Vastu Tips: ನಿಮ್ಮ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ ಸಾಕು. ತಾಯಿ ಖುಷಿಯಿಂದ ಅಲ್ಲೇ ಇರುತ್ತಾರೆ

Vastu Tips: ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ನಂಬಿಕೆಗಳು, ಆಚರಣೆಗಳು ಇವೆ. ಇವೆಲ್ಲವಕ್ಕೂ ವೈಜ್ಞಾನಿಕ ಹಿನ್ನೆಲೆಯೂ ಇದೆ. ಇದನ್ನು ಹಲವು ಪ್ರಯೋಗಗಳು ಸಾಬೀತು ಮಾಡಿದೆ. ಪ್ರತಿಯೊಬ್ಬ ಮನುಷ್ಯನು ದುಡಿಯುವುದೇ ಹಣ ಗಳಿಸುವ ಸಲುವಾಗಿ. ಕೆಲವೊಮ್ಮೆ ಎಷ್ಟೇ ದುಡಿದರೂ ಹಣ ನಮ್ಮ ಕೈಯ್ಯಲ್ಲಿ ನಿಲ್ಲುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ನಾವು ಹೇಳುವ ರೀತಿ ಮಾಡಿ. ಲಕ್ಷ್ಮಿದೇವಿಯು (Goddess Lakshmi)  ಸದಾ ಕಾಲ ನಿಮ್ಮ ಮನೆಯಲ್ಲಿ ವಾಸವಾಗಿರುತ್ತಾಳೆ.

ಲಕ್ಷ್ಮಿದೇವಿಯು ರಾತ್ರಿಯ ವೇಳೆ, ಅದರಲ್ಲೂ ಹುಣ್ಣಿಮೆಯ ದಿನ ರಾತ್ರಿ ಮನೆಗೆ ಆಗಮಿಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗಾಗಿ ಲಕ್ಷ್ಮಿದೇವಿಯು ಬರುವ ವೇಳೆಗೆ ಮನೆಯ ಮುಖ್ಯಧ್ವಾರವನ್ನು ಸ್ವಚ್ಛವಾಗಿಡಬೇಕು. ಲಕ್ಷ್ಮಿದೇವಿಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮನೆಗೆ ಬರುವ ರೀತಿ ಇರಬೇಕು. ಯಾರ ಮನೆಯಲ್ಲಿ ಸ್ವಚ್ಛತೆ ಇದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ. ಇದನ್ನೂ ಓದಿ: Job Opportunity: ಲಕ್ಷ ಲಕ್ಷ ಸಂಬಳ ನೀಡುವ ಉದ್ಯೋಗ ಖಾಲಿ: ಈ ಕೂಡ ಅರ್ಜಿ ಹಾಕಿ ಕೆಲಸ ಪಡೆಯಿರಿ. ಹೇಗೆ ಗೊತ್ತೇ??

ದೇವರ ಮನೆಯಲ್ಲಿ ಎಂದಿಗೂ ಕತ್ತಲೆ ಇರಬಾರದು. ಸದಾಕಾಲ ನಂದಾದೀಪ ಉರಿಯುತ್ತಲೇ ಇರಬೇಕು. ರಾತ್ರಿ ಮಲಗುವ ಮುನ್ನ ದೀಪ ಹಚ್ಚಿಡಬೇಕು. ಅದರಲ್ಲೂ ಸಾಧ್ಯವಾದರೆ ತುಪ್ಪದ ದೀಪ ಹಚ್ಚಿದರೆ ಉತ್ತಮ. ಇದು ಲಕ್ಷ್ಮಿದೇವಿಗೆ ಬಹಳ ಇಷ್ಟವಾಗುತ್ತದೆ. ಕತ್ತಲೆ ಇರುವ ಸ್ಥಳಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಗಳು ಇರುವ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಉತ್ತರ ದಿಕ್ಕಿಗೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಇದನ್ನು ಸಂಪತ್ತಿನ ದಿಕ್ಕು ಎಂದು ಭಾವಿಸಲಾಗುತ್ತದೆ. ಹಾಗಾಗಿ ಈ ದಿಕ್ಕನ್ನು ಸದಾಕಾಲ ಸ್ವಚ್ಛವಾಗಿಡಬೇಕು. ರಾತ್ರಿ ಮಲಗುವ ಮುನ್ನ ಪೊರಕೆಯನ್ನು ಸರಿಯಾಗಿ ಇಡಬೇಕು. ಅದು ಯಾರ ಕಾಲಿಗೂ ತಾಗದಿರುವ ಜಾಗದಲ್ಲಿ ಇಡಬೇಕು. ಪೊರಕೆಯ ಮೇಲೆ ನಿಲ್ಲುವುದು ಲಕ್ಷ್ಮಿದೇವಿಗೆ ಅವಮಾನ ಮಾಡಿದಂತೆ. ಆದ್ದರಿಂದ ಈ ರೀತಿ ಯಾವಾಗಲೂ ಮಾಡಬಾರದು. ರಾತ್ರಿ ಮಲಗುವ ಮುನ್ನ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಇದನ್ನೂ ಓದಿ: Famous Actor getting Divorce: ಮತ್ತೊಮ್ಮೆ ದೇಶವೇ ಶೇಕ್: ಎರಡೇ ವರ್ಷಕ್ಕೆ ವಿಚ್ಚೇದನ ಪಡೆಯಲು ಮುಂದಾದ ಟಾಪ್ ನಟ. ಏನಾಗಿದೆ ಗೊತ್ತೇ??

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದೆ ಎಂದು ನಿಮಗೆ ಅನಿಸಿದರೆ ರಾತ್ರಿ ಲವಂಗವನ್ನು ಕರ್ಪೂರದಿಂದ ಸುಟ್ಟು ಹಾಕಬೇಕು. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

12 zodiac signsAstrologyHoroscopeಜ್ಯೋತಿಷ್ಯಾಸ್ತ್ರ