Astrology: ಹೆಂಡತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಈ ರಾಶಿಯ ಪುರುಷರು!

Astrology: ಜ್ಯೋತಿ ಶಾಸ್ತ್ರದ ಪ್ರಕಾರ ಗಂಡು-ಹೆಣ್ಣು ಇಬ್ಬರ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿ ಕೂಡಿ ಬಂದರೆ ಅವರಿಬ್ಬರ ಜೀವನ ಚೆನ್ನಾಗಿ ಇರುತ್ತೆ. ಆದರೂ ಕೆಲವು ರಾಶಿಗಳ ಪುರುಷರು ತಮ್ಮ ಹೆಂಡತಿಯರನ್ನ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಾರೆ ಹಾಗಾದರೆ ಆ ಪುರುಷರ ರಾಶಿಗಳು ಯಾವವು ನೋಡೋಣ ಬನ್ನಿ.

ಮೇಷ ರಾಶಿ; ಮೇಷ ರಾಶಿ ಪ್ರಾಬಲ್ಯದ ರಾಶಿ ಚಕ್ರವಾಗಿದೆ. ಇವರು ಸಂಬಂಧಗಳಲ್ಲಿ ನಿಯಂತ್ರಣ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಸಂಗಾತಿಯನ್ನು ಇವರು ನಿಯಂತ್ರಣ ಮಾಡುತ್ತಾರೆ, ತಾವು ಹೇಳಿದಂತೆ ಕೇಳಬೇಕು ಎನ್ನುವ ಸ್ವಭಾವ ಇವರದ್ದು. ಆದರೆ ಇದು ತಮ್ಮ ಸಂಗಾತಿಯ ಮೇಲಿರುವ ಅತಿಯಾದ ಪ್ರೀತಿಯಿಂದ ಅಧಿಕಾರ ಚಲಾಯಿಸುವ ಗುಣ ಅಷ್ಟೇ. ತಮಗೆ ಇಷ್ಟವಾಗುವ ವಸ್ತುಗಳನ್ನ ಯಾರೊಂದಿಗೂ ಇವರು ಹಂಚಿಕೊಳ್ಳುವುದಿಲ್ಲ ಹಾಗೆ ಸಂಗಾತಿಯ ಬಗ್ಗೆ ಅತಿ ಹೆಚ್ಚು ಪೊಸೆಸಿವ್ ನೆಸ್ ಬೆಳೆಸಿಕೊಂಡಿರುತ್ತಾರೆ.

Astrology: ಹೆಂಡತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಈ ರಾಶಿಯ ಪುರುಷರು! https://sihikahinews.com/amp/these-zodiac-sign-men-have-control-on-life-partner/

ಕಟಕ ರಾಶಿ; ಸೂಕ್ಷ್ಮ ಭಾವನೆಯನ್ನು ಹೊಂದಿರುವ ರಾಶಿ ಇದು ಇವರು ತಮ್ಮ ಸಂಪರ್ಕದಲ್ಲಿ ಇರುವ ಜನರನ್ನ ಬಹಳ ಗೌರವದಿಂದ ನೋಡಿಕೊಳ್ಳುತ್ತಾರೆ. ಯಾವುದೇ ಸಂಬಂಧವಾಗಿದ್ದರು ಅದನ್ನು ಪ್ರೀತಿಸುತ್ತಾರೆ. ಹಾಗಾಗಿ ಅವರ ಮೇಲೆ ಸ್ವಲ್ಪ ನಿಯಂತ್ರಣ ಹೇಳಲು ಪ್ರಯತ್ನಿಸುತ್ತಾರೆ. ಇವರು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ ಎಂದರೆ ಇವರ ಸಂಗಾತಿಗೆ ಉಸಿರಾಡಿಸಲು ಕೂಡ ಕಷ್ಟವಾಗುವ ರೀತಿ ಅವರ ಪ್ರೀತಿ ಇರುತ್ತದೆ. ಬಂಗಾರದ ಪಂಜರದಲ್ಲಿ ಗಿಣಿಯನ್ನ ಇಟ್ಟರೆ ಹೇಗಿರುತ್ತದೆಯೋ, ಇವರ ಪ್ರೀತಿಯು ಹಾಗೆ.

ಮಿಥುನ ರಾಶಿ; ಮಿಥುನ ರಾಶಿಯ ಗಂಡಸರನ್ನ ಪತ್ನಿ ಸದಾ ಸರಿಪಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದರೆ ಜೀವನದಲ್ಲಿ ಸಾಮರಸ್ಯ ಉಳಿಯುವುದಿಲ್ಲ. ಯಾಕೆಂದರೆ ಮಿಥುನ ರಾಶಿಯವರು ತಮ್ಮ ಸಂಗಾತಿ ಮಾಡುವ ಪ್ರತಿಯೊಂದು ಕೆಲಸವನ್ನು ಕೂಡ ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಜೊತೆಗೆ ಎಲ್ಲವನ್ನು ತಾವು ಹೇಳಿದಂತೆ ನಡೆಯಬೇಕು ಎಂದು ಭಾವಿಸುತ್ತಾರೆ. ಹಾಗಾಗಿ ಅವರನ್ನ ತಡೆಯಲು ನಿಮಗೆ ಸಾಧ್ಯವಿಲ್ಲ ಅಧಿಕಾರ ಚಲಾಯಿಸುವ ಗುಣ ಇವರಲ್ಲಿ ಜಾಸ್ತಿ ಇರುತ್ತದೆ. ಇದನ್ನೂ ಓದಿ: Astrology: ತಂದೆಗೆ ಅದೃಷ್ಟಲಕ್ಷ್ಮಿಯರಾಗಿರುತ್ತಾರೆ ಈ 3 ರಾಶಿಯ ಹೆಣ್ಣು ಮಕ್ಕಳು; ಯಾರ ರಾಶಿಯವರು ಗೊತ್ತೇ?

ವೃಶ್ಚಿಕ ರಾಶಿ; ಈ ರಾಶಿಯ ಜನ ತಮಗೆ ತಾವು ಯಾವುದೇ ನಿಯಮವನ್ನು ಹಾಕಿಕೊಳ್ಳುವುದಿಲ್ಲ. ಇವರು ಇತರರ ನಿಯಂತ್ರಣದಲ್ಲಿ ಇರಲು ಬಯಸುವುದಿಲ್ಲ. ಆದರೆ ಎಲ್ಲರನ್ನ ನಿಯಂತ್ರಣ ಮಾಡಲು ಉಪಯೋಗಿಸುತ್ತಾರೆ. ತಮ್ಮ ಮೂಗಿನ ನೇರಕ್ಕೇ ನಡೆಯುವ ಸ್ವಭಾವ ಇವರದ್ದು. ಈ ರಾಶಿಯ ಮೇಲೆ ಮಂಗಳ ಗ್ರಹದ ಪ್ರಾಬಲ್ಯ ಹೆಚ್ಚು. ಹಾಗಾಗಿ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಗಳನ್ನ ತರಲು ಈ ರಾಶಿಯವರು ಬಯಸುತ್ತಾರೆ. ದುರ್ಬಲ ನಕ್ಷತ್ರದ ಚಿಹ್ನೆಗಳು ಇರುವ ರಾಶಿಯವರು ವೃಶ್ಚಿಕ ರಾಶಿಯವರನ್ನ ಮದುವೆಯಾದರೆ ಮುಗಿಯಿತು. ಅವರು ಹೇಳಿದಂತೆ ಕೇಳಬೇಕು. ಹೆಂಡತಿಯನ್ನು ಸ್ವಲ್ಪ ಭಯಪಡಿಸುವ ಗುಣ ಇವರದ್ದು.

ಮಕರ ರಾಶಿ; ರಾಶಿ ಚಕ್ರದ ಚಿಹ್ನೆಗಳಲ್ಲಿ ಅತ್ಯಂತ ಪ್ರಬಲವಾಗಿರುವ ಮಕರ ರಾಶಿಯ ಜನ ನನ್ನದೇ ರೂಲ್ಸ್ ನನ್ನದೇ ದಾರಿ ಎನ್ನುವಂತಹ ಗುಣ ಹೊಂದಿರುತ್ತಾರೆ. ಇವರು ಸೌಂದರ್ಯ ಪ್ರಿಯರು ಹೌದು. ತನ್ನಲ್ಲಿರುವ ವಿಷಯದ ಬಗ್ಗೆ ಇವರಿಗೆ ಹೆಚ್ಚು ಹೆಮ್ಮೆ ಇರುತ್ತದೆ ಹಾಗಾಗಿ ಇವರನ್ನ ಕಂಡ್ರೆ ಇದರವರಿಗೆ ಇಷ್ಟವೂ ಆಗುತ್ತೆ ಆದರೆ ಬೇರೆಯವರನ್ನು ಸಣ್ಣಪುಟ್ಟ ಕಾರಣಕ್ಕೆ ಟೀಕಿಸುವ ಸ್ವಭಾವ ಇವರದ್ದು. ಇವರನ್ನು ಮದುವೆಯಾಗುವ ಸ್ತ್ರೀ ಇವರ ಅಂಗೈನಲ್ಲಿಯೇ ಇರಬೇಕು ಎಂದು ಈ ರಾಶಿಯವರು ಬಯಸುತ್ತಾರೆ.

12 zodiac signsAstrologyHoroscopeಜ್ಯೋತಿಷ್ಯಾಸ್ತ್ರ