UPI Payment:ನಿಮ್ಮ ಫೋನ್ ಮಿಸ್ ಆಗಿ ಕಳೆದು ಹೋದರೇ, UPI ಅನ್ನು ಕೂಡ ಸೇಫ್ ಮಾಡಿ ಹಣ ಉಳಿಸಿಕೊಳ್ಳುವುದು ಹೇಗೆ ಗೊತ್ತೇ??

UPI Payment:ಭಾರತದಲ್ಲಿ ಇಂದು ಕೊಟ್ಯಂತರ ಮಂದಿ ಡಿಜಿಟಲ್ ಪೇಮೇಂಟ್ ಬಳಸುತ್ತಿದ್ದಾರೆ. ಸಣ್ಣ ಎಲೆ-ಅಡಿಕೆ ವ್ಯಾಪಾರಿಯಿಂದ ಹಿಡಿದು ಮಾಲ್ ಗಳ ವರೆಗೆ ಎಲ್ಲರೂ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೆ ಕರೋನಾ ಕಾಲಘಟ್ಟದಲ್ಲಿ ಈ ಡಿಜಿಟಲ್ ಪೇಮೆಂಟ್ ಹೆಚ್ಚು ಬಳಕೆಯಾಗತೊಡಗಿತು. ಅಂದಿನಿಂದ ನಿರಂತರವಾಗಿ ಇದು ಬೆಳೆಯುತ್ತಲೇ ಬಂದಿದೆ. ಇಂದು ಡಿಜಿಟಲ್ ಪೇಮೆಂಟ್ ಇರದ ಅಂಗಡಿಗಳು ಇಲ್ಲವೇ ಇಲ್ಲ ಎಂದು ಹೇಳಬಹುದು.

ಈ ವರ್ಷ ಎಪ್ರಿಲ್ ವೇಳೆಗೆ ಭಾರತದಲ್ಲಿ ಯುಪಿಐ ಮಾದರಿಯಲ್ಲಿ ಮಾಡಲಾದ ಹಣದ ವಹಿವಾಟು 9.83ಲಕ್ಷ ಕೋಟಿ ರೂ.ಗಳು. ಅಗಷ್ಟನಲ್ಲಿ 10.73 ಲಕ್ಷ ಕೋಟಿ ರೂ.ಗೆ ಅದು ಏರಿಕೆಯಾಗಿದೆ. ಯುಪಿಐ ಮನಿ ಮೋಡ್ ಮೂಲಕ ಹಣ ವರ್ಗಾವಣೆ ಮಾಡುವುದು ತುಂಬಾನೇ ಸುಲಭವಾಗಿದೆ. ಕೆಲವೊಮ್ಮೆ ಇದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮುಖ್ಯವಾಗಿ ನಿಮ್ಮ ಮೊಬೈಲ್ ಕಳುವಾದಾಗ ನಿಮಗೆ ಸಮಸ್ಯೆ ತಂದೊಡ್ಡುತ್ತದೆ. ಇದನ್ನೂ ಓದಿ: Solar Stove: ಈ ಸ್ಟವ್ ಉರಿಯೋದಕ್ಕೆ ಇಂಧನವೂ ಬೇಡ, ಗ್ಯಾಸ್ ಬೇಡ ಅಷ್ಟೇ ಯಾಕೆ ವಿದ್ಯುತ್ ಕೂಡ ಬೇಡ; ಯಾವುದು ಗೊತ್ತಾ ಆ ಅಗ್ಗದ ಚಮತ್ಕಾರಿ ಒಲೆ?

ನೀವು ಯುಪಿಐ ಮೊಬೈಲ್ ಬ್ಯಾಂಕಿಂಗ್ ಹೊಂದಿರುವ ಮೊಬೈಲ್ ಕಳೆದುಕೊಂಡರೆ ಮೊದಲು ನೀವು ಯುಪಿಐ ಪಾಸ್ವರ್ಡ್ ಲಾಕ್ ಮಾಡಿಸಬೇಕು. ಫೋನ್ ಪೇ, ಗೂಗಲ್ ಪೇ, ಪೇಟಿಎಂ ನಂತಹ ಯುಪಿಐ ಅಪ್ಲಿಕೇಶನ್ ಲಾಕ್ ಮಾಡುವ ವಿಧಾನ ಹೇಗೆಂದು ತಿಳಿದುಕೊಂಡಿದರೆ ನಿಮ್ಮ ಹಣ ನಿಮ್ಮ ಖಾತೆಯಲ್ಲಿಯೇ ಉಳಿಯುತ್ತದೆ. ಇಲ್ಲದಿದ್ದರೆ ಅದೂ ಸಹ ಕಳುವಾಗುವ ಸಾಧ್ಯತೆ ಇರುತ್ತದೆ.

ಫೋನ್ ಪೇ ಅಕೌಂಟ್ ಲಾಕ್ ಮಾಡುವ ವಿಧಾನ:
ಒಂದು ವೇಳೆ ನಿಮ್ಮ ಮೊಬೈಲ್ ಕಳೆದು ಹೋದರೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಪಾಲಕರ ಮೊಬೈಲ್ನಿಂದ 08068727374 ಸಂಖ್ಯೆಗೆ ಕರೆ ಮಾಡಬೇಕು. ಅಲ್ಲಿ ಕೇಳಲಾಗುವ ಗ್ರಾಹಕರ ವಿವರಗಳನ್ನು ಒದಗಿಸಬೇಕು. ನೀವು ನೀಡಿದ ಎಲ್ಲ ಮಾಹಿತಿಗಳನ್ನು ಸೇವಾ ಅಧಿಕಾರಿಯು ಖಚಿತ ಪಡಿಸಿದ ಬಳಿಕ ನಿಮ್ಮ ಖಾತೆಯನ್ನು ತಕ್ಷಣವೇ ಬ್ಲಾಕ್ ಮಾಡಲಾಗುತ್ತದೆ.

ಪೇಟಿಎಂ ನಿರ್ಭಂದಿಸುವ ವಿಧಾನ
ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ನೀವು ಪೇಟಿಎಂ ಸಹಾಯವಾಣಿ ಸಂಖ್ಯೆಯಾದ 0120-4456456ಕ್ಕೆ ಕರೆ ಮಾಡಬೇಕು. ನಿಮ್ಮ ಮೊಬೈಲ್ ಕಳುವಾಗಿರುವ ಮಾಹಿತಿ ನೀಡಬೇಕು. ಇದಕ್ಕೂ ಮೊದಲು ನಿಮ್ಮ ಮೊಬೈಲ್ ಸಿಮ್ ಬ್ಲಾಕ್ ಮಾಡಿಸೇಕು. ನಂತರ ಪೇಟಿಎಂನಲ್ಲಿ ವರದಿ ನಷ್ಟ ಅಥವಾ ವಾಲೆಟ್, ಡೆಬಿಟ್ ಕಾರ್ಡ್, ಉಳುತಾಯ ಖಾತೆಯ ಅನಧಿಕೃತ ಬಳಕೆಯನ್ನು ನೀವು ಆಯ್ಕೆ ಮಾಡಬೇಕು. ಅಲ್ಲಿ ನೀವು ನಿಮ್ಮ ಕಳೆದುಹೋದ ಮೊಬೈಲ್ ನಂಬರ್ ನಮೂದು ಮಾಡಬೇಕು. ಇದಾದ ಬಳಿಕ ಬ್ಲಾಕ್ ಪೇಟಿಎಂ ಖಾತೆಯನ್ನು ಆರಿಸಬೇಕು.

smartPhoneUPI Payment