Telugu Heroine:ನಟಿಯರನ್ನು ಅಷ್ಟೇ ರೂಮಿಗೆ ಕರೆಯುವುದಿಲ್ಲ, ನಟಿಯರು ಕೂಡ ಆ ಕೆಲಸ ಮಾಡುತ್ತಾರೆ ಎಂದು ಒಪ್ಪಿಕೊಂಡ ನಟಿ; ತಡೆಯಲು ಏನು ಮಾಡಬೇಕಂತೆ ಗೊತ್ತೇ??

Telugu Heroine: ಚಿತ್ರರಂಗದಲ್ಲಿ ನಡೆಯುವ ಕ್ಯಾಸ್ಟಿಂಗ್ ಕೌಚ್ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ, ಈಗ ಮೀ ಟು ಬಂದ ನಂತರ ಹಲವರು ಈ ವಿಚಾರಗಳ ಬಗ್ಗೆ ಓಪನ್ ಅಪ್ ಆಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿರುವ ನಿರೂಪಕಿ ಹಾಗೂ ನಟಿ ವಿಷ್ಣುಪ್ರಿಯಾ ಅವರು ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಷ್ಣುಪ್ರಿಯಾ ಭಿಮಿನೇನಿ ಅವರು ಹಲವು ಶೋಗಳು, ಇವೆಂಟ್ ಗಳನ್ನು ನಿರೂಪಣೆ ಮಾಡುತ್ತಾರೆ. ಇವರು ಮೊದಲಿಗೆ ಹೀರೋಯಿನ್ ಆಗಬೇಕು ಎಂದುಕೊಂಡು ಚಿತ್ರರಂಗಕ್ಕೆ ಬಂದರು.

ಆದರೆ ಇವರು ನಟಿಸಿದ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಹಾಗಾಗಿ ನಿರೂಪಣೆಯ ಕ್ಷೇತ್ರಕ್ಕೆ ಬಂದರು, ಇಲ್ಲಿಗೆ ಬಂದ ನಂತರ ಹಲವು ಶೋಗಳು ಹಾಗೂ ಇವೆಂಟ್ ಗಳ ಅವಕಾಶ ಸಿಗುತ್ತಿದೆ. ಅಷ್ಟೇ ಅಲ್ಲದೆ, ಸಿನಿಮಾಗಳು ಹಾಗೂ ಸ್ಪೆಷಲ್ ಹಾಡುಗಳ ಡ್ಯಾನ್ಸ್ ಅವಕಾಶವೂ ಬರುತ್ತಿದೆ. ಇತ್ತೀಚೆಗೆ ವಿಷ್ಣುಪ್ರಿಯಾ ಅವರು ಯೂಟ್ಯೂಬ್ ನಲ್ಲಿ ಒಂದು ಸಂದರ್ಶನ ನೀಡಿದ್ದು, ಅದರಲ್ಲಿ ಮಾತನಾಡುತ್ತಾ ಕ್ಯಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. “ಕ್ಯಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ಇರುತ್ತದೆ. ಆದರೆ ಕಲಾವಿದರು ಎಲ್ಲರಿಗೂ ಗೊತ್ತಿರುವುದರಿಂದ ಅವರ ವಿಚಾರ ಬೇಗ ಹೊರಗೆ ಬರುತ್ತದೆ.

ಸಿನಿಮಾಗಳಲ್ಲಿ ಅವಕಾಶ ಕೊಡಲು ಕಮಿಟ್ಮೆಂಟ್ ಕೇಳುತ್ತಾರೆ. ಆದರೆ ಕಮಿಟ್ಮೆಂಟ್ ಕೊಡುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಕೆರಿಯರ್ ಆರಂಭದಲ್ಲಿ ನನಗೂ ಕಮಿಟ್ಮೆಂಟ್ ಕೇಳಿದ್ದರು, ಆದರೆ ನಾನು ಒಪ್ಪಲಿಲ್ಲ. ನನಗೆ ನನ್ನ ಟ್ಯಾಲೆಂಟ್ ಅವಕಾಶ ಸಿಗಲಿ ಎನ್ನುವ ಮನಸ್ಸಿತ್ತು. ಹಾಗಾಗಿ ನಾನು ಒಪ್ಪಲಿಲ್ಲ. ಎಲ್ಲಾ ಗಂಡಸರು ತಮ್ಮ ಹಾರ್ಮೋನ್ ಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು..” ಎಂದಿದ್ದಾರೆ. ಆಗ ಇಂಟರ್ವ್ಯೂ ಮಾಡುತ್ತಿದ್ದ ನಿರೂಪಕ, ಈಗ ಹೆಂಗಸರಿಂದ ಗಂಡಸರು ಕೂಡ ಕ್ಯಾಸ್ಟಿಂಗ್ ಕೌಚ್ ಅನುಭವಿಸುತ್ತಿದ್ದಾರೆ ಎಂದಿದ್ದು ಆಗ ವಿಷ್ಣುಪ್ರಿಯಾ ಹೆಂಗಸರು ಕೂಡ, ತಮ್ಮ ಹಾರ್ಮೋನ್ ಗಳನ್ನು ಕಂಟ್ರೋಲ್ ಮಾಡಿಕೊಳ್ಳಬೇಕು..ಎಂದು ಹೇಳಿ ನಕ್ಕಿದ್ದಾರೆ.

Casting couchHeroinesouth actresstelugu film industryVishnupriya