WhatsApp Features: ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಸಂದೇಶಗಳನ್ನು ಮತ್ತೆ ನೋಡಬೇಕಾ ಇಷ್ಟು ಮಾಡಿ ಸಾಕು!

WhatsApp Features: ದೇಶದಲ್ಲಿ ಸುಮಾರು 550 ಮಿಲಿಯನ್ ಗೂ ಅಧಿಕ ಜನ ವಾಟ್ಸಪ್ ಮೆಸೆಂಜರ್ WhatsAppMessengers) ಬಳಸುತ್ತಿದ್ದಾರೆ ಕೇವಲ ವಿಡಿಯೋ ಕಾಲ್ (Video Call) ಅಥವಾ ಆಡಿಯೋ ಕಾಲ್ (Audio Call) ಮಾಡುವುದು ಮಾತ್ರವಲ್ಲ ಅದರ ಹೊರತಾಗಿ ವಾಟ್ಸಪ್ ನಲ್ಲಿ ಜನರಿಗೆ ಉಪಯೋಗವಾಗುವಂತಹ ಹಲವಾರು ಫೀಚರ್ ಗಳು ಇವೆ. ಅದರಲ್ಲೂ 2022 ರಲ್ಲಿ ವಾಟ್ಸಪ್ ಹೊಸ ಹೊಸ ವೈಶಿಷ್ಟ್ಯತೆಗಳು ಇರುವ ಫೀಚರ್ ಗಳನ್ನು ಪರಿಚಯಿಸಿದೆ.

ಈ ಹಿಂದೆ ವಾಟ್ಸಾಪ್ ನಲ್ಲಿ ಯಾರಿಗಾದರೂ ಮೆಸೇಜ್ ಕಳುಹಿಸಿದರೆ ಅದನ್ನು ಡಿಲೀಟ್ (Delete) ಮಾಡೋದಕ್ಕೆ ಸಾಧ್ಯ ಇರಲಿಲ್ಲ ಆದರೆ ಇದೀಗ ಇತರರಿಗೂ ಕಾಣದೆ ಇರುವ ರೀತಿಯಲ್ಲಿ ವಾಟ್ಸಪ್ ಮೆಸೇಜ್ ಗಳನ್ನು ಡಿಲೀಟ್ ಮಾಡಬಹುದು. ಡಿಲೀಟ್ ಫಾರ್ ಎವರಿಒನ್ ಅಥವಾ ಡಿಲೀಟ್ ಫಾರ್ ಮಿ ಎನ್ನುವ ಆಪ್ಷನ್ ಗಳಲ್ಲಿ ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಂಡು ನೀವು ಕಳುಹಿಸಿರುವ ಸಂದೇಶ ಕೇವಲ ನಿಮ್ಮ ಮೊಬೈಲ್ ನಲ್ಲಿ ಮಾತ್ರ ಡಿಲೀಟ್ ಆಗಬೇಕಾ ಅಥವಾ ಬೇರೆಯವರು ನೋಡದಂತೆ ಡಿಲೀಟ್ ಆಗಬೇಕಾ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಕಸ್ಮಾತ್ ಆಗಿ ಯಾರಿಗಾದರೂ ಕಳುಹಿಸಬಾರದ ಸಂದೇಶ ಹೋಗಿದ್ದರೆ ಈ ಫೀಚರ್ ಮೂಲಕ ನೀವು ಅದನ್ನ ಡಿಲೀಟ್ ಮಾಡಿಕೊಳ್ಳಲು ವಾಟ್ಸಾಪ್ ಸೌಲತ್ತು ಮಾಡಿಕೊಟ್ಟಿದೆ. ಇದನ್ನೂ ಓದಿ:Part Time Job:ವಿದ್ಯಾರ್ಥಿಗಳು ಕೂಡ ಪಾರ್ಟ್ ಟೈಮ್ ಆನ್ಲೈನ್ ಜಾಬ್ ಮಾಡಿ ಹಣ ಗಳಿಸಬಹುದು; ನಿಮ್ಮ ಪಾಕೆಟ್ ಮನಿಗಾಗಿ ನೀವೇ ಅರ್ನ್ ಮಾಡೋದು ಹೇಗೆ ಗೊತ್ತಾ?

ಇನ್ನು ವಾಟ್ಸಪ್ ನಲ್ಲಿ ಕರೆ ರೆಕಾರ್ಡಿಂಗ್ ಮಾಡುವ ಸೌಲಭ್ಯ ಇಲ್ಲ. ಆದರೆ ಥರ್ಡ್ ಪಾರ್ಟಿ ವಾಟ್ಸಪ್ ಕರೆ ಮಾಡಿಕೊಳ್ಳಬಹುದು. ಅದಕ್ಕಾಗಿ ಪ್ಲೇ ಸ್ಟೋರ್ ನಲ್ಲಿ ಕ್ಯೂಬ್ ಎಸಿ ಆರ್ (cube ACR) ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಅದರಲ್ಲಿ ಕೆಲವು ಪರಮೇಶನಗಳನ್ನು ನೀಡಿದ ನಂತರ ವಾಟ್ಸಪ್ ನಲ್ಲಿ ನೀವು ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಸಾಧ್ಯವಿದೆ.

ವಾಟ್ಸಪ್ ನಲ್ಲಿ ಅಳಿಸಿದ ಸಂದೇಶ ಓದುವುದು ಹೇಗೆ?

ಇದಕ್ಕೂ ಕೂಡ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಬಹುದು. ಗೆಟ್ ಡಿಲಿಟೆಡ್ ಮೆಸೇಜಸ್ (get deleted messages) ಎನ್ನುವ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನಂತರ ಅದನ್ನು ಇನ್ಸ್ಟಾಲ್ ಮಾಡಿಕೊಂಡು ವಾಟ್ಸಾಪ್ ನಲ್ಲಿ ಡಿಲೀಟ್ ಆದ ಸಂದೇಶಗಳನ್ನು ಮತ್ತೆ ಓದಲು ಸಾಧ್ಯವಾಗುತ್ತದೆ. ಅಂದ ಹಾಗೆ ಚಾಟ್ ಓಪನ್ ಆಗಿತ್ತ ಸಮಯದಲ್ಲಿ ಡಿಲೀಟ್ ಆಗಿದ್ದರೆ ಮೆಸೇಜ್ ಓದಲು ಸಾಧ್ಯವಿಲ್ಲ ಮೊಬೈಲ್ ಲಾಕ್ ಆಗಿರುವ ಸಂದರ್ಭದಲ್ಲಿ ಡಿಲೀಟ್ ಆಗಿರುವ ಮೆಸೇಜ್ ನೋಡಬಹುದು.

ಇನ್ನು ಮೊಬೈಲ್ ನಲ್ಲಿ ಅಕಸ್ಮಾತ್ ಆಗಿ ಡಿಲೀಟ್ ಫಾರ್ ಎವೆರಿಒನ್ (delete for everyone) ಬದಲು ಡಿಲೀಟ್ ಫಾರ್ ಮೀ (delete for me) ಆಯ್ಕೆ ಮಾಡಿಕೊಂಡಿದ್ದಾರೆ ಈಗ ಐದು ಸೆಕೆಂಡ್ ಗಳ ಕಾಲಾವಕಾಶದಲ್ಲಿ ಡಿಲೀಟ್ ಆಗಿರುವ ಮೆಸೇಜ್ ಅನ್ನು ಅಂಡು (undo) ?ಮಾಡಿಕೊಳ್ಳಲು ಸಾಧ್ಯವಿದೆ.

DeletedUse this Trick to get deleted messagesWhatsApp Features