Vastu Tips: ಮೂರು ಕಾಲಿನ ಟೋಡ್ ಎಂದು ಕರೆಯಲ್ಪಡುವಂತಹ ಶುಭಸೂಚಕವಾಗಿರುವಂತಹ ಫೆಂಗ್ ಶೂಯಿ ಕಪ್ಪೆಯ ಮೂರ್ತಿಯನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ಸಾಕಷ್ಟು ಲಾಭಗಳು ಉಂಟಾಗುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಈ ಕಪ್ಪೆಯ ಮೂರ್ತಿ ಅನ್ನೋದು ಸಾಕಷ್ಟು ವಿಚಾರಗಳಲ್ಲಿ ಒಳ್ಳೆಯ ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಹಾಗಿದ್ರೆ ಬನ್ನಿ ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉಂಟಾಗುವಂತಹ ಪ್ರಯೋಜನಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಫೆಂಗ್ ಶೂಯಿ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆಗುವ ಪ್ರಯೋಜನಗಳು!
- ಫೆಂಗ್ ಶೂಯಿ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಗ್ರಹಣ ಆಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಇದ್ರೆ ಪಾಸಿಟಿವ್ ಎನರ್ಜಿಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ ಎಂದು ಹೇಳಬಹುದಾಗಿದೆ. ಇದರಿಂದಾಗಿ ಮನೆಯಲ್ಲಿ ಕೂಡ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನೀವು ಕಾಣಬಹುದಾಗಿದೆ.
- ಫೆಂಗ್ ಶೂಯಿ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಹ ಜನರ ಬುದ್ಧಿಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ತಮ್ಮ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕೂಡ ಸಹಾಯಕವಾಗುತ್ತದೆ ಹಾಗೂ ಇದರಿಂದಾಗಿ ಅವರ ಭವಿಷ್ಯ ಕೂಡ ಸುಧಾರಣೆಗೊಳ್ಳುತ್ತದೆ ಎಂದು ಹೇಳಬಹುದು.
- ಫೆಂಗ್ ಶೂಯಿ ಕಪ್ಪೆನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕವಾಗಿ ಕೂಡ ಸಾಕಷ್ಟು ಲಾಭವನ್ನು ಸಂಪಾದನೆ ಮಾಡಬಹುದಾಗಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ಕಂಡು ಬರುತ್ತಿದ್ದರೆ ಈ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದಾಗಿ ನಿಮ್ಮ ಮನೆಯಲ್ಲಿ ಹಣಕಾಸಿನ ಹಾಗೂ ಆದಾಯದ ಜಿಗಿತ ಹೆಚ್ಚಾಗಿ ಕಂಡು ಬರಲಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ಮನೆಯಲ್ಲಿ ಯಾರಾದ್ರೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
- ಫೆಂಗ್ ಶೂಯಿ ಕಪ್ಪೆಯನ್ನು ಕೆಂಪು ರಿಬ್ಬನ್ ನಲ್ಲಿ ಕಟ್ಟಿ ಇಟ್ರೆ, ಮನೆಯಲ್ಲಿರುವಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ದೂರವಾಗುತ್ತವೆ ಹಾಗೂ ಯಾವುದೇ ರೀತಿಯ ಅಶಾಂತಿಗೆ ನಿಮ್ಮ ಮನೆಯಲ್ಲಿ ಜಾಗ ಇರೋದಿಲ್ಲ. ಪ್ರತಿಯೊಂದು ಸಮೃದ್ಧಿತನ ಎನ್ನುವುದು ಇದನ್ನ ಮನೆಯ ಮುಖ್ಯ ಅಲಂಕಾರಿಕ ಜಾಗದಲ್ಲಿ ಇಡುವುದರಿಂದಾಗಿ ಸರಿಯಾಗುತ್ತದೆ. ಇದನ್ನು ಅತ್ಯಂತ ಪವಿತ್ರ ವಸ್ತುಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ ಹೀಗಾಗಿ ಇದನ್ನು ಮನೆಯಲ್ಲಿ ಹೊಂದುವುದರಿಂದಾಗಿ ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಕೂಡ ನಿಮ್ಮ ಜೀವನದಿಂದ ದೂರ ಹೋಗುತ್ತವೆ ಹಾಗೂ ನೀವು ಜೀವನದಲ್ಲಿ ಬಯಸುವಂತಹ ಉದ್ಯೋಗ ವ್ಯಾಪಾರ ಆದಾಯದ ಪ್ರತಿಯೊಂದು ಸಾಧ್ಯತೆಗಳು ಕೂಡ ಉಂಟಾಗುವಂತಹ ಸಮಯ ಸಮೀಪವಾಗಿದೆ ಎಂದು ಹೇಳಬಹುದಾಗಿದೆ.