World Cup: ವಿಶ್ವಕಪ್ ನಲ್ಲಿ ಈ ಎರಡು ತಂಡಗಳಲ್ಲಿ ಟ್ರೋಫಿ ಗೆಲ್ಲೋದು ಯಾರು? ಸಂಗಕ್ಕಾರ ಭವಿಷ್ಯ, ನಿಮ್ಮ ಫೇವರೇಟ್ ಟೀಮ್ ಇದೆನಾ?

World Cup: ಭಾರತದಲ್ಲಿ ಹೆಚ್ಚಿನ ಜನರು ನೋಡುವ ಆಟ ಎಂದರೆ ಅದು ಕ್ರಿಕೇಟ್ (Cricket) . ಹಾಗಾಗಿ ಕ್ರಿಕೇಟ್ ಆಟಗಾರರಿಗೆ ಇರುವಷ್ಟು ದೊಡ್ಡ ಅಭಿಮಾನಿ ಬಳಗ ಯಾವ ಸ್ಟಾರ್ ನಟ-ನಟಿಯರಿಗೂ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಈ ಬಾರಿ ವಿಶ್ವಕಪ್ (World Cut) ಭಾರತದಲ್ಲಿಯೇ ನಡೆಯುತ್ತಿದೆ. ಅ.5ರಂದು ಗುಜರಾತ್ ರಾಜ್ಯದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium)  ಕಳೆದ ಸಲದ ವಿಶ್ವಕಪ್ ವಿಜೇತ ತಂಡ ಇಂಗ್ಲೇಂಡ್ ಹಾಗೂ ಸೋತ ತಂಡ ನ್ಯೂಜಿಲೆಂಡ್ ಪ್ರಥಮ ಆಟ ಆಡುವ ಮೂಲಕ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಹೀಗಾಗಿ ಈಗಾಗಲೇ ವಿಶ್ವಕಪ್ ಫೀವರ್ ಆರಂಭಗೊಂಡಿದೆ. ಶ್ರೀಲಂಕಾದ (Sri Lanka)  ಆಟಗಾರ ಕುಮಾರ ಸಂಗಕ್ಕಾರ ಈ ಭಾರಿಯ ವಿಶ್ವಕಪ್ನ್ನು ಯಾರ ಗೆಲ್ಲಬಹುದು ಎನ್ನುವ ಭವಿಷ್ಯ ನುಡಿದಿದ್ದಾರೆ.

ಪ್ರಸಿದ್ದ ಕ್ರಿಕೆಟ್ ಆಟಗಾರರಾದ ಕುಮಾರ ಸಂಗಕ್ಕಾರ ಹಾಗೂ ಈಯಾನ್ ಮಾರ್ಗನ್ ಭಾರತವು ಈ ಬಾರಿ ವಿಶ್ವಕಪ್ ಗೆಲ್ಲುವ ಎಲ್ಲ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ನೆಚ್ಚಿನ ತಂಡ ಕೂಡ ಭಾರತ ಎಂದು ತಿಳಿಸಿದ್ದಾರೆ. ಈ ವಿಶ್ವಕಪ್ನಲ್ಲಿ 1೦ ತಂಡಗಳು ಪಾಲ್ಗೊಂಡು ವಿಶ್ವಕಪ್ ಟ್ರೋಫಿಗಾಗಿ ಸೆಣೆಸಾಡಲಿವೆ. ಈ ಭಾರಿಯ ವಿಶೇಷ ಎಂದರೆ ಭಾರತ ಈ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿದೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕುಮಾರ ಸಂಗಕ್ಕಾರ ಅವರು, ಈ ಬಾರಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಶ್ವಕಪ್ಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಗಳಿವೆ ಎಂದಿದ್ದಾರೆ.

ನನ್ನ ಪ್ರಕಾರ ಭಾರತ ಹಾಗೂ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಸಮಾನ ಅರ್ಹತೆ ಹೊಂದಿದೆ. ಸದ್ಯ ನಡೆದ ಏಷ್ಯಾ ಕಪ್ ಟೂರ್ನಿಯನ್ನು ಗಮನಿಸಿದರೆ ಶ್ರೀಲಂಕಾ ತಂಡ ಕೂಡ ಪ್ರಭಲ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಶ್ರೀಲಂಕಾ ಕೂಡ ಉತ್ತಮ ಪ್ರದರ್ಶನ ನೀಡಿದರೆ ಫೈನಲ್ ತಲುಪುವುದು ಕಷ್ಟದ ವಿಚಾರವೇನಲ್ಲ ಎಂದು ಕುಮಾರ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡಿನ ಕ್ರಿಕೆಟ್ ಆಟಗಾರ ಇಯಾನ್ ಮಾರ್ಗನ್ ಕೂಡ ಈ ಕುರಿತು ಮಾತನಾಡಿದ್ದು, ನನಗೆ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅದರಲ್ಲೂ ಹಾರ್ಧಿಕ್ ಪಾಂಡ್ಯ ಅವರ ಪಾತ್ರ ಈ ಬಾರಿಯ ವಿಶ್ವಕಪ್ನಲ್ಲಿ ಪ್ರಮುಖವಾಗಿರಲಿದೆ ಎಂದಿದ್ದಾರೆ.

ಹಾರ್ಧಿಕ್ ಪಾಂಡ್ಯ ಅವರ ಫಿಟ್ನೆಸ್ ನೋಡಿದರೆ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ. ಏಷ್ಯಾಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya)  ಬೌಲಿಂಗ್ ಮಾಡುವ ಜೊತೆಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದು ಸಹ ಭಾರತ ತಂಡಕ್ಕೆ ವರದಾನವಾಗಿದೆ ಎಂದು ಇಯಾನ್ ಮಾರ್ಗನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Best News in KannadaCricet NewsKannada Trending Newswho will win world cup 2023 sangalkarworld cup 2023