Temple: ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ಈ ದೇವಾಲಯಕ್ಕೆ ಹಿಂದುಗಳಿಗಿಂತಲೂ ಮುಸ್ಲಿಂ ದಂಪತಿಗಳೇ ಹೆಚ್ಚು ತಲೆಬಾಗುತ್ತಾರೆ ಗೊತ್ತೇ, ಎಲ್ಲಿದೆ ಗೊತ್ತೇ ಈ ಶಕ್ತಿಶಾಲಿ ದೇವಾಲಯ?

Temple: ಕೆಲವೊಮ್ಮೆ ಎಷ್ಟೇ ವೈದ್ಯಕೀಯ ಚಿಕಿತ್ಸೆಗಳು, ತಪಾಸಣೆಗಳು ಮಾಡಲು ಸಾಧ್ಯವಾಗದೆ ಇರುವ ಪವಾಡವನ್ನೂ ಕೂಡ ಕೆಲವು ದೇವರ ಮೇಲಿನ ನಂಬಿಕೆ ಮಾಡಿಬಿಡುತ್ತದೆ. ಉದಾಹರಣೆಗೆ ಸಾಕಷ್ಟು ಜನ ಸಂತಾನ ಪ್ರಾಪ್ತಿ ಇಲ್ಲದೆ ನೋವನ್ನು ಅನುಭವಿಸುತ್ತಿರುತ್ತಾರೆ ಆದರೆ ಕೆಲವು ಶಕ್ತಿ ಶಾಲಿ ದೇವಾಲಯಗಳಿಗೆ ಭಕ್ತಿಯಿಂದ ಬೇಡಿಕೊಂಡರೆ, ಹೆಣ್ಣಿನ ಮಡಿಲು ತುಂಬುತ್ತದೆ. ಜನರ ಮನಸ್ಸಿನಲ್ಲಿ ಇರುವ ಸಂತಾನ ಬೇಕು ಎನ್ನುವ ಬಯಕೆಯನ್ನು ಈಡೇರಿಸುವ ಸ್ಥಳದ ಕಚ್ ನಲ್ಲಿ ಇರುವ ಮೊಘಲ್ ಧಾಮ್.

ಈ ದೇವಸ್ಥಾನದ ವಿಶೇಷತೆಯೇ ಹಾಗೆ. ಕಚ್ ನ ಭಚೌ ತಾಲೂಕಿನ ಕಬರಾವ್ ಗ್ರಾಮದ ಮಾ ಮೊಘಲ್ ದೇವಾಲಯದಲ್ಲಿ ಇರುವ ದೇವಿಯನ್ನು ನಂಬಿ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ ಈ ದೇವಾಲಯಕ್ಕೆ ಭಾನುವಾರದಂದು ಸಾಕಷ್ಟು ಭಕ್ತಾದಿಗಳು ಆಗಮಿಸುತ್ತಾರೆ.

ಮುಸ್ಲಿಂ ದಂಪತಿಗಳೂ ಬರುತ್ತಾರೆ

ಇಲ್ಲಿನ ವಿಶೇಷತೆ ಅಂದ್ರೆ ಈ ದೇವಿ ಸಂತಾನ ಪ್ರಾಪ್ತಿಗಾಗಿ ಬೇಡಿಕೊಂಡು ಬರುವ ಪ್ರತಿಯೊಬ್ಬರಿಗೂ ಆ ಭಾಗ್ಯವನ್ನು ಕರುಣಿಸುತ್ತಾಳೆ. ವಿಶೇಷವೆಂದರೆ ಈ ದೇವಾಲಯಕ್ಕೆ ಹಿಂದುಗಳಿಗಿಂತಲೂ ಹೆಚ್ಚಾಗಿ ಮುಸ್ಲಿಂ ದಂಪತಿಗಳು ಕೂಡ ಬಂದು ಆ ದೇವಿಯನ್ನು ನಂಬಿ ಕೈಮುಗಿದು ಸಂತಾನ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ. ದೇವರಿಗೆ ಹಿಂದು ಮುಸ್ಲಿಂ ಎನ್ನುವ ಭೇದವಿಲ್ಲ ಈ ದೇವಿಯ ದರ್ಶನ ಪಡೆದ ಹಲವು ಮುಸ್ಲಿಂ ದಂಪತಿಗಳ ಜೀವನದಲ್ಲಿಯೂ ಕೂಡ ಮಗುವಿನ ಆಗಮನವಾಗಿರುವ ಸಾಕ್ಷಿಗಳು ಇವೆ.

ದೇಶದ ಮೂಲೆ ಮೂಲೆಯಿಂದಲೂ ಕೂಡ ಈ ದೇವಿಯ ಸ್ಥಳಕ್ಕೆ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ ಮಾತಾಜಿಯ ಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಾರೆ. ಇನ್ನು ವಿಶೇಷ ಅಂದ್ರೆ ಈ ದೇವಾಲಯದಲ್ಲಿ ಒಂದೇ ಒಂದು ಕಾಣಿಕೆ ಹುಂಡಿಯೂ ಇಲ್ಲ. ದೇವಿಗೆ ಕಾಣಿಕಿಯಾಗಿ ಹಣ ನೀಡಿದರೆ ಅವರನ್ನು ತಪ್ಪಿತಸ್ಥರು ಎಂದು ಕರೆಯಲಾಗುತ್ತೆ. ಇವರಿಗೆ 18ರಿಂದ 20 ವರ್ಷಗಳ ಕಾಲ ಮಕ್ಕಳೆಲ್ಲದೆ ಕಷ್ಟ ಪಟ್ಟ ದಂಪತಿಗಳು ಕೂಡ ಈ ದೇವಿಯು ಆಶೀರ್ವಾದದಿಂದ ಮಕ್ಕಳನ್ನು ಪಡೆದಿರುವ ಘಟನೆಗಳು ನಡೆದಿದೆ.

ಹುಂಡಿಯೇ ಇಲ್ಲದ ದೇವಾಲಯ

ಮಾ ಮೊಘಲ್ ದೇವಿಗೆ ಸಲ್ಲಿಸುವ ಹರಕೆ ಎಂದರೆ ಮಗು ಹುಟ್ಟಿದ ನಂತರ ನವಜಾತ ಶಿಶುವನ್ನು ದೇವಸ್ಥಾನಕ್ಕೆ ಕರೆತಂದು ದೇವಿಯ ದರ್ಶನ ಮಾಡಿಸುವುದು. ಇನ್ನು ಇದೇ ಬರೆಯಕ್ಕೆ ಹರಕೆಯ ರೂಪದಲ್ಲಿ ದೇವರಿಗೆ ನೀಡಿದರೆ ಅದೇನಿಗೆ ಒಂದು ರೂಪಾಯಿ ಸೇರಿಸಿ ಭಕ್ತರಿಗೆ ಹಿಂತಿರುಗಿಸಿ ಕೊಡಲಾಗುತ್ತದೆ. ಜೊತೆಗೆ ಅದನ್ನು ಹೆಣ್ಣು ಮಕ್ಕಳಿಗೆ ಕೊಡುವಂತೆ ಹೇಳುತ್ತಾರೆ. ಹೀಗೆ ಸಾಕಷ್ಟು ಒಪ್ಪವಾಡ ಹೊಂದಿರುವ ಮಹಾಮುಘಲ್ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಿ.

indian templemaa moghalmuslim coupleTempleಮಾ ಮೊಘಲ್