ಹೊಸ ಶಪಥ ಮಾಡಿದ ಕಿಂಗ್ ಕೊಹ್ಲಿ: ನಾನು ಏನು ಬೇಕಾದರೂ ಮಾಡಲು ಸಿದ್ದ ಎಂದ ಕೊಹ್ಲಿ; ಯಾಕೆ ಗೊತ್ತೆ?? ಟಾರ್ಗೆಟ್ ಏನು ಗೊತ್ತೇ!

ಟೀಂ ಇಂಡಿಯಾವನ್ನು ಸುವ್ಯವಸ್ಥಿತವಾಗಿಯೇ ಮುಂದುವರೆಸಿದ್ದ ಮಾಜಿ ನಾಯಕ ವಿರಾಟ್ ಕೊಯ್ಲಿ ಇತ್ತೀಚಿಗೆ ಸಾಕಷ್ಟು ಸೋಲನ್ನು ಅನುಭವಿಸಿದರು. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಕಳೆದ ಎರಡು ವರ್ಷಗಳಿಂದ ಮೂರಂಕೆಯ ಸ್ಕೋರ್ ಆಗಲೇ ಇಲ್ಲ.  ಹಾಗಾಗಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು ಕಿಂಗ್ ಕೊಯ್ಲಿ!

2022ರ ಏಷ್ಯಾ ಕಪ್ ಟೂರ್ನಿ ಇದೇ ಬರುವ ಆಗಸ್ಟ್‌ 27ರಿಂದ ಸಪ್ಟಂಬರ್‌ 11ರವರೆಗೆ ನಡೆಯಲಿದೆ. ಶ್ರಿಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯ ದ್ವೀಪ ರಾಷ್ಟ್ರದಲ್ಲಿನ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಪರಿಸ್ಥಿತಿಗಳ ಸಮಸ್ಯೆಯಿಂದಾಗಿ ಏಷ್ಯಾ ಕಪ್‌ ಟೂರ್ನಿಯನ್ನು ಯುಎಇಯಲ್ಲಿ ನಡೆಯಲಿದೆ.

ಐಸಿಸಿ ಟಿ20 ವಿಶ್ವಕಪ್‌ ಆಸ್ಟ್ರೇಲಿಯಾದಲ್ಲಿನಡೆಯಲಿದ್ದು ಅಕ್ಟೋಬರ್‌ 16 ರಿಂದ ನವೆಂಬರ್‌ 13ಎಂದು ಘೋಷಿಸಲಾಗಿದೆ. ಅಂದಹಾಗೆ ಮುಂದಿನ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ.  ಮಾಜಿ ನಾಯಕ ವಿರಾಟ್‌ ಕೊಹ್ಲಿ ಕಳೆದ ಮೂರು ವರ್ಷಗಳಿಂದ ಶತಕ ಸಿಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಕೊನೆ ಇಂದಿಗೂ ಮತ್ತೆ ಅವರ ದಾಖಲೆಯನ್ನೇ ಅವರಿಗೆ ಮುರಿಯಲು ಸಾಧ್ಯವಾಗಿಲ್ಲ.

ಇದೀಗ ವಿರಾಟ್ ಕೊಹ್ಲಿ, ಮುಂಬರುವ ವಿಶ್ವಕಪ್ ಹಾಗೂ ಏಷ್ಯಾ ಕಪ್ ಪಂದ್ಯಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಸ್ಟಾರ್ ಸ್ಪೋಟ್ಶ್ ನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಈ ಬಗ್ಗೆ ತಿಳಿಸಿದ್ದು, ಸ್ಟಾರ್ ಸ್ಪೋರ್ಟ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿರಾಟ್ ಮಾತುಗಳನ್ನು ಹಂಚಿಕೊಂಡಿದೆ.

“ನನ್ನ ಮುಖ್ಯ ಗುರಿ ಏಷ್ಯಾ ಕಪ್‌ ಹಾಗೂ ವಿಶ್ವಕಪ್‌ ಗೆಲ್ಲಲು ಪ್ರಯತ್ನಿಸುವುದು, ಕಪ್ ಗೆಲ್ಲಲು ಭಾರತ ತಂಡಕ್ಕೆ ನೆರವಾಗುವುದು. ಇದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ,” ಎಂದು ವಿರಾಟ್‌ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಈ ತಮ್ಮ ಗುರಿಯನ್ನು ಸಾಧಿಸಿಕೊಳ್ಳಲು ಸದ್ಯ ವಿರಾಟ್ ಕೊಹ್ಲಿ ಯವರ ಪ್ರಯತ್ನ ಸಾಗುತ್ತಿದೆ.

ಅಂದಹಾಗೆ ಮುಂಬರುವ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಒನ್ ಡೇ ಇಂಟರ್ನ್ಯಾಷನಲ್ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಆಡುವ ನಿರೀಕ್ಷೆಯಿದೆ. ಆಗಸ್ಟ್‌ 18, 20, 22ರಂದು ಈ ಪಂದ್ಯಗಳು ನಡೆಯಲಿವೆ.

Comments (0)
Add Comment