Weekend with Ramesh: ನಿಜಕ್ಕೂ ಸಾಧಕರ ಸೀಟ್ನಲ್ಲಿ ರಮೇಶ್ ಜೊತೆ ಕುಳಿತುಕೊಳ್ಳಲು ಆ ಇಬ್ಬರು ಸಾಧಕರಿಗೆ ಇರುವಷ್ಟು ಅರ್ಹತೆ ಬೇರೆ ಯಾರಿಗೂ ಇಲ್ಲ; ಅವರು ಯಾರು ಗೊತ್ತೆ?

Weekend with Ramesh: ಈಗ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಜೋರಾಗಿದೆ. ಇದು ವಾಹಿನಿಗಳನ್ನೂ ಬಿಟ್ಟಿಲ್ಲ. ಹಾಗಾಗಿಯೇ ಎಲ್ಲ ವಾಹಿನಿಗಳು ತಾಮುಂದು ನಾ ಮುಂದು ಎನ್ನುವಂತೆ ರಿಯಾಲಿಟಿ ಶೋಗಳ ಬೆನ್ನು ಬಿದ್ದಿವೆ. ಸಿನೆಮಾಗಿಂತಲೂ ಹೆಚ್ಚು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳು ಹೆಚ್ಚು ಜನಾಕರ್ಷಣೆಗೆ ಕಾರಣವಾಗಿದೆ. ಇದರಿಂದಾಗಿಯೇ ಈ ರಿಯಾಲಿಟಿ ಶೋಗಳು ಹೆಚ್ಚಿನ ಟಿ.ಆರ್.ಪಿ ಗಳಿಸಲು ಸಾಧ್ಯವಾಗಿದೆ. ಈ ರೀತಿ ಹೆಚ್ಚಿನ ಟಿಆರ್ಪಿ ಗಳಿಸಿ ರಿಯಾಲಿಟಿ ಶೋಗಳಲ್ಲಿ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೂಡ ಒಂದು.
ಈಗಾಗಲೇ ವಿಕೆಂಡ್ ವಿತ್ ರಮೇಶ್ ಎರಡು ಸೀಸನ್ಗಳು ಪ್ರಸಾರವಾಗಿವೆ. ಹೆಸರೇ ತಿಳಿಸುವಂತೆ ಈ ಕಾರ್ಯಕ್ರಮವನ್ನು ಸ್ಯಾಂಡಲ್ವುಡ್ ಪ್ರತಿಭಾವಂತ ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಾರೆ. ಪ್ರತಿ ಎಪಿಸೋಡಿನಲ್ಲಿ ಒಬ್ಬರು ಸಾಧಕರನ್ನು ಕರೆಯಿಸಿ ಅವರನ್ನು ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವರ ಸಾಧನೆಯನ್ನು ಜನರಿಗೆ ತಿಳಿಸಲಾಗುತ್ತದೆ.
ಈಗಾಗಲೇ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟರಾದ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್, ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರೆಬೆಲ್ ಸ್ಟಾರ್ ಅಂಬರೀಷ್, ರಿಯಲ್ ಸ್ಟಾರ್ ಉಪೇಂದ್ರ, ಕಾಶಿನಾಥ್ ಅನಂತ್ನಾಗ್, ದೊಡ್ಡಣ್ಣ, ಸಾಧುಕೋಕಿಲ, ಲಕ್ಷ್ಮಿ ಭಾರತಿ ವಿಷ್ಣುವರ್ಧನ್, ಗಾಯಕರಾದ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಹಲವರು ಈ ಸಾಧಕರ ಸೀಟಿನಲ್ಲಿ ಕುಳಿತಿದ್ದಾರೆ. ಈ ಕಾರ್ಯಕ್ರಮ ಯುವ ಜನರಿಗೆ ಸ್ಫೂರ್ತಿ ನೀಡುವ ಕಾರ್ಯಕ್ರಮ ಎಂದರೆ ತಪ್ಪಾಗುವುದಿಲ್ಲ. ಹಾಗಾಗಿಯೇ ಈ ಕಾರ್ಯಕ್ರಮವನ್ನು ಜನರು ಹೆಚ್ಚಾಗಿ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಇದಕ್ಕೆ ರಮೇಶ್ ಅರವಿಂದ್ ಅವರ ನಿರೂಪಣೆಯೂ ಒಂದು ಕಾರಣ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: Duniya Vijay Bheema Heroine: ನನ್ ಕಲರ್ ಗೆ ಮ್ಯಾಚ್ ಆಗೋ ಹುಡುಗಿಯನ್ನೇ ನಾಯಕಿ ಮಾಡಿದ್ದೇನೆ ಎಂದ ಕರಿ ಚಿರತೆ ವಿಜಯ್; ಭೀಮಾ ಸಿನಿಮಾದ ಹಿರೋಯಿನ್ ನೋಡಿ ವಿಜಯ್ ಪತ್ನಿ ಕೀರ್ತಿ ಹೇಳಿದ್ದೇನು ಗೊತ್ತಾ? ಯಬ್ಬಾ!

ಈಗ ಜೀ ಕನ್ನಡ ವಾಹಿನಿಯು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಮತ್ತೆ ಶುರು ಮಾಡಲು ಸಿದ್ದತೆ ಆರಂಭಿಸಿದೆ. ಈಗಾಗಲೇ ಒಂದು ಪ್ರೋಮೋವನ್ನು ಸಹ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಈ ಬಾರಿ ಈ ಸಾಧಕರ ಸೀಟಿನಲ್ಲಿ ಮೊದಲು ಕಾಂತಾರ ಸಿನೆಮಾದ ಮೂಲಕ ವಿಶ್ವ ಮಟ್ಟದಲ್ಲಿ ಪರಿಚಿತರಾದ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ ಅವರು ಕೂರಬೇಕು ಎಂದು ಜನರು, ರಿಶಬ್ ಶೆಟ್ಟಿ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಇವರ ಜೊತೆ ಇನ್ನು ಹಲವು ನಟರ ಹೆಸರುಗಳು ಕೂಡ ಆಗಾಗ ಕೇಳಿ ಬರುತ್ತಿವೆ.

ಈ ಎಲ್ಲ ಸಾಧಕರ ಜೊತೆ ಜನರ ಮಧ್ಯೆ ಇದ್ದು ಯಾವುದೇ ಪ್ರಶಸ್ತಿಗಳಿಗೆ, ಪುರಸ್ಕಾರಗಳಿಗೆ ಆಸೆ ಪಡದೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಯುವ ಪ್ರತಿಭೆಗಳಾದ ಯೂಟ್ಯೂಬರ್ ಡಾ. ಬ್ರೋ ಹಾಗೂ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಕಂಕಣ ತೊಟ್ಟಿರುವ ಅನು ಅಕ್ಕ ಈ ಬಾರಿ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

ಸೋಶಿಯಲ್ ಮೀಡಿಯಾಗಳನ್ನು ಕೇವಲ ರೀಲ್ಸ್ ಮಾಡಲು ಬಳಸಿಕೊಳ್ಳುವವರ ಮಧ್ಯೆ ಜನರಿಗೆ ಪ್ರಪಂಚದ ಮಾಹಿತಿ ನೀಡುತ್ತಿರುವ ಅದಕ್ಕಾಗಿಯೇ ಹಲವಾರು ದೇಶಗಳನ್ನು ಸುತ್ತಿರುವ ಡಾ.ಬ್ರೋ ಎಂದೇ ಖ್ಯಾತರಾದ ಗಗನ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ. ಈಗಾಗಲೇ ಇವರು ಪಾಕಿಸ್ತಾನ, ಅಪಘಾನಿಸ್ತಾನ್, ದುಬೈ ಇಂಡೋನೇಷಿಯಾ, ರಷ್ಯಾ ಸೇರಿದಂತೆ ೧೦ ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಅಲ್ಲಿನ ಸಾಮಾನ್ಯ ಜನರ ಜೀವನ ಹೇಗಿರುತ್ತದೆ. ಅಲ್ಲಿನ ಜನರ ಜೀವನ ವಿಧಾನಗಳನ್ನು ನಮ್ಮ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಹೀಗೆ ಒಬ್ಬನೇ ದೇಶಗಳನ್ನು ಸುತ್ತುವುದು ಕಡಿಮೆ ಸಾಧನೆಯಲ್ಲ. ಗಗನ್ ಅವರಿಗೆ ಈಗ ಕೇವಲ ೨೨ ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಇವರ ಡಾ. ಬ್ರೋ ವಾಹಿನಿಗೆ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾನೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ನಲ್ಲಿರುವ ಹಾಡುಗಳಿಗೆ ನೃತ್ಯ ಮಾಡುವುದು, ಯಾವುದು ಯಾವುದೋ ಉಒಯೋಗಕ್ಕೆ ಬಾರದ ವಿಡಿಯೋ ಮಾಡುವ ಹೆಣ್ಣು ಮಕ್ಕಳ ನಡುವೆ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿರುವ ಅನು ಅಕ್ಕ ಅವರು ಬಹಳ ವಿಭಿನ್ನವಾಗಿ ನಿಲ್ಲುತ್ತಾರೆ. ಇವರು ರಾಯಚೂರು ಜಿಲ್ಲೆಯವರು. ಇವರು ಪದವಿ ಪಡೆದಿದ್ದು, ಕನ್ನಡ ಶಾಲೆಗಳ ಸ್ಥಿತಿ ಕಂಡು ಬೇಸರಗೊಂಡು ತಾವೇ ಸ್ವತಹ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇವರು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಇವರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದರೆ ಯುವಜನತೆಗೆ ಒಂದು ರೀತಿಯಲ್ಲಿ ಸ್ಪೂರ್ತಿ ಸಿಕ್ಕಂತಾಗುತ್ತದೆ.
ಇವರಿಬ್ಬರು ಸಾಧಕರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲೇಬೇಕು ಎನ್ನುವವರು ಈ ಬರಹವನ್ನು ಜೀ ಕನ್ನಡ ವಾಹಿನಿಗೆ ತಲುಪುವರೆಗೆ ಶೇರ್ ಮಾಡಿ.

weekend-with-rameshZee channelಜೀ ಕನ್ನಡಝೀ ಕನ್ನಡ