Dream: ನಿಮ್ಮ ಕನಸಿನಲ್ಲಿ ಆಗಾಗ ನೀರು ಕಾಣಿಸಿಕೊಳ್ಳುತ್ತದೆಯಾ? ಹಾಗಾದರೆ ಇತರ ಹಿಂದಿರುವ ಮರ್ಮವೇನು ಗೊತ್ತೇ?

Dream: ಸ್ನೇಹಿತರೆ ಕನಸು ಬೀಳುವುದು ಸಹಜ. ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಬಿದ್ದೇ ಬೀಳುತ್ತದೆ ಕೆಲವರಿಗೆ ರಾತ್ರಿ ಕಂಡ ಕನಸು ಬೆಳಿಗ್ಗೆ ಸ್ವಲ್ಪವೂ ನೆನಪಿರುವುದಿಲ್ಲ. ಆದರೆ ಇನ್ನೂ ಕೆಲವರಿಗೆ ಕಣ್ಣು ತೆರೆದಾಗ ತಮ್ಮ ಮುಂದೆ ಆ ದೃಶ್ಯ ನಡೆದಿತ್ತೇನೋ ಎನ್ನುವಷ್ಟರ ಮಟ್ಟಿಗೆ ಸ್ಪಷ್ಟವಾಗಿ ಸಂಪೂರ್ಣ ಕನಸು ನೆನಪಿರುತ್ತದೆ. ಕನಸು ನಮ್ಮ ಭವಿಷ್ಯದ ಕನ್ನಡಿಯು ಹೌದು. ಕೆಲವು ಒಳ್ಳೆಯ ಕನಸುಗಳು ಕೆಲವು ಕೆಟ್ಟ ಕನಸುಗಳು ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಕನಸಿನಲ್ಲಿ ಕಾಡುವ ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಸೂಚಿಸುತ್ತಿವೆ. ಜ್ಯೋತಿಷ್ಯಾಸ್ತ್ರದ ಪ್ರಕಾರ ನಾವು ಕನಸಿನಲ್ಲಿ ನೀರನ್ನು ಕಂಡರೆ ಶುಭವು ಅಶುಭವೋ ಎನ್ನುವ ಕುತೂಹಲ ಹಲವರಿಗೆ ಇರುತ್ತದೆ ಈ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

Dream: ನಿಮ್ಮ ಕನಸಿನಲ್ಲಿ ಆಗಾಗ ನೀರು ಕಾಣಿಸಿಕೊಳ್ಳುತ್ತದೆಯಾ? ಹಾಗಾದರೆ ಇತರ ಹಿಂದಿರುವ ಮರ್ಮವೇನು ಗೊತ್ತೇ? https://sihikahinews.com/amp/what-happens-if-you-see-water-in-dream/

ಮಳೆ ನೀರು (Rain Water) ಕಂಡರೆ: ವ್ಯಕ್ತಿ ತನ್ನ ಕನಸಿನಲ್ಲಿ ಮಳೆ ಬೀಳುವುದನ್ನ ನೋಡಿದರೆ ಅದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಕನಸಿನ ವಿಜ್ಞಾನದ ಪ್ರಕಾರ ಆ ವ್ಯಕ್ತಿ ಮುಂಬರುವ ದಿನಗಳಲ್ಲಿ ಉತ್ತಮ ಕೆಲಸ ಮಾಡಿ ಒಳ್ಳೆಯ ಸುದ್ದಿ ಹಾಗೂ ಯಶಸ್ಸನ್ನ ಪಡೆದುಕೊಳ್ಳುತ್ತಾನೆ ಎಂದು ಅರ್ಥ.

ಇದನ್ನೂ ಓದಿ: Astrology: ಈ ವರ್ಷದ ಕೊನೆಯ ಎರಡು ತಿಂಗಳುಗಳ ಗ್ರಹಗಳ ಬದಲಾವಣೆ ಈ ನಾಲ್ಕು ರಾಶಿಯವರ ಯೋಗವನ್ನೇ ಬದಲಿಸಲಿದೆ; ರಾಜ ಯೋಗಿ ರಾಶಿಗಳು ಯಾವವು ಗೊತ್ತಾ?

ಫ್ರವಾಹ (flood) ಕಂಡರೆ: ಇನ್ನು ಕನಸಿನಲ್ಲಿ ಪ್ರವಾಹದ ದೃಶ್ಯ ನೋಡಿದರೆ ಅದು ಖಂಡಿತವಾಗಿಯೂ ಅಶುಭ ಎನ್ನುತ್ತದೆ ಕನಸಿನ ಶಾಸ್ತ್ರ. ಕನಸಿನಲ್ಲಿ ಪ್ರವಾಹ ಕಂಡರೆ ಜೀವನದಲ್ಲಿಯೂ ಕೂಡ ಅಸ್ತವ್ಯಸ್ತವಾಗುತ್ತದೆ ಕನಸಿನಲ್ಲಿ ಪ್ರವಾಹದ ನೀರು ಕಂಡರೆ ಅದು ಮುಂದಿನ ಜೀವನದಲ್ಲಿ ಉಂಟಾಗುವ ತೊಂದರೆ ತೊಡಕುಗಳ ಮುನ್ಸೂಚನೆ. ಕುಟುಂಬದಲ್ಲಿ ಕೆಟ್ಟ ಸುದ್ದಿಗಳನ್ನು ಕೇಳಬಹುದು ಹಾಗಾಗಿ ಇಂತಹ ಕನಸು ಬಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಬಾವಿ ನೀರು (Well water) ಕಂಡರೆ: ಇನ್ನು ಯಾವುದೇ ವ್ಯಕ್ತಿ ಕನಸಿನಲ್ಲಿ ಬಾವಿ ನೀರನ ನೋಡಿದರೆ ಅದು ಮಂಗಳಕರ ಕನಸಿನ ವಿಜ್ಞಾನದ ಪ್ರಕಾರ ಈ ರೀತಿ ಕನಸು ಬಿದ್ದರೆ ಅದು ಮಂಗಳಕರವೂ ಹೌದು ಜೊತೆಗೆ ಭವಿಷ್ಯದಲ್ಲಿ ಆ ವ್ಯಕ್ತಿ ಆರ್ಥಿಕವಾಗಿ ಸಬಲರಾಗುತ್ತಾನೆ, ಶ್ರೀಮಂತನಾಗುತ್ತಾನೆ.

ಇದನ್ನೂ ಓದಿ: Pooja Tips: ಪೂಜೆ ಮಾಡುವಾಗ ಗಂಟೆ ಬಾರಿಸುವುದು, ಅದರಲ್ಲೂ ಗರುಡ ಗಂಟೆಯನ್ನೇ ಯಾಕೆ ಭಾರಿಸಬೇಕು ಗೊತ್ತೇ? ಇದರ ಹಿಂದೆಯೂ ಇದೆ ಒಂದು ವೈಜ್ಞಾನಿಕ ಕಾರಣ!

ಎಲ್ಲ ಕನಸುಗಳಿಗೆ ಅರ್ಥ ಇರೋದಿಲ್ಲ. ಆದರೆ ಕೆಲವು ಕನಸುಗಳು ಅರ್ಥವತ್ತಾಗಿರುತ್ತವೆ. ಆದರೆ ಅವು ನಮಗೆ ಅರ್ಥವಾಗುವಷ್ಟರಲ್ಲಿ ಸಮಯ ಮೀರಿರುತ್ತದೆ. ಹಾಗಾಗಿ ಯಾವ ಕನಸು ಬಿದ್ದರೆ ಶುಭ ಯಾವ ಕನಸು ಬಿದ್ದರೆ ಅಶುಭ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಟ್ಟಿನಲ್ಲಿ ನಿಮ್ಮ ಕನಸಿನಲ್ಲಿ ಯಾವುದೇ ರೀತಿಯಾದ ನೀರಿನ ಸೂಚನೆ ಕಂಡುಬಂದರೆ ಮರುದಿನ ನೀರಿಗೆ ಕೈಮುಗಿದು ವೀಳ್ಯದೆಲೆ ಅರಿಶಿಣವನ್ನು ಹಾಕಿ ಇದರಿಂದ ಭವಿಷ್ಯದಲ್ಲಿ ಉಂಟಾಗುವ ದೋಷವು ಕೂಡ ಪರಿಹಾರವಾಗುತ್ತದೆ.

AstrologyDreamHoroscopeLifestyleಕನಸುಜ್ಯೋತಿಷ್ಯಾಸ್ತ್ರ