Tollywood News: ಟಾಲಿವುಡ್ ನಲ್ಲಿ ಇನ್ಮೇಲೆ ಡಬ್ಬಿಂಗ್ ಸಿನಿಮಾಕ್ಕೆ ಅವಕಾಶ ಸಿಗೋದೇ ಡೌಟ್; ಕಾಂತಾರ ಸಿನಿಮಾ ಸಕ್ಸೆಸ್ ಗೆ ನಲುಗಿದ ಟಾಲಿವುಡ್ ನ ಹೊಸ ನಿರ್ಧಾರ!

Tollywood News: ಈಗೇನಿದ್ದರೂ 5ಜಿ ಯುಗ. ಪ್ರಪಂಚವೇ ಇಂದು ಸಣ್ಣದಾಗಿ ಕಾಣುತ್ತಿದೆ. ಇದು ಚಿತ್ರರಂಗಕ್ಕೂ ಅನ್ವಯಿಸುತ್ತದೆ. ಚಿತ್ರರಂಗದಲ್ಲೂ ಪ್ಯಾನ್ ಇಂಡಿಯಾ(Pan India Film) ಸಿನೆಮಾಗಳು ಬಂದು ಒಂದು ಭಾಷೆಯ ಚಿತ್ರವನ್ನು ಇಡೀ ಭಾರತೀಯರು ನೋಡುವಂತೆ ಆಗಿದೆ. ಇದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಗಿದೆ. ನಿರ್ಮಾಪಕರ ಜೇಬು ಬಹುಬೇಗ ತುಂಬುತ್ತಿದೆ. ಆದರೆ ಇದರಿಂದ ಸಣ್ಣ ಸಣ್ಣ ನಿರ್ಮಾಪಕರಿಗೆ ತೊಂದರೆ ಆಗುತ್ತಿರುವುದಂತೂ ಸತ್ಯ. ಇ ರೀತಿ ಆಗುತ್ತಿರುವುದರಿಂದ ಟಾಲಿವುಡ್ ಚಿತ್ರರಂಗ ನಲುಗಿ ಹೋಗಿದೆ. ತೆಲುಗಿನ ಪ್ರಾದೇಶಿಕ ಸಿನೆಮಾಗಳು ಓಡುತ್ತಿಲ್ಲ. ಗಲ್ಲಾ ಪೆಟ್ಟಿಗೆ ತುಂಬುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ತೆಲುಗು ಸಿನೆಮಾ ರಂಗದಲ್ಲಿ ಹೊಸ ನಿಯಮ ತರಲು ಮುಂದಾಗಿದೆ.

ಪ್ಯಾನ್ ಇಂಡಿಯಾ ಸಿನೆಮಾಗಳಿಗೆ ತೆಲುಗು ಸಿನೆಮಾರಂಗ ಬೆದರಿದಂತೆ ಕಂಡುಬರುತ್ತಿದೆ. ಕೆ.ಜಿ.ಎಫ್, ಚಾರ್ಲಿ 777, ಇದೀಗ ಕಾಂತಾರ ಸಿನೆಮಾ ಸಹ ತೆಲುಗಿನಲ್ಲಿ ದರ್ಬಾರ್ ನಡೆಸುತ್ತಿದೆ. ಪ್ರೇಕ್ಷಕರು ಸಹ ಡಬ್ಬಿಂಗ್ ಸಿನೆಮಾಗಳನ್ನು ನೋಡಲು ಇಚ್ಚೆ ಪಡುತ್ತಿದ್ದಾರೆ. ಇದಕ್ಕಾಗಿ ಬರುವ ಸಂಕ್ರಾಂತಿ ಯುಗಾದಿ ಹಬ್ಬದ ಸಂದರ್ಭದಲ್ಲಿ ತೆಲುಗು ಸಿನೆಮಾ ಮಾತ್ರ ಪ್ರದರ್ಶಿಸಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹಬ್ಬದ ಸೀಸನ್ ನಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ಸಿನೆಮಾಗಳನ್ನು ಮಾತ್ರ ಪ್ರದರ್ಶನ ಮಾಡಬೇಕು. ಇತರ ಭಾಷೆಯ ಸಿನೆಮಾಗಳು ಅಥವಾ ಡಬ್ಬಿಂಗ್ ಸಿನೆಮಾಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಹೊಸ ರೂಲ್ಸ್ ಮಾಡಿದೆ. ತೆಲುಗು ಸಿನೆಮಾಗಳನ್ನು ಪ್ರದರ್ಶನ ಮಾಡಿ ಥಿಯೇಟರ್ ಗಳು ಉಳಿದಿದ್ದರೆ ಅದನ್ನು ಡಬ್ಬಿಂಗ್ ಸಿನೆಮಾಗಳಿಗೆ ನೀಡಬಹುದು. ಇದನ್ನೂ ಓದಿ:Kannada Film: ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಗೆ ಆಡಿಶನ್ ಕೊಟ್ಟಿದ್ದು ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ನ್ಯಾಷನಲ್ ಕ್ರಷ್ ಇವರೇನಾ ಅಂತಿರಾ!

ಈ ಕುರಿತು ಕಳೆದ ವಾರ ಸಭೆ ಸೇರಿದ್ದ ತೆಲುಗು ವಾಣಿಜ್ಯ ಸಿನೆಮಾ ಮಂಡಳಿ ಸಂಕ್ರಾಂತಿ, ಯುಗಾದಿ, ದಸರಾ ಸೇರಿದಂತೆ ಹಬ್ಬದ ಸಂದರ್ಭದಲ್ಲಿ ತೆಲುಗು ಸಿನೆಮಾಗಳಿಗೆ ಆದ್ಯತೆ ನೀಡಬೇಕು ಎಂಬ ನಿರ್ಣಯ ಕೈಗೊಂಡಿದೆ. ತೆಲುಗು ಸಿನೆಮಾಗಳ ನಿರ್ಮಾಣ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವುದರಿಂದ ನಿರ್ಮಾಪಕರ ಕ್ಷೇಮ ಹಾಗೂ ತೆಲುಗು ವಾಣಿಜ್ಯೋದ್ಯಮವನ್ನು ಉಳಿಸುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದೆ ಮಂಡಳಿ.

ಈ ಸಭೆಯಲ್ಲಿ ಖ್ಯಾತ ನಿರ್ಮಾಪಕ ದಿಲ್ರಾಜು ಅವರು ಕೆಲ ವರ್ಷಗಳಿಂದ ಹಿಂದೆ ಹೇಳಿದ್ದ ಹಬ್ಬದ ಸೀಸನ್ ಪ್ರಯೋಜನವನ್ನು ಕೇವಲ ಡಬ್ಬಿಂಗ್ ಸಿನೆಮಾಗಳು ಪಡೆದುಕೊಳ್ಳುತ್ತಿವೆ. ಡಬ್ಬಿಂಗ್ ಸಿನೆಮಾಗಳಿಗೆ ಆಂದ್ರಪ್ರದೇಶದಲ್ಲಿ ಹೆಚ್ಚಿನ ಚಿತ್ರಮಂದಿರಗಳನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಕೇವಲ ತೆಲುಗು ಸಿನೆಮಾಗಳಿಗೆ ಮೀಸಲಾಗಿದ್ದರೆ ತೆಲುಗು ಸಿನೆಮಾಗಳು ಹೆಚ್ಚಿನ ಲಾಭಗಳಿಸಬಹುದು. ತೆಲುಗು ಸಿನೆಮಾಗಳು ಪ್ರದರ್ಶನ ಮಾಡಿ ಉಳಿದ ಚಿತ್ರಮಂದಿರವನ್ನು ಡಬ್ಬಿಂಗ್ ಸಿನೆಮಾಗಳಿಗೆ ನೀಡಿದರೆ ಒಳ್ಳೆಯದು ಎಂದು ಹೇಳಿದ್ದನ್ನು ಸ್ಮರಿಸಿದ್ದಾರೆ.

Dubbing filmKannada FilmskantaraTollywood filmಕನ್ನಡ ಸಿನಿಮಾಕಾಂತಾರಡಬ್ಬಿಂಗ್ ಸಿನಿಮಾ