Bank Account: ವಿಶ್ವದಲ್ಲಿ ಇದೀಗ ಎಲ್ಲ ದೇಶಗಳಲ್ಲೂ ಹಣದುಬ್ಬರ ಶುರುವಾಗಿದೆ. ಕೋವಿಡ್ ನಂತರ ಎಷ್ಟೋ ದೇಶಗಳಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ ಶ್ರೀಲಂಕಾ ಸೇರಿದಂತೆ ಹಲವು ದೇಶಗಳು ದಿವಾಳಿಯಾಗಿವೆ. ಆದರೆ ಭಾರತದಲ್ಲಿ ಮಾತ್ರ ಹಣದುಬ್ಬರ ಇದ್ದರೂ ಜನರ ಜೀವನಕ್ಕೆ ಮಾತ್ರ ಯಾವುದೇ ರೀತಿ ತೊಂದರೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರದ ನೀತಿಗಳು ಹಾಗೂ ಆರ್ಬಿಐ ಕೈಗೊಂಡ ಬಿಗಿ ಕ್ರಮಗಳು. ಹಾಗಾಗಿಯೆ ಭಾರತದಲ್ಲಿ ಬ್ಯಾಂಕುಗಳು ಇಷ್ಟು ಸದೃಢವಾಗಿವೆ. ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ತನ್ನ ರೆಪೋ ದರವನ್ನು ಏರಿಸುತ್ತ ಇರುತ್ತದೆ. ಇದು ಹಣದುಬ್ಬರ ತಡೆಯಲು ಕಾರಣವಾಗುತ್ತಿದೆ. ಇದನ್ನೂ ಓದಿ: BSNL Recharge Plan: ಹೊಸ ವರ್ಷಕ್ಕೆ ಎಲ್ಲಾ ಟೆಲಿಕಾಂ ಕಂಪನಿಗೆ ಕೊಡಲು ಟಕ್ಕರ್ ಕೊಡಲು ರೆಡಿ ಆಯ್ತು ಬಿ ಎಸ್ ಎನ್ ಎಲ್; ಇದೊಂದು ರಿಚಾರ್ಜ್ ಮಾಡಿದ್ರೆ ಒಂದು ವರ್ಷ ಚಿಂತೆಯೇ ಇಲ್ಲ, ಯಾವ ಪ್ಲಾನ್ ಗೊತ್ತೇ?
ಆರ್ ಬಿ ಐ ತನ್ನ ರೆರೋ ದರವನ್ನು ಏರಿಸಿದೆ. ಇದು ಈ ವರ್ಷದಲ್ಲಿ ಐದನೇ ಬಾರಿ ಏರಿಕೆ ಕಂಡಿದೆ. ಈ ರೀತಿ ರೆಪೋ ದರ ಏರಿಸುವುದವರಿಂದ ಸಾಲದ ಮೇಲಿನ ಬಡ್ಡಿದರಗಳು ಏರಿಕೆ ಕಾಣುತ್ತದೆ. ಹೊಸದಾಗಿ ಸಾಲ ಪಡೆಯುವವರಿಗೆ ಸಹ ಇದು ಅನ್ವಯವಾಗುತ್ತದೆ. ಈ ಅವಧಿಯಲ್ಲಿ ರೆಪೋ ದರವು 225 ಬೇಸಿಕ್ ಪಾಯಿಂಟ್ನಿಂದ ಶೇ.6.25ಕ್ಕೆ ಏರಿಕೆ ಕಂಡಿದೆ.
ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದ್ದರಿಂದ ಬ್ಯಾಂಕುಗಳು ಬಡ್ಡಿದರ ಮತ್ತು ಸಾಲದ ಮೇಲಿನ ದರಗಳನ್ನು ಏರಿಸಿವೆ. ಕೆಲವು ಬ್ಯಾಂಕ್ಗಳು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಏರಿಸಿವೆ. ಸಣ್ಣ ಹಣಕಾಸು ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿರುವ ಹಣದ ಬಡ್ಡಿದರವನ್ನು ಪರಿಷ್ಕರಣೆ ಮಾಡಿವೆ.
ಉಳಿತಾಯ ಖಾತೆಗಳ ಮೇಲೆ ಶೇ.7.5 ಬಡ್ಡಿದವರನ್ನು ಯಾವ ಯಾವ ಬ್ಯಾಂಕ್ಗಳು ನೀಡುತ್ತಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದು ಹೆಚ್ಚಿನ ಬಡ್ಡಿದರ ಎಂದೇ ಹೇಳಬೇಕು. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಶೇ.7.5 ಬಡ್ಡಿದರವನ್ನು ನೀಡುತ್ತಿದೆ. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಈಕ್ವಿಟಿಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳು ಕೂಡ ಶೇ.7ರಷ್ಟು ಬಡ್ಡಿಯನ್ನು ನೀಡುತ್ತಿವೆ.
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ನೀವು ಖಾತೆ ಹೊಂದಿದ್ದರೆ ನಿಮ್ಮ ಖಾತೆಯಲ್ಲಿ ಕನಿಷ್ಟ 2೦೦೦ರೂ.ನಿಂದ 5೦೦೦ ರೂ. ಇರಬೇಕು. ಈಕ್ವಟೀಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ 25೦೦ರೂ. ನಿಂದ 1೦,೦೦೦ರೂ. ವರೆಗೆ ಇರಬೇಕು. ಡಿಸಿಬಿ ಬ್ಯಾಂಕ್ ಗಳ ಲ್ಲಿ ಕನಿಷ್ಟ ಬ್ಯಾಲೆನ್ಸ್ 25೦೦ರೂ.ನಿಂದ 5೦೦೦ ರೂ. ಇರಬೇಕು.
ಬಂಧನ್ ಬ್ಯಾಂಕ್, ಸಿಎಸ್ಬಿ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್ಗಳು ಕೂಡ ಆಕರ್ಷಕ ಬಡ್ಡಿದರವನ್ನು ನೀಡುತ್ತಿವೆ. ಈ ಬ್ಯಾಂಕ್ಗಳಲ್ಲಿ ನೀವು ಶೇ.6.5 ಬಡ್ಡಿದರವನ್ನು ಪಡೆಯಬಹುದು. ಸೌತ್ ಇಂಡಿಯನ್ ಬ್ಯಾಂಕ್ ಹಾಗೂ ಇಂಡಸ್ ಇಂಡ್ ಬ್ಯಾಂಕ್ ಗಳಲ್ಲಿ ಬಡ್ಡಿದರವು ಶೇ.6 ಇರುತ್ತದೆ. ಇದನ್ನೂ ಓದಿ:Post Office: ಈ ಯೋಜನೆಯಲ್ಲಿ ನೀವು 15೦೦ ರೂ. ಹೂಡಿಕೆ ಮಾಡಿದ್ರೆ ಸಾಕು ಬರೋಬ್ಬರಿ 31 ಲಕ್ಷ ರೂ. ನಿಮ್ಮ ಜೇಬಿಗೆ; ಯಾವ ಯೋಜನೆ ಗೊತ್ತಾ?
ಸಣ್ಣ ಹಣಕಾಸು ಬ್ಯಾಂಕುಗಳು, ಹೊಸ ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಉಳಿತಾಯ ಖಾತೆಯ ಮೇಲೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಹೇಳಬಹುದು. ಹೊಸ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬ್ಯಾಂಕುಗಳು ಈ ರೀತಿಯಾಗಿ ಮಾಡುತ್ತದೆ.