Summer Tips: ಸೆಕೆಯಿಂದ ರಾತ್ರಿ ಇಡಿ ಮಲಗದೆ ಇರುವವರಿಗೆ ಇಲ್ಲಿದೆ ನೋಡಿ ಸುಖನಿದ್ರೆ ಪಡೆದುಕೊಳ್ಳಲು ಟಿಪ್ಸ್!

Summer Tips: ಈ ಬಾರಿಯ ಬೇಸಿಗೆಗಾಲ ಎನ್ನುವುದು ಸಾಕಷ್ಟು ದೀರ್ಘಕಾಲದಿಂದ ಜನರನ್ನ ಪರಿತಪಿಸುವಂತೆ ಮಾಡುತ್ತಿದ್ದು ಇನ್ನೂ ಕೂಡ ಇದು ದೀರ್ಘವಾಗಿ ಮುಂದುವರೆಯುವಂತಹ ಸಾಧ್ಯತೆ ಇದೆ ಎಂಬುದನ್ನು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಈ ಸೆಕೆಯಿಂದ ಬಳಲುತ್ತಿರುವಂತಹ ನಾಗರಿಕರು ಈ ಸುದ್ದಿಯಿಂದ ಹೈರಾಣಾಗಿದ್ದಾರೆ. ಇನ್ನು ಮೇ ತಿಂಗಳು ಪ್ರಾರಂಭವಾಗಿಲ್ಲ ಆಗಲೇ ಇಷ್ಟೊಂದು ಸೆಕೆ ಇದೆ, ಇನ್ಮುಂದೆ ಹೇಗೆ ಎನ್ನುವುದಾಗಿ ಎಲ್ಲರೂ ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ. ಎಸಿ ಇರುವವರ ಮನೆಯಲ್ಲಿ ಓಕೆ ಆದರೆ ಎಲ್ಲರ ಮನೆಯಲ್ಲಿ ಕೂಡ ಎಸಿ ಇರೋದಕ್ಕೆ ಸಾಧ್ಯವಿಲ್ಲ ಅಂತವರ ಮನೆಯಲ್ಲಿ ನರಕ ಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನವಿಡೀ ಕೆಲಸ ಮಾಡಿ ರಾತ್ರಿ ಬಂದು ನಿದ್ದೆ ಮಾಡುವಂತಹ ಉದ್ಯೋಗಿಗಳಿಗೆ ರಾತ್ರಿಯಲ್ಲಿ ಕೂಡ ಸುಖ ನಿದ್ದೆ ಸಿಗ್ತಾ ಇಲ್ಲ ಅನ್ನೋದು ಬೇಸರದ ವಿಚಾರವಾಗಿದೆ ಆದರೆ ನೀವು ಕೂಡ ಇವರಲ್ಲಿ ಒಬ್ಬರಾಗಿದ್ದರೆ ಇನ್ಮುಂದೆ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಬೇಸಿಗೆಯ ರಾತ್ರಿಯಲ್ಲಿ ಕೂಡ ಸುಖನಿದ್ದೆಯನ್ನು ಪಡೆದುಕೊಳ್ಳಬಹುದು.

ಬೇಸಿಗೆಯಲ್ಲಿ ರಾತ್ರಿ ಸುಖ ನಿದ್ರೆಯನ್ನು ಪಡೆದುಕೊಳ್ಳಲು ಇಲ್ಲಿದೆ ನೋಡಿ ಟಿಪ್ಸ್!

  • ಮಲಗುವುದಕ್ಕಿಂತ ಸ್ವಲ್ಪ ಹೊತ್ತಿನ ಮುಂಚೆ ನಿಮ್ಮ ಇಡೀ ಕೋಣೆಯನ್ನು ತಂಪು ಮಾಡುವುದಕ್ಕಾಗಿ ಫ್ಯಾನ್ ಅಥವಾ ಕೂಲರ್ ಅನ್ನೋ ಆನ್ ಮಾಡಿಟ್ಟುಕೊಳ್ಳಿ. ಇದರಿಂದಾಗಿ ನೀವು ಮಲಗುವ ಸಂದರ್ಭದಲ್ಲಿ ಕೋಣೆ ಸಾಮಾನ್ಯಕ್ಕಿಂತ ತಂಪಾಗಿರುತ್ತದೆ.
  • ಮಲಗುವುದಕ್ಕಿಂತ ಮುಂಚೆ ಕೋಣೆಯ ಲೈಟ್ ಅನ್ನು ಆಫ್ ಮಾಡಿ ಹಾಗೂ ನೀವು ಮಲಗುವಂತಹ ಹಾಸಿಗೆ ಉತ್ತಮ ಗುಣಮಟ್ಟದ್ದಾಗಿರಬೇಕು ಎನ್ನುವುದನ್ನ ಪ್ರಮುಖವಾಗಿ ಖಚಿತಪಡಿಸಿಕೊಳ್ಳಿ. ಉತ್ತಮ ಗುಣಮಟ್ಟದ ಹಾಸಿಗೆ ಎಂದರೆ ನಿಮ್ಮ ನಿದ್ರೆ ಚೆನ್ನಾಗಿ ಬರುವುದು.
  • ಬೆಳಗ್ಗೆಯಿಂದ ಕೆಲಸ ಮಾಡಿರುವ ಕಾರಣದಿಂದಾಗಿ ಮಲಗು ಹೊತ್ತಿನಲ್ಲಿ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿರಬಹುದು ಹೀಗಾಗಿ ಇದರ ಕಾರಣದಿಂದಾಗಿ ನಿಮಗೆ ನಿದ್ರೆ ಬಾರದೆ ಇರುವ ಸಾಧ್ಯತೆ ಇರುತ್ತದೆ ಹೀಗಾಗಿ ಮಲಗೋದಕ್ಕಿಂತ ಮುಂಚೆ ತಣ್ಣೀರಿನಿಂದ ಸ್ನಾನ ಮಾಡಿ ಮಲಗಿ. ಖಂಡಿತವಾಗಿ ಉತ್ತಮ ನಿದ್ರೆ ಸಿಗುತ್ತದೆ.
  • ರಾತ್ರಿಯ ಸಂದರ್ಭದಲ್ಲಿ ಹೆಚ್ಚು ಮಸಾಲೆ ಇರುವಂತಹ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ನಿದ್ರೆಗೆ ಅದು ಹಾನಿ ಮಾಡಬಹುದಾಗಿದೆ. ಹೀಗಾಗಿ ಕಡಿಮೆ ಮಸಾಲೆ ಇರುವಂತಹ ಮಿತವಾಗಿರುವ ಆಹಾರವನ್ನು ಬಳಸುವುದನ್ನ ಅಭ್ಯಾಸ ಮಾಡಿಕೊಳ್ಳಿ.
  • ಮಲಗೋದಕ್ಕಿಂತ ಮುಂಚೆ ಈ ಬೇಸಿಗೆ ಕಾಲದಲ್ಲಿ ಇಡೀ ದಿನ ನೀವು ಇಡೀ ದಿನ ನೀವು ನೀರನ್ನು ಕುಡಿಯುತ್ತಲೇ ಇರಿ. ರಾತ್ರಿಯ ಸಂದರ್ಭದಲ್ಲಿ ನೀರನ್ನು ಕುಡಿಯುವುದು ಕಡಿಮೆ ಮಾಡಿ ಇಲ್ಲವಾದರೆ ರಾತ್ರಿ ಇಡಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಎದ್ದು ಹೋಗಬೇಕಾಗುತ್ತಲೇ ಇರಬೇಕಾಗುತ್ತದೆ.
  • ರಾತ್ರಿಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ನಿದ್ದೆ ಬರುತ್ತಿಲ್ಲ ಅಂತ ಮನೋರಂಜನೆಗಾಗಿ ಮೊಬೈಲ್ ನೋಡ್ತಾರೆ. ಆದಷ್ಟು ರಾತ್ರಿಯ ಸಂದರ್ಭದಲ್ಲಿ ಮೊಬೈಲ್ ಅಥವಾ ಸ್ಕ್ರೀನ್ ನೋಡುವುದನ್ನ ಕಡಿಮೆ ಮಾಡಿ ಇದರಿಂದಾಗಿ ನಿದ್ರೆ ಜಾಸ್ತಿ ಸಿಗುತ್ತದೆ.
  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಎದ್ದೇಳುವಂತಹ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ನಿಮ್ಮ ನಿದ್ರಾ ಸೈಕಲ್ ಅನ್ನು ಉತ್ತಮ ರೀತಿಯಲ್ಲಿ ನಡೆಯುವಂತೆ ಮಾಡುತ್ತದೆ.
Summer Tips