Kannada Recipe: ಸುಟ್ಟ ಬೆಳ್ಳುಳ್ಳಿಯಿಂದ ತಯಾರಿಸಿ ರುಚಿಯಾದ ಫ್ರೈಡ್ ರೈಸ್!

Kannada Recipe: ಫ್ರೈಡ್ ರೈಸ್ ಪ್ರಿಯರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಅದರಲ್ಲೂ ವೆಜಿಟೇಬಲ್ ಫ್ರೈಡ್ ರೈಸ್, ಬೇಬಿ ಕಾರ್ನ್ ಫ್ರೈಡ್ ರೈಸ್, ಮಶ್ರೂಮ್ ಫ್ರೈಡ್ ರೈಸ್ ಮೊದಲಾದವು ಬೆಂಗಳೂರು ನಗರದಲ್ಲಿಯೂ ತುಂಬಾನೇ ಫೇಮಸ್. ನಾವಿವತ್ತು ಸುಟ್ಟ ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಫ್ರೈಡ್ ರೈಸ್ ವಿಧಾನವನ್ನು ಹೇಳ್ತೀವಿ. ತಮಮ್ಡೇ ಟ್ರೈ ಮಾಡಿ ನೋಡಿ.

Kannada Recipe: ಸುಟ್ಟ ಬೆಳ್ಳುಳ್ಳಿಯಿಂದ ತಯಾರಿಸಿ ರುಚಿಯಾದ ಫ್ರೈಡ್ ರೈಸ್! https://sihikahinews.com/amp/veg-burnt-garlic-fried-rice-recipe/

ಸುಟ್ಟ ಬೆಳ್ಳುಳ್ಳಿ ಫ್ರೈಡ್ ಮಾಡಲು ಬೇಕಾಗುವ ಸಾಮಗ್ರಿಗಳು ಏನೇನು!

2 ಚಮಚ ಎಣ್ಣೆ

10 ಎಸಳು ಬೆಳ್ಳುಳ್ಳಿ – ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ

1 ಇಂಚು ಶುಂಠಿ

2 ಹಸಿ ಮೆಣಸಿನಕಾಯಿ

2 ಚಮಚ ಸ್ಪ್ರಿಂಗ್ ಆನಿಯನ್

ಅರ್ಧ ಕತ್ತರಿಸಿದ ಈರುಳ್ಳಿ

ಅರ್ಧ ಕತ್ತರಿಸಿದ ಕ್ಯಾರೆಟ್

ಅರ್ಧ ಕ್ಯಾಪ್ಸಿಕಂ

10 ಬೀನ್ಸ್ (ಕತ್ತರಿಸಿದ)

 ಸ್ವೀಟ್ ಕಾರ್ನ್ ಸ್ವಲ್ಪ

2 ಚಮಚ ಚಿಲ್ಲಿ ಸಾಸ್

2 ಚಮಚ  ಸೋಯಾ ಸಾಸ್

ಒಂದು ಚಮಚ ವಿನೆಗರ್

3 ಚಮಚ ಎಲೆಕೋಸು ಹೆಚ್ಚಿದ್ದು

ಒಂದು ಚಮಚ ಕಾಳು ಮೆಣಸಿನ ಪುಡಿ

1 ಚಮಚ ಉಪ್ಪು

ಬೇಯಿಸಿದ ಅನ್ನ

ಮಾಡುವ ವಿಧಾನ ಹೇಗೆ?

ಮೊದಲಿಗೆ, ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಮತ್ತು ಅದು ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಈಗ ಶುಂಠಿ, ಹಸಿ ಮೆಣಸಿನಕಾಯಿ, ಸ್ಪ್ರಿಂಗ್ ಈರುಳ್ಳಿ ಸೇರಿಸಿ  ಹುರಿಯಿರಿ. ಬಳಿಕ ಹೆಚ್ಚಿದ ಈರುಳ್ಳಿ ಸೇರಿಸಿ, ಈರುಳ್ಳಿ ಬಣ್ಣ ಬದಲಾಗುವವರೆಗೆ ಬೇಯಿಸಿ. ನಂತರ ಹೆಚ್ಚಿಟ್ಟುಕೊಂಡ ಎಲ್ಲಾ ತರಕಾರಿಗಳನ್ನೂ ಸೇರಿಸಿ ಐದು ನಿಮಿಷ ಬೇಯಿಸಿ. ತರಕಾರಿಗಳನ್ನು ತುಂಬಾ ಮೆತ್ತಗಾಗುವವರೆಗೆ ಬೇಯಿಸಬೇಡಿ.  ನಂತರ ತರಕಾರಿಗಳ ಮಧ್ಯದಲ್ಲಿ ಜಾಗ ಮಾಡಿ ಅದರಲ್ಲಿ ಚಿಲ್ಲಿ ಸಾಸ್ ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.

ಈಗ  ಹೆಚ್ಚಿದ ಎಲೆಕೋಸು, ಕಾಳು ಮೆಣಸಿನ ಪುಡಿ ಮತ್ತು  ಉಪ್ಪು ಸೇರಿಸಿ ಹುರಿಯಿರಿ. ಬಳಿಕ  ಬೇಯಿಸಿದ ಅನ್ನ,  ಮತ್ತೆ ಸ್ವಲ್ಪ ಕಾಳು ಮೆಣಸಿನ ಪುಡಿ  ಹಾಗೂ ಉಪ್ಪು ಸೇರಿಸಿ. ಅನ್ನವನ್ನು ಮುರಿಯದೆ ಇರುವ ರೀತಿಯಲ್ಲಿ ಮಿಕ್ಸ್ ಮಾಡಿ.  ಕೊನೆಯಲ್ಲಿ ಸ್ಪ್ರಿಂಗ್ ಈರುಳ್ಳಿ ಹಾಕಿದರೆ ಬೆಳ್ಳುಳ್ಳಿ ಫ್ರೈಡ್ ರೈಸ್ ಸವಿಯಲು ಸಿದ್ಧ!

Fried RiceLifestyleRecipeಕನ್ನಡ ರೆಸಿಪಿಬೆಳ್ಳುಳ್ಳಿ ರೈಸ್ಸುಲಭ ಅಡುಗೆ
Comments (0)
Add Comment