T 20: ಕಿಂಗ್ ಕೊಹ್ಲಿ ಶತಕಕ್ಕೆ ನಿನ್ಗೆ ನೀನೇ ಸಾಟಿ ಗುರು ಅಂದ ಕ್ರಿಕೆಟ್ ಪ್ರಿಯರು!

T 20: ಸಾಕಷ್ಟು ದಿನಗಳ ಹಿಂದೆ ಗಮನಿಸಿದರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕನಸನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿತ್ತು. ಆದರೆ ಈಗ ನಿನ್ನೆ ನಡೆದಿರುವಂತಹ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ ಗೆಲುವನ್ನು ದಾಖಲಿಸಿದ್ದು 10ನೇ ಸ್ಥಾನದಿಂದ ನೇರವಾಗಿ ಏಳನೇ ಸ್ಥಾನಕ್ಕೆ ಜಂಪ್ ಮಾಡಿದೆ. ಈ ಮೂಲಕ ತನ್ನ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗಬೇಕು ಎನ್ನುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಈ ಟೂರ್ನಮೆಂಟ್ ಅಲ್ಲಿ ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಪರವಾಗಿ ಅತ್ಯಂತ ಹೆಚ್ಚು ಗಳಿಸಿರುವಂತಹ ಆಟಗಾರನಾಗಿ ಕಾಣಿಸಿಕೊಳ್ಳುವ ಮೂಲಕ ಆರೆಂಜ್ ಕ್ಯಾಪ್ ಅನ್ನು ಕೂಡ ತಾವೇ ಮುಡಿಗೇರಿಸಿಕೊಂಡಿದ್ದಾರೆ. ಅದರ ಜೊತೆಗೆ ನಿನ್ನೆ ನಡೆದಿರುವಂತಹ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ 42 ರನ್ ಗಳಿಸಿ ಗೆಲುವಿನ ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದ್ದು ಇದೇ ಸಂದರ್ಭದಲ್ಲಿ ಒಂದು ರೆಕಾರ್ಡನ್ನು ಅನ್ನು ಕೂಡ ಕ್ರಿಯೇಟ್ ಮಾಡಿದ್ದಾರೆ.

ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದ ಕಿಂಗ್ ಕೊಹ್ಲಿ!

ಈಗಲೂ ಕೂಡ ಯುವ ಆಟಗಾರರಿಗೆ ಸರಿಹೊಂದುವ ರೀತಿಯಲ್ಲಿ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿರುವುದು ಐಪಿಎಲ್ ನಲ್ಲಿ ಕೂಡ ಮುಂದುವರೆದಿದೆ. ಈ ಬಾರಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಅಂತಹ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಗುಜರಾತ್ ತಂಡದ ವಿರುದ್ಧ 6 ಗಳಿಸಿದ ನಂತರ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರು 12500 ರನ್ ಗಳನ್ನ ಪೂರೈಸಿರುವಂತಹ ನಾಲ್ಕನೇ ಆಟಗಾರ ಎನ್ನುವಂತಹ ಖ್ಯಾತಿಗೆ ಒಳಗಾಗುತ್ತಾರೆ.

ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಆಡಿರುವಂತಹ 349 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ರವರು 9 ಶತಕ ಹಾಗೂ 91 ಆರ್ಧಶತಕಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಟಿ 20 ಫಾರ್ಮ್ಯಾಟ್ ನಲ್ಲಿ 12500 ರನ್ಗಳನ್ನ ಪೂರೈಸಿರುವ ಅಂತಹ ವಿಶ್ವದ ನಾಲ್ಕನೇ ಬ್ಯಾಟ್ಸ್ಮನ್ ಎನ್ನುವಂತಹ ಹೆಗ್ಗಳಿಕೆಗೆ ನಮ್ಮ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕಿಂತಲೂ ಮುಂಚೆ ಯಾರೆಲ್ಲಾ ಈ ದಾಖಲೆಯನ್ನು ಮಾಡಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಮೊದಲನೇದಾಗಿ ಈ ಸ್ಥಾನವನ್ನು ದೈತ್ಯ ಕ್ರಿಸ್ಗೆಲ್ ರವರು 14562 ರನ್ಗಳನ್ನು ಬಾರಿಸುವ ಮೂಲಕ ತಮ್ಮ ಟಾಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. 13360 ರನ್ಗಳನ್ನ ಬಾರಿಸುವ ಮೂಲಕ ಪಾಕಿಸ್ತಾನ ಮೂಲದ ಶೋಯಬ್ ಮಲ್ಲಿಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೂ ಮೂರನೇ ಸ್ಥಾನದಲ್ಲಿ ಪೊಲಾರ್ಡ್ 12900 ರನ್ಗಳನ್ನು ಬಾರಿಸುವ ಮೂಲಕ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. 12536 ರನ್ಗಳನ್ನು ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಈಗ ಸದ್ಯದ ಮಟ್ಟಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ ಈ ಎಲ್ಲ ದಾಖಲೆಗಳನ್ನು ವಿರಾಟ್ ಕೊಹ್ಲಿ ಸದ್ಯದಲ್ಲೇ ಮುರಿಯೋದು ಕನ್ಫರ್ಮ್.

T 20