Viral Video: ಸಾಮಾನ್ಯವಾಗಿ ಬಸ್ (Bus) ಗಳಲ್ಲಿ ಟ್ರೈನ್ (Train) ಗಳಲ್ಲಿ ಕೆಲವು ಪ್ರಯಾಣಿಕರು ಆಸಭ್ಯವಾಗಿ ವರ್ತಿಸುತ್ತಾ ಸೀನ್ ಕ್ರಿಯೆಟ್ ಮಾಡಿರುವುದನ್ನು ನೀವು ನೋಡಿರಬಹುದು ಆಗಲೇ ಎಷ್ಟು ಕಿರಿ ಕಿರಿ ಎನ್ನಿಸಿರುತ್ತೆ. ಆದರೆ ಇದೀಗ ಫ್ಲೈಟ್ (Flight) ನಲ್ಲಿ ಕೂಡ ಇಂತಹ ಕೆಲವು ಘಟನೆಗಳು ವರದಿಯಾಗುತ್ತಿವೆ. ಉಳಿದ ಸಾರ್ವಜನಿಕ ವಾಹನಗಳಿಗೆ ಹೋಲಿಸಿದರೆ ಫ್ಲೈಟ್ ನಲ್ಲಿ ರೂಲ್ಸ್ (Ruls) ಗಳು ಸ್ವಲ್ಪ ಜಾಸ್ತಿ. ಹಾಗೆ ಪ್ಯಾಸೆಂಜರ್ ಗಳು ಕೂಡ ಬಹಳ ಶಿಸ್ತಿನಿಂದ ವರ್ತಿಸಬೇಕಾಗುತ್ತದೆ ಆದರೆ ಇಲ್ಲಿ ಮಹಿಳೆ ತಾನು ಎಲ್ಲಿದ್ದೇನೆ ಎಂಬುದನ್ನೇ ಮರೆತು ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾಳೆ ಜೊತೆಗೆ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ಕೂಡ ಮಾಡಿದ್ದಾರೆ ಈ ಘಟನೆಯ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ. ಇದನ್ನೂ ಓದಿ: Kannadathi Serial: ಗುಡ್ ನ್ಯೂಸ್ ಹಾಗೂ ಬ್ಯಾಡ್ ನ್ಯೂಸ್ ಎರಡನ್ನು ಒಟ್ಟೊಟ್ಟಿಗೆ ಕೊಡುತ್ತಿರುವ ‘ಕನ್ನಡತಿ’ ಏನು ಗೊತ್ತೇ?
ಅಬುದಾಬಿ (Abu -Dabhi) ಯಿಂದ ಮುಂಬೈ (Mumbai) ಗೆ ಏರ್ ವಿಸ್ತಾರ ಯುಕೆ 256 (Vistara Uk 256) ವಿಮಾನ ಸೋಮವಾರ ಬೆಳಗ್ಗಿನ ಜಾವ ಬಂದು ಇಳಿದಿದೆ. ಆದರೆ ಈ ಫ್ಲೈಟ್ ಪ್ರಯಾಣದ ನಡುವೆ ಇಟಲಿಯ ಮಹಿಳೆ ಒಬ್ಬಳು ಅಸಭ್ಯವಾಗಿ ವರ್ತಿಸಿದ್ದಾಳೆ. ಆಕೆ ಸುಮಾರು 45 ಪ್ರಾಯದ ಇಟಲಿ ಮೂಲದ ಪವೋಲ ಪೇರುಸ್ಸಿಯೋ. ಇದೀಗ ಆಕೆಯ ವಿರುದ್ಧ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾನದ ನಿಯಮ ಉಲ್ಲಂಘಿಸಿದ್ದು ಅಲ್ಲದೆ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆ ಮಾಡಿರುವುದಕ್ಕೆ ಕೇಸ್ ದಾಖಲಿಸಲಾಗಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು ಇದೀಗ ಆ ಮಹಿಳೆಗೆ ಜಾಮೀನು ಕೂಡ ಸಿಕ್ಕಿದೆ. ಇದನ್ನೂ ಓದಿ:
ಸಿಬ್ಬಂದಿ ಹೇಳುವ ಪ್ರಕಾರ ಮುಂಬೈ ತರಳುತ್ತಿದ್ದ ಏರ್ ವಿಸ್ತಾರ ಫ್ಲೈಟ್ ಅಬುದಾಬಿ ನಿಲ್ದಾಣದಿಂದ ಬೆಳಗಿನ ಜಾವ ಎರಡು ಗಂಟೆಗೆ ಹೊರಟಿತು. ಎಲ್ಲವೂ ಸರಿಯಾಗಿತ್ತು ಆದರೆ ಇದ್ದಕ್ಕಿದ್ದ ಹಾಗೆ ಈ ಮಹಿಳೆ ಎಕಾನಮಿ ಶ್ರೇಣಿಯಿಂದ ಬಿಸಿನೆಸ್ ಶ್ರೇಣಿಯ ಆಸನಕ್ಕೆ ಹೋಗಿ ಕುಳಿತಿದ್ದಾಳೆ. ಇದನ್ನು ಗಮನಿಸಿದ ಸಿಬ್ಬಂದಿ ಪಾವೂಲಾ ಅವರ ಬಳಿ ಹೋಗಿ ಏನಾದರೂ ಸಹಾಯ ಬೇಕಾ ಎಂದು ಕೇಳಿದ್ದಾರೆ ಅಷ್ಟಕ್ಕೇ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ ಸಿಬ್ಬಂದಿಯ ಮೇಲೆ ಕೈ ಮಾಡಿದ್ದು ಅಲ್ಲದೆ, ಇನ್ನೊಬ್ಬ ಸಿಬ್ಬಂದಿಯ ಮುಖದ ಮೇಲೆ ಉಗಿದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮೈಮೇಲೆ ಇದ್ದ ಒಂದೊಂದೇ ಬಟ್ಟೆಯನ್ನು ಬಿಚ್ಚುತ್ತಾ ಮಹಡಿಯಿಂದ ಮೇಲೆ ಕೆಳಗೆ ಅರೆ ಬೆತ್ತಲಾಗಿ ಇಳಿದಿದ್ದಾರೆ ಇದು ಪ್ರಯಾಣಿಕರಿಗೂ ಕಿರಿಕಿರಿ ಉಂಟುಮಾಡಿದೆ. ಇದನ್ನೂ ಓದಿ: Relationship: ರಜಾ ಇದೆ ಎಂದು ಭಾನುವಾರದಂದು ಪತಿ-ಪತ್ನಿ ಒಂದಾಗಲು ಪ್ರಯತ್ನಿಸಿದರೆ ಆಗುವ ಅಪಾಯ ತಪ್ಪಿಸುವುದಕ್ಕೆ ದೇವರು ಬರಲ್ಲ ಯಾಕೆ ಗೊತ್ತೇ?
ಪಾವೋಲಾ ಬಳಿ ಎಷ್ಟೇ ಕೇಳಿಕೊಂಡರು ಆಕೆ ಕೇಳಲಿಲ್ಲ ಕೊನೆಗೆ ಸಿಬ್ಬಂದಿಗಳು ಸೇರಿ ಅವರನ್ನು ನಿಯಂತ್ರಿಸಿದ್ದಾರೆ. ಕೊನೆಗೆ ಮುಂಬೈನಲ್ಲಿ ಫ್ಲೈಟ್ ಇಳಿದ ತಕ್ಷಣ ಮಹಿಳೆಯನ್ನು ವಿಸ್ತಾರದ ಭದ್ರತಾ ಸಿಬ್ಬಂದಿಯ ವಶಕ್ಕೆ ನೀಡಲಾಗಿತ್ತು ಅಲ್ಲಿಂದ ಮುಂದೆ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದಾರೆ.