Technology: ವಾಟ್ಸಪ್ ನಲ್ಲಿಯೂ ಸುಲಭವಾಗಿ ಬಳಸಿ ಕನ್ನಡ ಭಾಷೆ; ಹೇಗೆ ಗೊತ್ತಾ? ಇಲ್ಲಿದೆ ಟ್ರಿಕ್ಸ್!

Technology: ಮೊಬೈಲ್ ಎಲ್ಲರ ಕೈಗೆ ಬಂದ ಕಾಲದಲ್ಲಿ ಎನ್ನನ್ನೇ ಆದರೂ ಇಂಗ್ಲಿಷ್ನಲ್ಲಿಯೇ ಬರೆಯಬೇಕಿತ್ತು. ಮತ್ತು ಕೇವಲ ಎಸ್ಎಂಎಸ್ ಮಾಡಲು ಮಾತ್ರ ಅವಕಾಶ ಇತ್ತು. ಆಗ ಟೆಲಿಕಾಂ ಕಂಪನಿಗಳು ಈ ಅವಕಾಶ ಬಳಸಿಕೊಂಡು ಸಹ ಹಣ ಗಳಿಸಿವೆ. ಕಾರಣ ದಿನಕ್ಕೆ ಇಷ್ಟೇ ಎಸ್ಎಂಎಸ್ ಮಾತ್ರ ಉಚಿತವಾಗಿ ಮಾಡಬಹುದು. ಅದಕ್ಕಿಂತ ಜಾಸ್ತಿ ಮಾಡಿದರೆ ಪ್ರತಿ ಎಸ್ಎಂಎಸ್ಗೆ ಚಾರ್ಜ್ ಮಾಡುತ್ತಿದ್ದರು. ಈಗ ಸಮಸಯ ಬದಲಾಗಿದೆ. ಎಲ್ಲರೂ ವಾಟ್ಸಪ್ ಅಪ್ಲಿಕೇಶನ್ನಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ. ಇದಕ್ಕೆ ನೆಟ್ ಇದ್ದರೆ ಸಾಕು. ಎಷ್ಟು ಬೇಕಾದರೂ ಸಂದೇಶ ಕಳುಹಿಸಬಹುದು. ಅಲ್ಲದೆ ನೀವು ಫೋಟೋ, ವಿಡಿಯೋ ಎಲ್ಲವನ್ನು ಹಂಚಿಕೊಳ್ಳಬಹುದು. ಹಾಗಾಗಿಯೇ ಪ್ರತಿಯೊಬ್ಬರೂ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ.

ಬಳಕೆದಾರರ ಸ್ನೇಹಿಯಾಗಿರುವ ವಾಟ್ಸಪ್ ಬಳಕೆದಾರರ ಸಂಖ್ಯೆ ೨ ಬಿಲಿಯನ್ ದಾಟಿದೆ. ಭಾರತದಲ್ಲಿಯೇ ಸುಮಾರು ೫೫೦ ಮಿಲಿಯನ್ ಜನರು ವಾಟ್ಸಪ್ ಬಳಸುತ್ತಿದ್ದಾರೆ. ಕಾಲಕಾಲಕ್ಕೆ ವಾಟ್ಸಪ್ ಹೊಸಹೊಸ ಫೀಚರ್ಗಳನ್ನು ನೀಡುತ್ತ ಬಂದಿದೆ. ದೇಶದ ನೆಚ್ಚಿನ ಚಾಟ್ ಅಪ್ಲಿಕೇಶನ್ ಆಗಿರುವ ವಾಟ್ಸಪ್ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಬೆಂಗಾಲಿ, ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಉರ್ದು, ಗುಜರಾತಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಸಂದೇಶ ಕಳುಹಿಸಬಹುದು. ಇದರಲ್ಲಿ ವಾಟ್ಸಪ್ನಲ್ಲಿ ಕನ್ನಡ ಭಾಷೆ ಬಳಸುವುದು ಹೇಗೆ ಎನ್ನುವದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: LIC:2023 ರಲ್ಲಿ ಹೂಡಿಕೆ ಮಾಡಬೇಕೆ? ಇಲ್ಲಿದೆ ನೋಡಿ ಬೆಸ್ಟ್ ಎಲ್ ಐ ಸಿ ಪಾಲಿಸಿಗಳು; ಇಲ್ಲಿ ಇನ್ವೆಸ್ಟ್ ಮಾಡಿದ್ರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ?

ಕನ್ನಡ ಸೆಟ್ಟಿಂಗ್ ಮಾಡೋದು ಹೇಗೆ?
ಮೊದಲು ವಾಟ್ಸಪ್ ಅಪ್ಲಿಕೇಶನ್ ಒಪನ್ ಮಾಡಬೇಕು. ಅಲ್ಲಿ ಮೆನು ಬಟನ್ ಪ್ರೆಸ್ ಮಾಡಬೇಕು. ಮೆನುವಿನಲ್ಲಿ ಸೆಟ್ಟಿಂಗ್ಗೆ ಹೋಗಬೇಕು. ಸೆಟ್ಟಿಂಗ್ ಹೋದಾಗ ಅಲ್ಲಿ ಚಾಟ್ ಅಪ್ಲಿಕೇಶನ್ ತೆರೆಯಬೇಕು. ಅಲ್ಲಿರುವ ಕನ್ನಡ ಭಾಷೆಯ ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಡಬೇಕು.

ಹೀಗೆ ಆಯ್ಕೆ ಮಾಡುವುದರಿಂದ ಕನ್ನಡ ಭಾಷೆಯಲ್ಲಿ ವಾಟ್ಸಪ್ ಬಳಸಬಹುದಾಗಿದೆ. ಆದರೂ ಬಳಕೆದಾರರೂ ತೀರಾ ಮೊದಲ ನಿಯಮವನ್ನು ಗಮನಿಸಬೇಕಾಗುತ್ತದೆ. ಮೊದಲಿಗೆ ವಾಟ್ಸಪ್ ಮೊಬೈಲ್ ಭಾಷೆಯನ್ನು ಅನುಸರಿಸುತ್ತದೆ. ಹಾಗಾಗಿ ನೀವು ಮೊಬೈಲ್ ಖರೀದಿಯ ನಂತರ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೂ ನಿಮ್ಮ ಮೊಬೈಲ್ ಆಂಡ್ರಾಯ್ಡ ಹಾಗೂ ಐಓಎಸ್ನಲ್ಲಿ ಕಾರ್ಯ ನಿರ್ವಹಿಸುತ್ತದೆಯೇ ಎನ್ನುವದರ ಆದಾರದ ಮೇಲೆ ನಿಂತಿದೆ.

ಆಂಡ್ರಾಯ್ಡ್ ನಲ್ಲಿ ಕನ್ನಡ ಭಾಷೆಯನ್ನು ಸೆಟ್ ಮಾಡಿಕೊಳ್ಳುವುದು ಹೇಗೆ?
ಮೊದಲು ವಾಟ್ಸಪ್ ಅಪ್ಲಿಕೇಶನ್ ಆನ್ ಮಾಡಬೇಕು. ಅಲ್ಲಿ ಸೆಟ್ಟಿಂಗ್ಗೆ ತೆರಳಬೇಕು. ಅಲ್ಲಿ ಮುಕ್ತ ಭಾಷೆಗಳು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಇರುವ ಭಾಷೆಗಳ ಪಟ್ಟಿಯಲ್ಲಿ ನೀವು ಕನ್ನಡವನ್ನು ಆಯ್ಕೆ ಮಾಡಿಕೊಂಡರೆ ವಾಟ್ಸಪ್ನಲ್ಲಿ ಕನ್ನಡವನ್ನು ಬಳಕೆ ಮಾಡಬಹುದುದಾಗಿದೆ. ಇದನ್ನೂ ಓದಿ:Scholarship:ಈ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತೆ 25೦೦ ರೂ. ನಿಂದ 11,೦೦೦ ರೂ. ಪ್ರತಿ ತಿಂಗಳ; ಯಾವುದು ಆ ಸ್ಕಾಲರ್ ಶಿಪ್ ಗೊತ್ತಾ?

Technologywhatsapp new features