ಪಂಡಿತ-ಮೌಲ್ವಿ ಗಳ ಕೈಯಲ್ಲೂ ಏನೇ ಮಾಡಿದರೂ ಮಗು ಆಗಲಿಲ್ಲ, ಮಗು ಬೇಕೇ ಬೇಕು ಹಠ ಹಿಡಿದ ಪತ್ನಿಗಾಗಿ, ಗಂಡ ಏನು ಮಾಡಿದ್ದಾನೆ ಗೊತ್ತೇ??

ಉತ್ತರ ಪ್ರದೇಶದಲ್ಲಿ ಆತಂಕ ತರುವಂಥ ಒಂದು ಘಟನೆ ನಡೆದಿದೆ. ಭಿಕ್ಷುಕಿ ಮಹಿಳೆಯ ಬಳಿ ಇದ್ದ ಮಗುವನ್ನು ಕದ್ದು ಇಬ್ಬರು ಯುವಕರು ಪರಾರಿ ಆಗಿದ್ದು, ಆಕೆಯ ಹತ್ತಿರ ಮಗು ಕದ್ದಿರುವುದಕ್ಕೆ ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಮಗುವನ್ನು ಕದ್ದುಕೊಂಡು ಓಡಿ ಹೋಗುತ್ತಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವುದನ್ನು ಪೊಲೀಸರು ಗಮನಿಸಿದ್ದು, 48 ಗಂಟೆಗಳ ಒಳಗೆ ಪರಿಹರಿಸಿದ್ದಾರೆ. ಹೀನಾ ಎನ್ನುವ ಮಹಿಳೆಯ ಮಗುವನ್ನು ಕಬಳಿಸಲಾಗಿತ್ತು. ಹೀಗೆ ಮಾಡಿಸಿರುವ ವ್ಯಕ್ತಿಯ ಹೆಸರು ಓಂಪಾಲ್.

ಓಂಪಾಲ್ ಒಂದು ರೇಷನ್ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿ, ಇವನಿಗೆ ಎರಡು ಮದುವೆ ಆಗಿದೆ, ಮೊದಲ ಹೆಂಡತಿಯಿಂದ ಮೂರು ಮಕ್ಳಳನ್ನು ಹೊಂದಿದ್ದಾರೆ. ಆದರೆ ಎರಡನೇ ಹೆಂಡತಿ ಇಂದ ಮಗು ಹೊಂದಲು ಆಗಿಲ್ಲ, ಈ ವ್ಯಕ್ತಿಗೆ ಗಂಡು ಮಗು ಬೇಕು ಎನ್ನುವ ಹುಚ್ಚು. ಆಗ ಮಗುವನ್ನು ದತ್ತು ಪಡೆದುಕೊಳ್ಳೋಣ ಎಂದು ಎರಡನೇ ಹೆಂಡತಿ ಹಠ ಮಾಡುತ್ತಿದ್ದಳು, ಮಾನಸಿಕವಾಗಿ ಬಳಲಿದ್ದಳು. ಆಗ ಓಂಪಾಲ್ ಒಂದು ಮಾಸ್ಟರ್ ಪ್ಲಾನ್ ಮಾಡಿ ಮಗುವನ್ನು ಕದಿಯುವ ನಿರ್ಧಾರ ಮಾಡುತ್ತಾರೆ, ಅದರಲ್ಲೂ ಭಿಕ್ಷುಕರ ಮಗುವನ್ನು ಕದ್ದರೆ, ಅದು ದೊಡ್ಡ ಸುದ್ದಿ ಆಗುವುದಿಲ್ಲ, ಪೊಲೀಸರು ಹೆಚ್ಚು ತಲೆಕೆಡಿಸಿಕೊಳ್ಳದೆ, ಪ್ರಕರಣವನ್ನು ಮುಚ್ಚಿಹಾಕಿಬಿಡುತ್ತಾರೆ ಎಂದು ಈ ಪ್ಲಾನ್ ಮಾಡುತ್ತಾರೆ.

ಇದರಲ್ಲಿ ಓಂಪಾಲ್ ಗೆ ಸಹಾಯ ಮಾಡಲು ವಿಕಾಸ್ ಟಂಡನ್ ಮತ್ತು ಕುಲದೀಪ್ ಜೊತೆ ಸೇರುತ್ತಾರೆ, ಇವರಿಬ್ಬರು ಮಗು ಹುಡುಕಲು ಪ್ರಯತ್ನ ಪಟ್ಟರು ಅದು ಸಾಧ್ಯ ಆಗುವುದಿಲ್ಲ. ಕೊನೆಗೆ 10 ದಿನಗಳು ಎಲ್ಲಾ ಕಡೆ ಓಡಾಡಿ ಒಂದು ಮಗುವನ್ನು ನೋಡಿ ಅದನ್ನು ಕದಿಯಬೇಕು ಎಂದುಕೊಳ್ಳುತ್ತಾರೆ. ಅದು ಹೀನಾ ಅವರ ಮಗು, ಹೀನಾ ಮಗುವಿನ ಹೆಸರು ಶಿವ, ಮಗುವಿಗೆ 7 ತಿಂಗಳು. ಬೆಳಗ್ಗಿನಿಂದ ಸಂಜೆವರೆಗು ಕದಿಯಲು ಎಷ್ಟೇ ಪ್ರಯತ್ನ ಪಟ್ಟರು ಅದು ಸಾಧ್ಯ ಆಗುವುದಿಲ್ಲ. ಹೀನಾ ಮಗುವಿನ ಜೊತೆಯಲ್ಲೇ ಇರುತ್ತಾರೆ. ಕೊನೆಗೆ ಒಂದು ಸಮಯದಲ್ಲಿ ಹೀನಾ ಮಗುವಿಗೆ ಹಾಲುಣಿಸುತ್ತಿರುವಾಗ ಒಬ್ಬರು ಆಕೆಯ ಜೊತೆಗೆ ಮಾತನಾಡಲು ಶುರು ಮಾಡುತ್ತಾರೆ.

ಮಾತಾಡುತ್ತಾ ಆಕೆಯ ಗಮನ ಬೇರೆ ಕಡೆ ತೆಗೆದುಕೊಂಡು ಹೋಗಿ, ಮಗುವನ್ನು ಮತ್ತೊಬ್ಬರು ಎತ್ತಿಕೊಂಡು ಓಡಿಹೋಗುತ್ತಾರೆ. ಹೀನಾಗೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಇತ್ತ ಓಂಪಾಲ್ ಮಗುವಿಗೆ ಹೊಸ ಬಟ್ಟೆ ಹಾಕಿ ಮನೆಗೆ ತೆಗೆದುಕೊಂಡು ಹೋದಾಗ, ಮನೆಯಲ್ಲಿ ಓಂಪಾಲ್ ಹೆಂಡತಿ ಪ್ರಶ್ನೆ ಮಾಡುವುದಕ್ಕೆ ಶುರು ಮಾಡುತ್ತಾರೆ, ಈ ಮಗುವನ್ನು ಹೆಂಡತಿಗೆ ಗಿಫ್ಟ್ ಆಗಿ ಕೊಡಬೇಕು ಎಂದುಕೊಂಡಿದ್ದನು ಓಂಪಾಲ್. ಕೊನೆಗೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿ, ಮಗುವನ್ನು ತಾಯಿಗೆ ಕೊಡಿಸಿದ್ದಾರೆ. ಕೊನೆಗೂ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಆ ತಾಯಿಗೆ ನ್ಯಾಯ ಸಿಕ್ಕಿದೆ.