Whatsapp Features: ಹ್ಯಾಕರ್ಸ್ ಗೂ ಗೊತ್ತಿಲ್ಲ ನೋಡಿ ಈ ವಾಟ್ಸಾಪ್ ಫೀರ್ಚರ್ಸ್; ಈಗಲೇ ನೀವು ಇದನ್ನ ತಿಳಿದುಕೊಳ್ಳಿ!

Whatsapp Features: ನಿಮ್ಮ ಕೈನಲ್ಲಿ ಸ್ಮಾರ್ಟ್ ಫೋನ್ (SmartPhone) ಇದ್ಯಾ? ಹಾಗಾದ್ರೆ ನೀವು ವಾಟ್ಸಾಪ್ ಬಳಕೆದಾರರೇ ಆಗಿರುತ್ತೀರಿ. ಹೌದು, ಇಂದು ಒಬ್ಬರಿಂದ ಒಬ್ಬರಿಗೆ ಉಚಿತವಾಗಿ ಸಂದೇಶ ಕಳುಹಿಸುವುದಕ್ಕೆ, ಸುಲಭವಾಗಿ ವಿಡಿಯೋ ಕಾಲ್ ಮಾಡಿ ಮಾತನಾಡುವುದಕ್ಕೆ, ಅಷ್ಟೇ ಯಾಕೆ ಹಣ ಪೇ ಮಾಡುವುದಕ್ಕೂ ಕೂಡ ವಾಟ್ಸಾಪ್ ನ್ನು ಬಳಸಲಾಗುತ್ತದೆ. ಹಿಡನ್ ಟ್ಯಾಲೆಂಟ್ (Hidden Talent) ಎನ್ನುವ ಹಾಗೆ ವಾಟ್ಸಾಪ್ ನಲ್ಲಿ ಸಾಕಷ್ಟು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಕೆಲವು ಎಲ್ಲರಿಗೂ ಗೊತ್ತು. ಇನ್ನೂ ಕೆಲವು ಗೊತ್ತಿಲ್ಲದೇ ಇರುವ ಹಾಗೂ ಬಳಕೆದಾರರಿಗೆ (Users) ಅನುಕೂಲವಾಗುವ ಸಾಕಷ್ಟು ಫೀಚರ್ಸ್ ಇವೆ. ಬನ್ನಿ ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Whatsapp Features: ಹ್ಯಾಕರ್ಸ್ ಗೂ ಗೊತ್ತಿಲ್ಲ ನೋಡಿ ಈ ವಾಟ್ಸಾಪ್ ಫೀರ್ಚರ್ಸ್; ಈಗಲೇ ನೀವು ಇದನ್ನ ತಿಳಿದುಕೊಳ್ಳಿ! https://sihikahinews.com/amp/whatsapp-new-features-which-you-must-know/

ವಾಟ್ಸಾಪ್‌ ಬಳಕೆದಾರರಿಗೆ ವಾಟ್ಸಾಪ್‌ ಮೀಡಿಯಾ, ಹೊಸದೊಂದು ಫೀಚರ್ಸ್ ನೀಡಿದೆ. ಅದುವೇ ಫಾರ್ವರ್ಡ್‌ ಫೀಚರ್ಸ್‌ ಹಾಗೂ ಮೆಸೇಜ್‌ ಯುವರ್‌ಸೆಲ್ಫ್‌ ಫೀಚರ್ಸ್‌. ಇದರಿಂದ ಐಒಎಸ್ (iOS) ಬಳಕೆದಾರರು ಮೀಡಿಯಾ ಫಾರ್ವರ್ಡ್‌ ಮಾಡುವಾಗ ಹೊಸ ಅನುಭವ ಸಿಗುವುದು ಪಕ್ಕಾ. ಇನ್ನು ಯುವರ್‌ಸೆಲ್ಫ್‌ ಫೀಚರ್ಸ್‌ ಮೂಲಕ ವಾಟ್ಸಾಪ್‌ ಅನ್ನು ನೋಟ್‌ ಮಾದರಿಯಲ್ಲಿ ಬಳಸಬಹುದು. ಇದನ್ನೂ ಓದಿ: Post Office Scheme: ಅಂಚೆ ಕಚೇರಿಯಲ್ಲಿ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಕೋಟ್ಯಾಧಿಶರಾಗುವುದು ಪಕ್ಕಾ; ಯಾವ ಯೋಜನೆ ಗೊತ್ತೇ?

ಯುವರ್ ಸೆಲ್ಫ್ (Yourself) ಫೀಚರ್ಸ್ ವಿಶೇಷತೆ ಏನು ಗೊತ್ತಾ?

ವಾಟ್ಸಾಪ್‌ ಬಳಕೆದಾರರು ಬೇರೆಯವರಿಗೆ ಸಂದೇಶ ಕಳುಹಿಸುವುದು ಮಾತ್ರವಲ್ಲ, ತಮಗೆ ತಾವೇ ಸಂದೇಶ ಕಳುಹಿಸಿಕೊಳ್ಳಬಹುದು.  ನೋಟ್‌ಗಳು ಮತ್ತು ಮೆಸೇಜ್‌ಗಳನ್ನು ಟ್ರ್ಯಾಕ್ ಮಾಡಲು ಇದು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಮುಖ್ಯವಾದ ವಿಷಯವನ್ನು ನೋಟ್ ಅಲ್ಲಿ ಸೇವ್ ಮಾಡಿ ಇಟ್ಟುಕೊಳ್ಳುತ್ತೇವೆ. ಇನ್ನು ನೋಟ್ ಆಪ್ ಇಲ್ಲದೇ ವಾಟ್ಸಾಪ್ ನಲ್ಲಿಯೇ ಇದನ್ನು ಮಾಡಬಹುದು. ಅಲ್ಲದೆ ಪಿನ್ ಮಾಡುವುದರ ಮೂಲಕ ಪ್ರಮುಖ ಮೆಸೆಜ್ ಸೇವ್ ಮಾಡಿ ಇಡಬಹುದು.  

ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌ (Media Forward) ವಿಶೇಷತೆ ಏನು ಗೊತ್ತಾ?

 ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌ ಫೀಚರ್ಸ್‌ನಲ್ಲಿಯೂ ಹೊಸ ಹೊಸ ಬದಲಾವಣೆ ಕಾಣಬಹುದು. ಇದು ಐಒಎಸ್‌ ಬಳಕೆದಾರರಿಗೆ ಅನ್ವಯವಾಗುತ್ತದೆ. ಐಒಎಸ್‌ ಬಳಕೆದಾರರು ಯಾವುದೇ ಚಿತ್ರ ಮತ್ತು ವೀಡಿಯೋವನ್ನು ಕ್ಯಾಪ್ಶನ್‌ನೊಂದಿಗೆ ಫಾರ್ವರ್ಡ್‌ ಮಾದಲು ಸಾಧ್ಯ. ಯಾವುದೇ ಮೀಡಿಯಾ ಫೈಲ್‌ ಫಾರ್ವರ್ಡ್‌ ಮಾಡುವಾಗ ಅಪ್ಲಿಕೇಶನ್‌ ಕೆಳಭಾಗದಲ್ಲಿ ಹೊಸ ಕ್ಯಾಪ್ಶನ್‌ ಬಾಕ್ಸ್ ಇರುತ್ತದೆ ಅಲ್ಲಿ ನೀವು ಕ್ಯಾಪ್ಶನ್‌ ಬರೆಯಬಹುದು.

ಬ್ಯುಸಿನೆಸ್‌ ಸರ್ಚ್‌ (Business search)  ಫೀಚರ್ಸ್‌:

ಇತ್ತೀಚಿಗೆ ಬ್ಯುಸಿನೆಸ್ ಫೀಚರ್ ನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ, ವ್ಯಾಪಾರಿಗಳನ್ನು ಸಂಪರ್ಕಿಸಬಹುದು. ಅವರೊಂದಿಗೆ ಚಾಟ್‌ ಮಾಡಬಹುದು ಜೊತೆಗೆ ಉತ್ಪನ್ನಗಳನ್ನು ಖರೀದಿಸಬಹುದು.  ಬ್ಯಾಂಕಿಂಗ್‌ನಂತಹ ವರ್ಗಗಳ ಮೂಲಕ ವ್ಯಾಪಾರಗಳನ್ನು ಕೂಡ ಬ್ರೌಸ್ ಮಾಡಿ ಸಂಪರ್ಕಿಸಬಹುದು. ಈ ಮೂಲಕ ವಾಟ್ಸಾಪ್‌ ಬಳಕೆದಾರರು ಕಂಪನಿಯ ಇಂಟರ್ಫೇಸ್ ಅನ್ನು ಬಿಡದೆ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇಂತಹ ಫೀಚರ್ ಗಳ ಬಗ್ಗೆ ತಿಳಿದು ಅವುಗಳ ಸದುಪಯೋಗಪಡಿಸಿಕೊಳ್ಳಿ. ಇದನ್ನೂ ಓದಿ: Ration Card: ಕ್ಯೂನಲ್ಲಿ ನಿಲ್ಲೋದು ಬೇಡ, ತಿಂಗಳುಗಟ್ಟಲೆ ಕಾಯೋದು ಬೇಡ, ರೇಶನ್ ಕಾರ್ಡ್ ನೀವಿರುವಲ್ಲಿಯೇ ಬರುತ್ತದೆ ಹೇಗೆ ಗೊತ್ತೇ?

Technologywhatsapp new features