Women Cricketer Marriage: ತಮ್ಮ ಸ್ನೇಹಿತೆಯ ಜೊತೆಗೆ ಸಂಸಾರ ನಡೆಸಲು ಮುಂದಾದ ಭಾರತೀಯ ಮಹಿಳಾ ಕ್ರೀಡಾಪಟುಗಳು ಯಾರು ಗೊತ್ತಾ?

Women Cricketer Marriage: ಗಂಡು ಹೆಣ್ಣು ಒಂದಾಗುವುದು ಸಹಜ. ಆದರೆ ಇತ್ತೀಚಿಗೆ ಹುಡುಗಿಯರೇ ಹುಡುಗಿಯರನ್ನು ಮದುವೆಯಾಗುವ, ಹುಡುಗರು ಹುಡುಗರನ್ನು ಮದುವೆಯಾಗುವ ಪರಿಪಾಠ ಹೆಚ್ಚಾಗಿದೆ. ಮೊದಲು ಇಂಥ ಸಂಬಂಧಗಳು ಇದ್ದರೂ ಬೆಳಕಿಗೆ ಬರುತ್ತಿರಲಿಲ್ಲ. ಅದರಲ್ಲೂ ಭಾರತದಲ್ಲಿ ಇಂಥ ಪ್ರಕರಣಗಳು ವಿದೇಶಕ್ಕೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ ಇತ್ತು. ಆದರೆ ಈಗ ಸರ್ಕಾರದ ಮಾನ್ಯತೆ ಮೇರೆಗೆ ಒಂದೇ ಲಿಂಗದವರು ಮದುವೆ (Lesbians) ಆಗುತ್ತಿದ್ದಾರೆ.  ಭಾರತದಲ್ಲಿಯೂ ಈ ಪರಿಪಾಠ ಆರಂಭವಾಗಿದೆ.

Women Cricketer Marriage: ತಮ್ಮ ಸ್ನೇಹಿತೆಯ ಜೊತೆಗೆ ಸಂಸಾರ ನಡೆಸಲು ಮುಂದಾದ ಭಾರತೀಯ ಮಹಿಳಾ ಕ್ರೀಡಾಪಟುಗಳು ಯಾರು ಗೊತ್ತಾ? https://sihikahinews.com/amp/women-cricketer-dutee-chand-married-her-girlfriend/

ಹೌದು, ಇಂತಹ ಸಂಬಂಧಗಳಿಗೆ ಕ್ರೀಡಾಪಟುಗಳು ಹೊರತಾಗಿಲ್ಲ. ಅದರಲ್ಲೂ ಮಹಿಳಾ ಕ್ರಿಕೆಟ್ ತಂಡದಲ್ಲಿ ಇರುವ ಕ್ರಿಕೆಟಿಗರು, ಸಖಿಯನ್ನೇ ಸಂಗಾತಿಯನ್ನಾಗಿ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ. ದೇಶ ಹಾಗೂ ವಿದೇಶಿ ಕ್ರೀಡಾಪಟುಗಳಲ್ಲಿ ಇದು ಹೆಚ್ಚಾಗಿದ್ದು, ಭಾರತೀಯ ಮಹಿಳಾ ಅಥ್ಲೆಟ್ ದ್ಯುತಿ ಚಂದ್ (Dutee Chand) ತನ್ನ ಸ್ನೇಹಿತೆ ಮೊಸಾಲಿಸಾ ದಾಸ್ (monalisa das) ಜೊತೆಗೆ ಮದುವೆ ಆಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದನ್ನೂ ಓದಿ: Technology: ಈವಿ ಬೈಕ್ ಖರೀದಿ ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಮೈಲೇಜ್ ಕೊಡುವ ಬೈಕ್ ಸರ್ಕಾರದಿಂದಲೂ ಸಿಗತ್ತೆ ಸಿಕ್ಕಾಪಟ್ಟೆ ಸಬ್ಸಿಡಿ ಬೆನಿಫಿಟ್!

ಹೌದು, ಭಾರತದಲ್ಲಿ ಇಂತಹ ಕೇಸ್ ಗಳು ಕೈಬೆರಳ ಎಣಿಕೆಯಷ್ಟು ಇವೆ ಅಷ್ಟೇ. ಇದೀಗ ದ್ಯುತಿ ಚಂದ್ ತನ್ನ ಜೀವದ ಗೆಳತಿ ಜೊತೆ ಹಸೆಮಣೆ ಏರಿದ್ದಾರೆ (lesbians). ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಅಪರೂಪದ ಮಹಿಳಾ ಜೋಡಿ ಇದಾಗಿದೆ.

ಇನ್ನು ಆಸ್ಟ್ರೇಲಿಯಾದ ಮಹಿಳಾ ವೇಗದ ಬೌಲರ್ ಮೇಗನ್ ಸ್ಚುಟ್ ಹಾಗೂ ಜೆಸ್ ಹಾಲಿಯೋಕ್ಸ್ ಅವರು ಕೂಡ ಒಂದೇ ಲಿಂಗ (Sex) ಆಗಿದ್ದರೂ ಒಬ್ಬರನ್ನ ಒಬ್ಬರು ಪ್ರೀತಿಸಿ ಮದುವೆಆಗಿದ್ದರು ಸ್ಚುಟ್ 77 ಒಡಿಐ (ODI) ಗಳನ್ನು ಆಡಿದ್ದು,112 ವಿಕೆಟ್‌ಗಳನ್ನು ಪಡೆದರೆ, 84 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 108 ವಿಕೆಟ್‌ಗಳನ್ನು ಪಡೆದಿದ್ದಾರೆ.  ಜೊತೆಗೆ 4 ಟೆಸ್ಟ್‌ ಮ್ಯಾಚ್  ಆಡಿದ್ದಾರೆ. ಇದನ್ನೂ ಓದಿ: Healthy Food: ಇನ್ನೂ ಒಂದು ಐವತ್ತು ವರ್ಷ ಹೆಚ್ಚಿಗೆ ಬದುಕಬೇಕೇ? ಅದಕ್ಕೆ ತಪ್ಪದೇ ಇದೊಂದು ಆಹಾರ ಸೇವನೆ ಮಾಡಿ. ಯಾವುದು ಗೊತ್ತೇ?

ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಮತ್ತು ಆಲ್ ರೌಂಡರ್ ಜಿಸ್ ಜೊನಾಸೆನ್ ವಿಶ್ವಕಪ್ ಪ್ರತಿನಿಧ್ಸಿದವರು. ಸಾರಾ ವಿಯರ್ನ್ ಎನ್ನುವ ಗೆಳತಿಯನ್ನು ವಿವಾಹವಾಗಿದ್ದಾರೆ.. ಜಿಸ್ 4 ಟೆಸ್ಟ್ ಪಂದ್ಯ ಆಡಿದ್ದು 6 ವಿಕೆಟ್ ಕಬಳಿಸಿದ್ದರು.  85 ಒಡಿಐಗಳಲ್ಲಿ 131 ವಿಕೆಟ್ ಮತ್ತು 94 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 87 ವಿಕೆಟ್ ಗಳಿಸಿದ್ದಾರೆ.

ಅದೇ ರೀತಿ ಇಂಗ್ಲೆಂಡ್ ವೇಗಿ ನಟಾಲಿಯಾ ಸೀವರ್ ತನ್ನ ಸಹ ಆಟಗಾರ್ತಿ ಕ್ಯಾಥರೀನ್ ಬ್ರಂಟ್ ಅವರನ್ನು 2022 ರಲ್ಲಿ ಮದುವೆ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟರ್ ಲೀಜೆಲ್ ಲೀ  ಮತ್ತೊಬ್ಬ ಕ್ರಿಕೆಟ್ ಆಟಗಾರ್ತಿ ಆಗಿರುವ ತಾಂಜಾ ಕ್ರೋನಿಯೆ ಅವರನ್ನು 2020ರಲ್ಲಿ ವಿವಾಹವಾದರು.

cricket playerslesbiansLifestylemarriagewomen cricket