Actress Vaishnavi Gowda: ಅತಿ ಸಣ್ಣ ವಯಸ್ಸಿನಲ್ಲಿ ನಟನೆ ಆರಂಭಿಸಿದ ಈಕೆ ಈಗಲೂ ಗೊಂಬೆಯಂತೆಯೇ ಕಾಣಿಸುತ್ತಾರೆ; ಮುದ್ದಾದ ಈ ನಟಿಯ ಬಾಲ್ಯದ ಫೋಟೋ ನೋಡಿ ಗುರುತಿಸುತ್ತಿರೇ?

ಇಂದು ಫೇಮಸ್ ಆಗಿರುವ, ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿ ನಟನೆಯಲ್ಲಿ ತೊಡಗಿರುವ ಕೆಲವು ನಟಿಯರು ಬಾಲ ನಟಿಯರಾಗಿಯೂ ಅಭಿನಯಿಸಿದ್ದರು (Acting). ಆದ್ರೆ ಹಲವರಿಗೆ ಈ ವಿಚಾರ ಗೊತ್ತಿರುವುದಿಲ್ಲ ಬಿಡಿ.  ಆದರೆ ಅವರ ಫೋಟೋ (Photos) ನೋಡಿದ್ರೆ ನಿಮಗೆ ಖಂಡಿತವಾಗಿಯೂ ಯಾರು ಅನ್ನೋದು ಗೊತ್ತಾಗಬಹುದು ಅಂತ ಒಬ್ಬ ನಟಿಯ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ ಮುಂದೆ ಓದಿ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ನಟ ನಟಿಯರ ಚಿತ್ರಗಳು ಹರಿದಾಡುತ್ತಿವೆ. ಈ ಚಿತ್ರಗಳನ್ನು ನೋಡಿ ಹಲವರು ಅವರನ್ನು ಗುರುತಿಸಿದ್ದಾರೆ ಜೊತೆಗೆ ಸಾಕಷ್ಟು ಕಮೆಂಟು ಮಾಡಿದ್ದಾರೆ. ಅದೇ ರೀತಿ ಈಗ ನಾವು ತೋರಿಸುತ್ತಿರುವ ಈ ಚಿತ್ರವನ್ನು ನೋಡಿ ಈ ನಟಿ (Actress)  ಯಾರು ಎಂಬುದನ್ನು ನೀವು ಊಹಿಸಿ.  ಚಿಕ್ಕ ಹುಡುಗಿಯಿಂದ ಈಗಿನವರೆಗೂ ಈ ನಟಿ ಬಹಳ ಕ್ಯೂಟ್. ಕನ್ನಡಿಗರ ಮನಸ್ಸು ಗೆದ್ದ ಈ ಸುಂದರ ನಟಿ ಯಾರು ಹೇಳಿ ನೋಡೋಣ ?

ವೈಷ್ನವಿ ಗೌಡ

ಹೌದು, ನಿಮ್ಮ ಊಹೆ ಸರಿಯಾಗಿದೆ. ಈ ಮುದ್ದಾದ ಮಗು ಬೇರೆ ಯಾರು ಅಲ್ಲ ಈಗಿನ ಕನ್ನಡ ಕಿರುತೆರೆಯ ಮಿಲ್ಕ್ ಬ್ಯೂಟಿ ವೈಷ್ಣವಿ ಗೌಡ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಧಾರವಾಹಿಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಟ್ಟಿದ್ದು ಸನ್ನಿಧಿ ಪಾತ್ರ. ಸನ್ನಿಧಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದು ವೈಷ್ಣವಿ ಗೌಡ.

ವೈಷ್ಣವಿ ಗೌಡ ಅವರ ಬಾಲ್ಯದ ಹಾಗೂ ಈಗಿನ ಮುದ್ದಾದ ಫೋಟೋ

ಹೌದು, ಬೆಂಗಳೂರಿನವರೇ ಆದ ವೈಷ್ಣವಿ ಗೌಡ (Vaishnavi Gowda) ಪ್ರತಿಭಾನ್ವಿತ ನಟಿ ಸಕ್ಕತ್ ಟ್ಯಾಲೆಂಟೆಡ್ (Talented). ನಟನೆ ಮಾತ್ರವಲ್ಲದೆ ಯೋಗ ನೃತ್ಯ ಎಲ್ಲದರಲ್ಲೂ ಮುಂದಿದ್ದಾರೆ. ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾನುಗಟ್ಟಲೆ ಫಾಲೋವರ್ಸ್ (Followers) ಹೊಂದಿರುವ ನಟಿ ವೈಷ್ಣವಿ ಗೌಡ ಸದಾ ಒಂದು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ ಜೊತೆಗೆ ಕೆಲವು ಉತ್ಪನ್ನಗಳ ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ. ಇತ್ತೀಚಿಗೆ ಧಾರಾವಾಹಿ ಗಳಲ್ಲಾಗಲಿ ಅಥವಾ ಸಿನಿಮಾಗಳಲ್ಲಾಗಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ. ಆದರೂ ಲಕ್ಷಣ ಧಾರಾವಾಹಿ (Serials)ಯಲ್ಲಿ ಇತ್ತೀಚಿಗೆ ಅತಿಥಿ (guest)ಯಾಗಿ ಬಂದಿದ್ದರು. ವೈಷ್ಣವಿ ಗೌಡ ಇನ್ನಷ್ಟು ಧಾರಾವಾಹಿಗಳಲ್ಲಿ ನಟಿಸಲಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಎಂದು ಅವರ ಅಭಿಮಾನಿಗಳು ಮತ್ತೆ ಮತ್ತೆ ಕಮೆಂಟ್ (Comment) ಮಾಡಿ ವೈಷ್ಣವಿ ಅವರನ್ನ ಕೇಳಿಕೊಳ್ಳುತ್ತಿದ್ದಾರೆ.

Actress Vaishnavi GowdaKannada FilmKannada serialಕನ್ನಡ ಸಿನಿಮಾಧಾರಾವಾಹಿವೈಷ್ಣವಿ ಗೌಡಸನ್ನಿಧಿ