Kannada Serial:ಮತ್ತೊಮ್ಮೆ ಧಾರವಾಹಿ ಲೋಕದಲ್ಲಿ ಬಾರಿ ಬದಲಾವಣೆ, ಪುಟ್ಟಕ್ಕನಿಗೆ ಸೋಲು, ಗೆದ್ದವರು ಯಾರು ಗೊತ್ತೇ? ಧಾರವಾಹಿ TRP ಹೇಗಿದೆ ಗೊತ್ತೇ??

Kannada Serial: ಮೊದಲು ಧಾರಾವಾಹಿಗಳಿಗೆ ಇಷ್ಟು ಮಟ್ಟದ ಸ್ಪರ್ಧೆ ಇರಲಿಲ್ಲ. ಹಾಗಾಗಿ ಒಂದು ಧಾರವಾಹಿ ಶುರುವಾಯಿತು ಎಂದರೆ ಒಂದು ವರ್ಷವಾದರೂ ಅದು ನಡೆಯುತ್ತಿತ್ತು. ಅಲ್ಲದೆ ಜನರ ಮನಸ್ಸಿಗೂ ಹತ್ತಿರ ಹಾಗೂ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿತ್ರಿತವಾಗುತ್ತಿತ್ತು. ಈಗ ಧಾರವಾಹಿ ನೋಡುಗರಲ್ಲೂ, ಚಿತ್ರಿಕರಣ ವಿಧಾನದಲ್ಲೂ ಬಹಳ ಬದಲಾವಣೆ ಆಗಿದೆ. ಒಂದು ಧಾರವಾಹಿ ಮತ್ತೊಂದು ಧಾರವಾಹಿಗೆ ಸ್ಪರ್ಧೆ ಕೊಟ್ಟು ಗೆದ್ದರೆ ಮಾತ್ರ ಆ ಧಾರವಾಹಿ ಮುಂದುವರಿಯುತ್ತದೆ. ಇದಕ್ಕೆ ಟಿಆರ್ಪಿ ರೇಟಿಂಗ್ ಸಹ ಇರುತ್ತದೆ. ಈ ರೇಟಿಂಗ್ನನ್ನು ಜನರ ವೀಕ್ಷಣೆಯ ಆಧಾರದ ಮೇಲೆ ನೀಡಲಾಗುತ್ತದೆ. ಹಾಗಾಗಿ ಪ್ರತಿ ಧಾರವಾಹಿಯು ಜನರನ್ನು ಹಿದಿಡಿಟ್ಟುಕೊಳ್ಳಲು ಬೇಕಾದ ಎಲ್ಲ ಕಸರತ್ತು ಮಾಡುತ್ತದೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿಯೇ ಊಹಿಸಲಾರದ ತಿರುವನ್ನು ಸಹ ನೀಡಲಾಗುತ್ತದೆ. ಆದರೂ ಕೆಲವೊಂದು ಧಾರವಾಹಿಗಳು ಸೋಲುತ್ತದೆ.

ಈ ವಾರದ ಟಿಆರ್ಪಿ ರೇಟಿಂಗ್ ಪಟ್ಟಿ ಪ್ರಕಟವಾಗಿದ್ದು, ಇಷ್ಟು ದಿನ ನಂ.೧ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಧಾರವಾಹಿ ಎರಡನೇ ಸ್ಥಾನಕ್ಕೆ ಹೋಗಿದೆ. ಮೊದಲನೇ ಸ್ಥಾನಕ್ಕೆ ಗಟ್ಟಿಮೇಳ ಬಂದು ಕುಂತಿದೆ. ಜೀ ಕನ್ನಡ ವಾಹಿನಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರಸಾರವಾಗುತ್ತದೆ. ಈ ಧಾರವಾಹಿ ಆರಂಭಗೊಂಡು ಬಹುತೇಕ ಒಂದು ವರ್ಷ ಕಳೆದಿದೆ. ಈ ಧಾರವಾಹಿ ಆರಂಭವಾದಾಗಿನಿಂದ ಮೊದಲನೇ ಸ್ಥಾನವನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ಈ ವಾರ ಮಾತ್ರ ನಂ.1 ಸ್ಥಾನವನ್ನು ಬಿಟ್ಟುಕೊಟ್ಟಿದೆ. ಸ್ನೇಹಾಗೆ ದೊರೆ ಯಾರು ಎನ್ನುವುದು ಗೊತ್ತಾಗಿದೆ. ಆದರೂ ಸ್ನೇಹಾ ಕಂಠಿಯನ್ನು ಆಟವಾಡಿಸುತ್ತಿದ್ದಾಳೆ. ಈ ಮಧ್ಯೆ ಸ್ನೇಹಾಗೋಸ್ಕರ ಸ್ನೇಹಾಳ ಅಕ್ಕನ ಮದುವೆಯನ್ನು ಅವಳು ಪ್ರೀತಿಸಿದವನ ಜೊತೆ ಮಾಡಿಸಬೇಕು ಎಂದು ಕಂಠಿ ಪ್ರಯತ್ನಿಸುತ್ತಿದ್ದಾನೆ. ಹೀಗೆ ಸಾಗುತ್ತಿದೆ ಪುಟ್ಟಕ್ಕನ ಮಕ್ಕಳು ಕಥೆ. ಆದರೂ ಪುಟ್ಟಕ್ಕನ ಮಕ್ಕಳು ಧಾರವಾಹಿ 9.4 ಅಂಕ ಪಡೆಯುವ ಮೂಲಕ ೨ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಗಟ್ಟಿಮೇಳ ಧಾರವಾಹಿ ಆರಂಭವಾಗಿ ಆಗಲೇ ಮೂರು ವರ್ಷಗಳು ಗತಿಸಿ ಹೋಗಿದೆ. ಆದರೂ ಇಂದಿಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವೇದಾಂತ-ಅಮೂಲ್ಯ ಕೋಳಿ ಜಗಳವೇ ಈ ಧಾರವಾಹಿಯ ಹೈಲೈಟ್. ಪುಟ್ಟಕ್ಕನ ಮಕ್ಕಳು ಧಾರವಾಹಿ ಬರುವ ಮೊದಲು ಒಂದನೇ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಗಟ್ಟಿಮೇಳ ಧಾರವಾಹಿ ನಂತರ ಪುಟ್ಟಕ್ಕನ ಮಕ್ಕಳು ಧಾರವಾಹಿಗೆ ಬಿಟ್ಟುಕೊಡಬೇಕಾಯಿತು. ಹಾಗಂತ ಗಟ್ಟಿಮೇಳ ಧಾರಾವಾಹಿಯು ಪ್ರತಿ ವಾರವೂ ಮೊದಲು ಮೂರು ಸ್ಥಾನಗಳಲ್ಲಿಯೇ ಇದೆ. ಈ ವಾರ ಗಟ್ಟಿಮೇಳ ಧಾರಾವಾಹಿಯು 9.6 ಅಂಕ ಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಮತ್ತೆ ಜಿಗಿದಿದೆ. ಇನ್ನು ಹೊಸ ಧಾರವಾಹಿ ಶ್ರೀರಸ್ತು ಶುಭಮಸ್ತು ಧಾರವಾಹಿ 8.6 ಅಂಕ ಪಡೆದಿದೆ. ಇದನ್ನೂ ಓದಿ: Cricket News:ಆರ್ಸಿಬಿ ಈ ಬಾರಿ ಯಾವುದೇ ಟಾಪ್ ಆಟಗಾರನನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಯಾಕೆ ಗೊತ್ತೇ? ಹರಾಜಿಗೂ ಮುನ್ನವೇ ಆರ್ಸಿಬಿ ಫ್ಯಾನ್ಸ್ ಗೆ ಕಹಿ ಸುದ್ದಿ.

ಇನ್ನು ಸ್ಟಾರ್ ಸುವರ್ಣ ವಾಹಿನಿ ಧಾರವಾಹಿಗಳ ವಿಚಾರಕ್ಕೆ ಬಂದರೆ ಇಲ್ಲಿ ಭಕ್ತಿ ಪ್ರಧಾನ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಆ ಕಾರಣಕ್ಕಾಗಿ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಈ ಧಾರಾವಾಹಿಗೆ 3.4 ಅಂಕ ಬಂದಿದೆ. ಉಳಿದಂತೆ ಮುದ್ದುಮಣಿಗಳು, ಮನಸ್ಸೆಲ್ಲಾ ನೀನೆ, ಮರಳಿ ಮನಸ್ಸಾಗಿದೆ ಧಾರಾವಾಹಿಯನ್ನು ಪ್ರೇಕ್ಷಕರು ಕೈ ಬಿಟ್ಟಿಲ್ಲ.

ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಯಲ್ಲಿ ರಾಧಿಕಾ ನಂ.1 ಸ್ಥಾನ ಪಡೆದಿದೆ. ಈ ಧಾರಾವಾಹಿಯು ಆರಂಭವಾದಾಗಿನಿಂದಲೂ ವಾಹಿನಿಯಲ್ಲಿ ನಂ.1 ಸ್ಥಾನ ಗಳಿಸಿರುವುದು ವಿಶೇಷವಾಗಿದೆ.

GattiMelaKannada serialPuttakkana makkaluwhich kannada serial is in top 10ಕನ್ನಡಧಾರಾವಾಹಿ