Kannada Film: ನಟ ರಾಮಕುಮಾರ್ ದೊಡ್ಮನೆ ಅಳಿಯ ಆಗಿದ್ದು ಹೇಗೆ ಗೊತ್ತಾ? ಮದುವೆ ಆದ್ಮೇಲೆ ರಾಮ್ ಕುಮಾರ್ ಗೆ ಸಿನಿಮಾ ಅವಕಾಶ ಕೈತಪ್ಪಿದ್ಯಾಕೆ?

Kannada Film: ಸ್ನೇಹಿತರೆ, ಚಂದನವನ(Sandalwood)ದಲ್ಲಿ ಸಾಕಷ್ಟು ಹಿಟ್ ಸಿನಿಮಾ (Film)ಗಳನ್ನು ಕೊಟ್ಟ ನಟ ರಾಮ್ ಕುಮಾರ್. ಸ್ಪುರದ್ರೂಪ ನಟ ರಾಮ್ ಕುಮಾರ್ (Ramkumar) 80ರ ದಶಕದ ಚಾಕಲೇಟ್ ಹಿರೋ (Hero) ಆಗಿದ್ದವರು. ಅದೆಷ್ಟೋ ಹೆಣ್ಣುಮಕ್ಕಳ ಮನಸ್ಸಿಗೆ ಲಗ್ಗೆ ಇಟ್ಟಿದ್ದ ರಾಮ್ ಕುಮಾರ್ ಮದುವೆ ಆದ ಮೇಲೆ ಸಿನಿಮಾರಂಗದಿಂದ ದೂರ ಉಳಿದರು. ಅವರ ಮಕ್ಕಳು ಇದೀಗ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಡಾ. ರಾಜಕುಮಾರ್ (Rajkumar) ಅವರ ಕುಟುಂಬವನ್ನು ನಟ ರಾಮ್ ಕುಮಾರ್ ಸೇರಿದ್ದು ಹೇಗೆ ಗೊತ್ತಾ? ಡಾ. ರಾಜಕುಮಾರ್ ಅವರು ಮಕ್ಕಳ ಮಾತಿಗೆ, ಆಸೆಗೆ ಯವತ್ತೂ ಇಲ್ಲ ಅಂದವರಲ್ಲ. ಹಾಗಾಗಿ ಅಣ್ಣಾವ್ರ ಪುತ್ರಿ ಪೂರ್ಣಿಮಾ (Poornima) ರಾಮ್ ಕುಮಾರ್ ಅವರನ್ನು ಮದುವೆ ಆಗ್ತೇನೆ ಅಂದ್ರೆ ಮನೆಯವರು ವಿರೋಧ ಮಾಡಲಿಲ್ಲ. ಹಾಗಾಗಿ ಪೂರ್ಣಿಮಾ ಅವರ ಇಷ್ಟದಂತೆ ರಾಮ್ ಕುಮಾರ್ ಹಾಗೂ ಪೂರ್ಣಿಮ ಮದುವೆಆಗುತ್ತಾರೆ.

ರಾಮ್ ಕುಮಾರ್ ಸಿನಿಮಾ ಮಾಡುತ್ತಿದ್ದಾಗ, ತಾಯಿ ಪಾರ್ವತಮ್ಮಾ ಅವರ ಜೊತೆ ಆಗಾಗ ಸಿನಿಮಾ ಸೆಟ್ ಗೆ ಬರ್ತಾ ಇದ್ದ ಪೂರ್ಣಿಮಾ ಅವರು ರಾಮ್ ಕುಮಾರ್ ಅವರನ್ನು ನೋಡಿ ಮೆಚ್ಚಿ ಪ್ರೀತಿಸುತ್ತಾರೆ. ರಾಮ್ ಕುಮಾರ್ ಕೂಡ ಪೂರ್ಣಿಮಾ ಅವರನ್ನ ಇಷ್ಟಪಟ್ಟು ಗುರುಹಿರಿಯರ ಸಮ್ಮತಿಯ ಮೇರೆ ಮದುವೆಆಗುತ್ತಾರೆ. ರಾಮ್ ಕುಮಾರ್ ದೊಡ್ಮನೆ ಅಳಿಯ ಆಗುತ್ತಾರೆ. ಇದು ನಿಜಕ್ಕೂ ಅದೃಷ್ಟವೂ ಹೌದು, ಅದೇ ರೀತಿ ಹೆಣ್ಣುಮಕ್ಕಳು ಮದುವೆಯಾಗಲು ಕ್ಯೂ ನಿಲ್ಲುತ್ತಿದ್ದ ರಾಮ್ ಕುಮಾರ್, ಪೂರ್ಣಿಮಾ ಅವರನ್ನ ಒಪ್ಪಿಕೊಂಡಿದ್ದು ಪೂರ್ಣಿಮಾ ಪಾಲಿಗೂ ಅದೃಷ್ಟವೇ ಬಿಡಿ!

ರಾಮ್ ಕುಮಾರ್ ಅವರ ವಿವಾಹವಾದ ನಂತರ ಕೆಲವು ಸಿನಿಮಾ ಅವಕಾಶಗಳು ಕೈತಪ್ಪಿಹೋದವು. ಕೆಲವರು ದೊಡ್ಮನೆ ಅಳಿಯ ಎಂಬ ಕಾರಣಕ್ಕೆ ಸಣ್ಣ ಪುಟ್ಟ ಪ್ರೊಡ್ಯೂಸರ್ ಗಳು ಅವರ ಸಿನಿಮಾ ಮಾಡುವುದಕ್ಕೆ ಮುಂದೆ ಬರಲಿಲ್ಲ ಎನ್ನುವ ಮಾತು ಇದೆ. ಆದರೆ ರಾಮ್ ಕುಮಾರ್ ಮಾತ್ರ ಯಾರ ಹೆಸರಿಗೂ ಚ್ಯುತಿ ಬರದ ರೀತಿಯಲ್ಲಿ ವೃತ್ತಿ ಜೀವನದಲ್ಲಿಯೂ ಸಮಸ್ಯೆ ಆಗದ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸಿದ್ದಾರೆ. ದೊಡ್ಮನೆಯ ತಕ್ಕ ಅಳಿಯನೂ ಆಗಿದ್ದಾರೆ. ದೊಡ್ಮನೆ ಕಲೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ರಾಜ್ ಅವರ ಮಕ್ಕಳಂತೆ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಮಕ್ಕಳೂ ಕೂಡ ಸಿನಿಮಾ ನಟನೆಯನ್ನು ವೃತ್ತಿಯಾಗಿ ಆಯ್ದುಕೊಂಡಿದ್ದಾರೆ.

Kannada actorKannada FilmRajkumarRamkumarಕನ್ನಡ ಸಿನಿಮಾ