆ ತಮ್ಮ ತಂದೆಯ ಪ್ರಭಾವದಿಂದ ನಾಟಕಗಳಲ್ಲಿ ಪಾತ್ರ ನಿರ್ವಹಿಸುವ ಆಸಕ್ತಿಯೂ ಇತ್ತು. ಒಂದು ದಿನ ಟಿಪ್ಪು ಸುಲ್ತಾನ (Tippu sultan) ನಾಟಕದಲ್ಲಿ ಟಿಪ್ಪುವಿನ ಪಾತ್ರವನ್ನು ಅದ್ಬುತವಾಗಿ ಅಭಿನಯಿಸಿದ್ದರು. ಇದನ್ನು ನೋಡಿದ ಕೋರಾ ಸೀತಾರಾಮ ಶಾಸ್ತ್ರಿಗಳು (Sitaram Shastri) ರಾಮಸ್ವಾಮಿಯವರನ್ನು ಮದ್ರಾಸಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಅಲ್ಲಿ ಕರಗಶಕ್ತಿ ಎನ್ನುವ ಸಿನೆಮಾ ನಿರ್ಮಾಣವಾಗುತ್ತಿತ್ತು. ರಾಮಸ್ವಾಮಿ ಅವರಿಗೆ ಈ ಅವಕಾಶ ಕೈ ತಪ್ಪಿ ಹೋಗುತ್ತದೆ. ಇದನ್ನೂ ಓದಿ: Weekend with Ramesh: ನಿಜಕ್ಕೂ ಸಾಧಕರ ಸೀಟ್ನಲ್ಲಿ ರಮೇಶ್ ಜೊತೆ ಕುಳಿತುಕೊಳ್ಳಲು ಆ ಇಬ್ಬರು ಸಾಧಕರಿಗೆ ಇರುವಷ್ಟು ಅರ್ಹತೆ ಬೇರೆ ಯಾರಿಗೂ ಇಲ್ಲ; ಅವರು ಯಾರು ಗೊತ್ತೆ?

ಇದೇ ಸಂದರ್ಭದಲ್ಲಿ ಕೂರ ಸೀತರಾಮ ಶಾಸ್ತ್ರಿಯವರಿಗೆ ತಮ್ಮ ತಾಯಿಯ ಶಕ್ತಿ ಹಾಗೂ ಚೌಡೇಶ್ವರಿ ದೇವಿಯ ಪ್ರಸಾದ ಸೇರಿಸಿ ಶಕ್ತಿ ಪ್ರಸಾದ್ ಎಂದು ಹೆಸರಿಡುತ್ತಾರೆ. ಅಂದಿನಿಂದ ರಾಮಸ್ವಾಮಿ ಅವರು ಶಕ್ತಿ ಪ್ರಸಾದ್ ಆಗಿ ಬದಲಾಗುತ್ತಾರೆ. ಇದನ್ನೂ ಓದಿ: Swara Bhaskar Marriage: ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ’ಭಾಯಿ ಭಾಯಿ’ ಎಂದು ಕರೆದ ಫಹದ್ ಅವರನ್ನೇ ಮದುವೆ ಆದ ಸ್ವರ ಭಾಸ್ಕರ್; ಸಹೋದರನನ್ನ ಪತಿಯಾಗಿಸಿಕೊಳ್ಳುವ ಅನಿವಾರ್ಯತೆ ಇತ್ತಾ ಎಂದ ನೆಟ್ಟಿಗರು!

ಹಾಗಾದರೆ ಇವರ ಕುಟುಂಬಕ್ಕೆ ಸರ್ಜಾ (Sarja) ಎನ್ನುವ ಹೆಸರು ಹೇಗೆ ಬಂದಿತು ಎನ್ನುವ ಕುತೂಹಲ ನಿಮ್ಮನ್ನು ಕಾಡುತ್ತ ಇರಬಹುದು. ಈಗ ಅದನ್ನು ಹೇಳುತ್ತೇವೆ. ಪಾಳೆಗಾರ ಸರ್ಜಾನಾಯಕನ ಕುಟುಂಬಕ್ಕೂ ಹಾಗೂ ಶಕ್ತಿ ಪ್ರಸಾದ್ ಅವರ ಪೂರ್ವಜರಿಗೂ ಉತ್ತಮ ಸಂಬಂಧವಿತ್ತು. ಹೀಗಾಗಿ ಈ ಹೆಸರನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಜಾ ಎನ್ನುವ ಹೆಸರನ್ನು ತಾವೇ ಇಟ್ಟುಕೊಂಡಿದ್ದಾರೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ದ್ರುವ ಸರ್ಜಾ ಹೀಗೆ ಮನೆತನದ ಹೆಸರನ್ನು ಉಳಿಸಿಕೊಂಡು ಹೋಗುವ ಜೊತೆ ಬೆಳೆಸುತ್ತಲೂ ಇದ್ದಾರೆ.

arjun sarjachiranjeevi sarjaKannada Filmsarja familyshakti prasadvillonಶಕ್ತಿ ಪ್ರಸಾದ್