Weekly Horoscope: ವಾರದ ಮೊದಲ ದಿನದಿಂದಲೇ ಈ ರಾಶಿಯವರಿಗೆ ಹೊಡೆಯಲಿದೆ ಬಂಪರ್ ಲಾಟರಿ; ಆ ಪುಣ್ಯವಂತ ರಾಶಿಗಳು ಯಾವುವು ಗೊತ್ತೇ?

Weekly Horoscope: ಇನ್ನು ಹೊಸ ದಿನ, ಹೊಸ ವಾರದ ಆರಂಭ. ಚಂದ್ರನ ಸಂಕ್ರಮಣ ತುಲಾ ರಾಶಿಯಲ್ಲಿ ನಡೆಯುತ್ತಿದೆ. ಗೃಹ ಮತ್ತು ರಾಶಿಗಳ ಪ್ರಭಾವದಿಂದಾಗಿ ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದ್ದರೆ ಇನ್ನು ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಹಾಗಾದ್ರೆ ಈ ದಿನದ ರಾಶಿಯ ಫಲಾಫಲಗಳನ್ನು ನೋಡುವುದಾದರೆ

ಮೇಷ ರಾಶಿ; ಇಂದು ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೊಸ ಆದಾಯ ಸಿಗುತ್ತದೆ. ಆರೋಗ್ಯದಲ್ಲಿಯೂ ಸುಧಾರಣೆ ಕಾಣುತ್ತೀರಿ. ಅಚಾನಕ್ ಆಗಿ ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸಂತೋಷಪಡುತ್ತೀರಿ. ಇನ್ನೂ ಉದ್ಯೋಗದ ಜನರಿಗೆ ಅದೃಷ್ಟದ ದಿನ ಸೋಮವಾರ ಉಪವಾಸ ಆಚರಿಸುವುದು ಒಳ್ಳೆಯದು ಶಿವಲಿಂಗಕ್ಕೆ ನೈವೇದ್ಯವನ್ನ ಅರ್ಪಿಸಿ.

ವೃಷಭ ರಾಶಿ; ಆರ್ಥಿಕವಾಗಿ ಸಬಲರಾಗುತ್ತೀರಿ. ಎಲ್ಲಿಂದಲೋ ಹಣ ಹರಿದು ಬರುತ್ತದೆ, ಉತ್ತಮ ಲಾಭ ಸಿಗುತ್ತದೆ. ತಂದೆಯ ಆರೋಗ್ಯ ಸ್ವಲ್ಪ ಕ್ಷೀಣಿಸಬಹುದು ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ಮದುವೆ ಆಗದೆ ಇರುವವರಿಗೆ ಮದುವೆಯ ಪ್ರಸ್ತಾಪ ಬರಬಹುದು ಈ ದಿನ ಶಿವಲಿಂಗಕ್ಕೆ 21 ಬಿಲ್ವ ಪತ್ರೆಯನ್ನು ಅರ್ಪಿಸಿ.

ಮಿಥುನ ರಾಶಿ; ಮಿಥುನ ರಾಶಿಯವರಿಗೆ ದಿನ ಉತ್ತಮವಾಗಿದೆ ಮಾನಸಿಕ ಚಿಂತನೆಗಳು ದೂರಾಗಬಹುದು ಸಂಬಂಧಗಳಲ್ಲಿ ಸ್ಪಷ್ಟತೆ ಇರುತ್ತದೆ ವ್ಯಾಪಾರದಲ್ಲಿ ಯಶಸ್ಸು ಕಾಣುತ್ತೀರಿ ಆಕಸ್ಮಿಕ ಖರ್ಚು ಇಂದು ಜಾಸ್ತಿ ಆದರೆ ಇದರಿಂದ ಆರ್ಥಿಕ ಹಿನ್ನಡೆ ಆಗುವುದಿಲ್ಲ. ನಿಮ್ಮ ಬೆಂಬಲಕ್ಕೆ ನಿಮ್ಮ ಕುಟುಂಬದ ಸದಸ್ಯರು ಇರುತ್ತಾರೆ. ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿದರೆ ಒಳ್ಳೆಯದು.

ಕಟಕ ರಾಶಿ; ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಲೇಬೇಕು ಶೀತದಿಂದ ಸಮಸ್ಯೆ ಅನುಭವಿಸಬೇಕಾಗಿತ್ತು ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತೀರಿ. ಆದಾಯದ ದೃಷ್ಟಿಯಿಂದ ದಿನ ಉತ್ತಮವಾಗಿದೆ ಆದರೆ ಖರ್ಚು ಕೂಡ ಅಷ್ಟೇ ಹೆಚ್ಚು ಮನೆಗೆ ಹೊಸ ವಸ್ತುಗಳನ್ನ ಖರೀದಿ ಮಾಡುತ್ತೀರಿ. ಬ್ರಹ್ಮ ಮುಹೂರ್ತದಲ್ಲಿ ಶಿವಾಚಾಲಿಸ ಅಥವಾ ಶಿವಷ್ಟಕವನ್ನು ಪಠಿಸಿದರೆ ಒಳಿತಾಗುತ್ತದೆ.

ಸಿಂಹ ರಾಶಿ; ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಆದಾಯದಲ್ಲಿ ಹೆಚ್ಚಳ. ಕುಟುಂಬದ ಕೆಲವು ಸದಸ್ಯರ ಮಾತುಗಳು ನಿಷ್ಪ್ರಯೋಜಕ ಎಂದು ನಿಮಗೆ ಅನ್ನಿಸಬಹುದು. ಇದರಿಂದ ಮನೆಯಲ್ಲಿ ಸಂತೋಷಕ್ಕೆ ಕೊರತೆ ಕಾಣಿಸುತ್ತದೆ ಏನೋ ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಕೂಡ ಮೂಡಬಹುದು ಇಂದು ಉಪವಾಸ ಮಾಡುವುದು ಮತ್ತು ಶಿವ  ಪಠಣೆ ಮಾಡಿ

ಕನ್ಯಾ ರಾಶಿ; ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಪಡೆಯುವ ದಿನ ಇದು. ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಅಂಕಗಳಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಉತ್ತಮ ಫಲಿತಾಂಶ ದೊರೆಯಲಿದೆ ಸ್ನೇಹಿತರೊಂದಿಗೆ ಸಮಯ ಕಳೆಯಲಿದ್ದೀರಿ. ಮಾನಸಿಕ ಶಾಂತಿ ಕೂಡ ಸಿಗುತ್ತದೆ ಶಿವಲಿಂಗಕ್ಕೆ ಕೆಂಪು ಅಥವಾ ಹಳದಿ ಶ್ರೀಗಂಧವನ್ನು ಲೇಪನ ಮಾಡಿ.

ತುಲಾ ರಾಶಿ: ಇಂದು ಬೆಳಿಗ್ಗೆಯಿಂದಲೇ ಕೆಲವು ಕೆಲಸಗಳು ಸರಿಯಾಗಿ ಆಗದೆ ಟೆನ್ಶನ್ ಮಾಡಿಕೊಳ್ಳುತ್ತೀರಿ ಆದರೆ ದಿನದ ಮಾಧ್ಯಮ ಸಮಯದ ಹೊತ್ತಿಗೆ ಇದು ದೂರಾಗುತ್ತದೆ ಉದ್ಯೋಗದಲ್ಲಿ ಬದಲಾವಣೆ ಬಗ್ಗೆ ಚಿಂತನೆ ಮಾಡುತ್ತೀರಿ. ನಿರ್ದಿಷ್ಟ ವಿಷಯದ ಬಗ್ಗೆ ಅತ್ತೆಯ ಜೊತೆಗೆ ಚರ್ಚೆ ಮಾಡುವ ಸಾಧ್ಯತೆ ಇದೆ ಮನೆಯಲ್ಲಿ ನೆಮ್ಮದಿ ಶಾಂತಿ ಇರುತ್ತದೆ ಪ್ರೀತಿಯ ಜೀವನದಲ್ಲಿ ಸ್ವಲ್ಪ ಉದ್ವಿಗ್ನತೆ ಕಾಣಿಸಿಕೊಳ್ಳಬಹುದು. ಪ್ರದೋಷ ಕಾಲದಲ್ಲಿ ಕಪ್ಪು ಎಳ್ಳು ನಿಶ್ಚಿತ ಅಕ್ಕಿಯನ್ನು ದಾನ ಮಾಡಿದರೆ ಒಳ್ಳೆಯದು.

ವೃಶ್ಚಿಕ ರಾಶಿ; ಮಧ್ಯಮ ಫಲ. ಆರ್ಥಿಕ ಮತ್ತು ಮಾನಸಿಕ ಕಾಳಜಿ ಮುಖ್ಯ ಕೆಲವು ಪ್ರಮುಖ ಕೆಲಸಗಳು ಇಂದು ಆಗುವುದಿಲ್ಲ. ಆದರೆ ತಾಳ್ಮೆಯಿಂದಾಗಬಹುದು ವಿರೋಧಿಗಳು ಕೂಡ ಪ್ರಾಬಲ್ಯದಿಂದ ನಿಮ್ಮ ಮುಂದೆ ನಿಲ್ಲುತ್ತಾರೆ. ಆದರೆ ನಿಮ್ಮ ಮಾತು ನಿಮ್ಮ ನಿಯಂತ್ರಣದಲ್ಲಿ ಇರಲಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು ಬಿಸಿಯಾದ ಪದಾರ್ಥಗಳನ್ನು ಸೇವಿಸಿ. ಸಕ್ಕರೆ ತುಪ್ಪ ಮತ್ತು ಹಿಟ್ಟಿನಿಂದ ಮಾಡಿದ ವಸ್ತುವನ್ನು ಶಿವನಿಗೆ ಅರ್ಪಿಸಿದರೆ ಒಳ್ಳೆಯದು.

ಧನು ರಾಶಿ; ಈ ದಿನ ಅನುಕೂಲಕರವಾದ ದಿನ ಖರ್ಚುಗಳನ್ನ ಮಾಡಬೇಕಾದ ಅನಿವಾರ್ಯತೆ ಇದ್ದರೂ ಆರ್ಥಿಕ ಸಮಸ್ಯೆ ಆಗುವುದಿಲ್ಲ. ವ್ಯಾಪಾರದಲ್ಲಿ ಹೂಡಿಕೆ ಮಾಡಬಹುದು ಬ್ಯಾಂಕ್ ನಲ್ಲಿ ಠೇವಣಿ ಇಡುವ ಸಾಧ್ಯತೆಯೂ ಇದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಇರುತ್ತದೆ ಈ ದಿನ ನೀವು ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ.

ಮಕರ ರಾಶಿ; ಇಂದು ನೀವು ಸ್ವಲ್ಪ ಸವಾಲನ್ನು ಎದುರಿಸಬೇಕಾಗುತ್ತದೆ ವಿರೋಧಿಗಳು ತಲೆ ಎತ್ತಲು ಪ್ರಯತ್ನಿಸಿದರೆ ನಿಮ್ಮ ಖರ್ಚುಗಳು ಕೂಡ ಒಂದೆಡೆ ಹೆಚ್ಚಾಗುತ್ತದೆ ಆದರೆ ಹೊಸತೇನನ್ನಾದರೂ ಮಾಡಲು ಇಂದು ಬಯಸುತ್ತೀರಿ. ನಿಮ್ಮ ಬಳಿ ಸಮಯ ಅಥವಾ ಹಣ ಇಂದು ಹೆಚ್ಚು ಉಳಿಯುವುದಿಲ್ಲ ಹಾಗಾಗಿ ಸ್ವಲ್ಪ ಅಸಹಾಯಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಮನೆಯವರೊಂದಿಗೆ ಸಮೀಪದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ ಪ್ರೀತಿ ಜೀವನದಲ್ಲಿ ಸಾಕಷ್ಟು ರೋಮ್ಯಾಂಟಿಕ್ ಆಗಿರುತ್ತದೆ. ಇಂದು ಶಿವಾಚಾಲಿಸವನ್ನು ಪಡಿಸಿ.

ಕುಂಭ ರಾಶಿ; ಕುಂಭ ರಾಶಿಯವರಿಗೆ ಇಂದು ಉತ್ತಮವಾದ ದಿನ ವಿವಾಹಿತರು ಮಗೂ ಪಡೆಯುವ ಸಾಧ್ಯತೆ ಇದೆ. ಯಾವುದೋ ಹಳೆಯ ಆಸೆ ಇಂದು ಪೂರೈಸಬಹುದು ಜೊತೆಗೆ ಬರಬೇಕಿದ್ದ ಹಣವು ನಿಮಗೆ ಸಿಗುತ್ತದೆ ಆದರೆ ಶೀತ ವಾತಾವರಣ ಆಗಿರುವುದರಿಂದ ಬೆನ್ನು ಮತ್ತು ಭುಜದಲ್ಲಿ ನೋವು ಕಾಣಿಸಿಕೊಳ್ಳಬಹುದು. ಆತ್ಮವಿಶ್ವಾಸದಿಂದ ಇರಿ ಯಾವುದೇ ಸಮಸ್ಯೆ ಇದ್ದರೂ ಸಂಗಾತಿಯ ಬೆಂಬಲದಿಂದ ಅದು ದೂರಾಗುತ್ತದೆ ಸೋಮವಾರದ ವ್ರತವನ್ನು ಮಾಡಿ ಶಿವನನ್ನ ಆರಾಧಿಸಿ.

ಮೀನ ರಾಶಿ; ಈ ದಿನ ನಿಮಗೆ ಮಿಶ್ರಫಲ ಕುಟುಂಬದ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ ನಿಮ್ಮ ಜವಾಬ್ದಾರಿಗಳನ್ನು ಪೂರೈಸುತ್ತೀರಿ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ ಇದರಿಂದ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಈ ವಾರ ಅದೃಷ್ಟ ನಿಮ್ಮೊಂದಿಗೆ ಇದೆ ನಿಮ್ಮ ಆರೋಗ್ಯವು ಸಹ ಅನುಕೂಲಕರವಾಗಿರುತ್ತದೆ ಬಿಳಿಯ ವಸ್ತುಗಳನ್ನ ದಾನ ಮಾಡಿದರೆ ಒಳ್ಳೆಯದು.

12 zodiac signsAstrologyHoroscopeಜ್ಯೋತಿಷ್ಯಾಸ್ತ್ರ