Bangalore Food: ಬೆಂಗಳೂರಿನ ಸಹಕಾರ ನಗರಿಯಲ್ಲಿ ನಿರ್ಮಾಣವಾಯಿತು ನರಾಚಿ ಸಾಮ್ರಾಜ್ಯ. ಕೆಜಿಎಫ್ ಬದಲು ಕನ್ನಡಿಗಾಸ್ ಗೋಲ್ಡನ್ ಫೂಡ್ ರೆಸ್ಟೋರೆಂಟ್ ಗೆ ಒಮ್ಮೆ ಹೋಗಿ ಬನ್ನಿ!

Bangalore Food: ಕಳೆದ ಐದು ವರ್ಷಗಳ (5Years) ಹಿಂದೆ ಇಂತದ್ದೊಂದು ಸಾಮ್ರಾಜ್ಯ ಸಿನಿಮಾ ರಂಗದಲ್ಲಿ ನಿರ್ಮಾಣವಾಗುತ್ತೆ ಅಂತ ಯಾರು ತಾನೇ ಊಹಿಸಿದ್ದರು? ಅದುವೇ ಕೆ ಜಿ ಎಫ್ (KGF) ಎನ್ನುವ ಬೃಹತ್ ಸಾಮ್ರಾಜ್ಯ. ಅದೆಷ್ಟು ವರ್ಷಗಳ ಹಿಂದೆ ಕೆಜಿಫ್ ಚಿನ್ನ (Gold)ದ ಗಣಿಗಳನ್ನು ಹೊಂದಿದ ಸ್ಥಳವಾಗಿತ್ತು ಅದೇ ಕಥೆಯನ್ನ ಇಟ್ಟುಕೊಂಡು ಕೆಜಿಎಫ್ ಸಿನಿಮಾ ವನ್ನ ನಿರ್ಮಾಣ ಮಾಡಿಬಿಟ್ರು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel). ಎರಡು ಸರಣಿಗಳು ಕೂಡ ಸೂಪರ್ ಡೂಪರ್ ಹಿಟ್ ಕಂಡಿತು. ಈ ಮೂಲಕ ನಮ್ಮ ಯಶ್ (Yash) ಕೂಡ ಪ್ಯಾನ್ ಇಂಡಿಯಾ ಹೀರೋ ಆದರು.

Bangalore Food: ಬೆಂಗಳೂರಿನ ಸಹಕಾರ ನಗರಿಯಲ್ಲಿ ನಿರ್ಮಾಣವಾಯಿತು ನರಾಚಿ ಸಾಮ್ರಾಜ್ಯ. ಕೆಜಿಎಫ್ ಬದಲು ಕನ್ನಡಿಗಾಸ್ ಗೋಲ್ಡನ್ ಫೂಡ್ ರೆಸ್ಟೋರೆಂಟ್ ಗೆ ಒಮ್ಮೆ ಹೋಗಿ ಬನ್ನಿ! https://sihikahinews.com/amp/you-must-visit-kannadigas-golden-food-restaurant/

ಹೌದು, ಇಂದಿಗೂ ಕೆಜಿಎಫ್ ಸಿನಿಮಾವನ್ನು ನೋಡಿದ್ರೆ ಮಕ್ಕಳು ಬೆಚ್ಚಿ ಬೀಳಬಹುದು. ಯುವಕರಿಗೆ ಮತ್ತೆ ಮತ್ತೆ ಕನಸಿನಲ್ಲಿಯೂ ಕೆಜಿಎಫ್ ಸಾಮ್ರಾಜ್ಯ ಕಣ್ಮುಂದೆ ಬರಬಹುದು. ಇಂತಹದೊಂದು ಸಿನಿಮಾ ಮತ್ತೆ ನಿರ್ಮಾಣವಾಗಲಿ ಅನ್ನೋದು ಎಲ್ಲಾ ಸಿನಿ ಪ್ರಿಯರು ಬಯಕೆ. ಒಂದು ಕಡೆ ಇಂತಹ ಸಿನಿಮ ಇನ್ನಷ್ಟು ನಿರ್ಮಾಣವಾಗಲಿ, ಆದರೆ ಅದೇ ಥೀಮ್ ಇಟ್ಟುಕೊಂಡು ಇಲ್ಲೊಂದು ರೆಸ್ಟೋರೆಂಟ್ ಓಪನ್ ಆಗಿದೆ ನೋಡಿ. ಈ ರೆಸ್ಟೋರೆಂಟ್ ಗೆ ಹೋದರೆ ನಿಮಗೆ ಚಿನ್ನದ ಗಣಿ ಸಿಗಲ್ಲ ಅದರ ಬದಲಿಗೆ ರುಚಿರುಚಿಯಾದ ಊಟ (Food) ಸಿಗುತ್ತೆ.

ಇದನ್ನೂ ಓದಿ:Easy Recipe: ಸೀತಾಫಲದಿಂದ ಮಾಡಿ ರುಚಿಯಾದ, ಬಾಯಲ್ಲಿ ನೀರೂರಿಸುವ ಪಾಯಸ ಮಾಡೋದು ಹೇಗೆ ಗೊತ್ತಾ?

ನರಾಚಿಯನ್ನು ಸೃಷ್ಟಿಸಿದ ಕನ್ನಡಿಗಾಸ್ ಗೋಲ್ಡನ್ ಫುಡ್ (Kannadiga’s Golden Food):

ಹೌದು ಕನ್ನಡಿಗಾಸ್ ಗೋಲ್ಡನ್ ಫುಡ್ ರೆಸ್ಟೋರೆಂಟ್ ಸಹಕಾರ ನಗರದಲ್ಲಿ ತಲೆಯೆತ್ತಿದೆ. ನರಾಚಿ ಕೋಟೆಯಂತೆಯೇ ರೆಸ್ಟೋರೆಂಟ್ ಮುಂಭಾಗವನ್ನ ನಿರ್ಮಾಣ ಮಾಡಲಾಗಿದೆ. ಇನ್ನು ರೆಸ್ಟೋರೆಂಟ್ ಒಳಗೆ ಹೋದರಂತೂ ಕೆಜಿಎಫ್ ಮತ್ತೊಮ್ಮೆ ನೆನಪು ಮಾಡಿಕೊಳ್ಳುತ್ತೀರಿ. ಕುಟುಂಬ ಸಮೇತರಾಗಿ ಎಲ್ಲರೂ ಈ ರೆಸ್ಟೋರೆಂಟ್ ಗೆ ಹೋಗಿ ಸಕ್ಕತ್ ಎಂಜಾಯ್ ಮಾಡಬಹುದು. ಇಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡು ರೀತಿಯ ಊಟ ಸಿಗುತ್ತೆ. ಅಷ್ಟೇ ಅಲ್ಲ ನಾಟಿ ಸ್ಟೈಲ್, ಚೈನೀಸ್, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಎಲ್ಲಾ ತರಹದ ಆಹಾರಗಳು ಇಲ್ಲಿ ಲಭ್ಯ. ಇಲ್ಲಿನ ವಿಶೇಷವಾದ ಆಸನ ವ್ಯವಸ್ಥೆ ಥ್ರಿಲ್ಲಿಂಗ್ ಅನುಭವ ನೀಡುತ್ತೆ.

ಇದನ್ನೂ ಓದಿ:Kannada Film: ಡಿಸೆಂಬರ್ 11ಕ್ಕೆ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ!? ನೀವೇ ಮದುವೆ ಮಾಡಿಸಿಬಿಡಿ ಎಂದು ಸುಮಲತಾ ಹೇಳಿದ್ಯಾಕೆ? ಯಾರಿಗೆ?

ನೀವು ಫ್ರೆಂಡ್ಸ್ ಜೊತೆ ಸಮಯ ಕಳೆಯೋದಕ್ಕೆ, ಬರ್ತಡೇ ಮಾಡಿಕೊಳ್ಳುವುದಕ್ಕೆ ಅತ್ಯುತ್ತಮ ಸ್ಪಾಟ್ ಇದು. ಈ ಹಿಂದೆ ಕೆಜಿಎಫ್ ನರಾಚಿ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿ ಅದರಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ತಮಿಳುನಾಡಿನಲ್ಲಿ ತಮಿಳಿಗರು ಗಣೇಶ ಹಬ್ಬವನ್ನು ಆಚರಿಸಿದ್ರು. ಅದೇ ರೀತಿ ಈಗ ಬೆಂಗಳೂರಿನ ಸಹಕಾರ ನಗರ ಕೆಜಿಫ್ ಅನ್ನು ನೆನಪಿಸುವಂತಹ ರೆಸ್ಟೋರೆಂಟ್ ಒಂದನ್ನ ತೆರೆದಿದೆ. ನೀವು ತಪ್ಪದೆ ವೀಕೆಂಡ್ ನಲ್ಲಿ ನರಾಚಿ ಫೀಲ್ ಕೊಡುವ ಕೆ ಜಿ ಎಫ್ ಕನ್ನಡಿಗಾಸ್ ಗೋಲ್ಡನ್ ಫುಡ್ ಗೆ ಭೇಟಿ ನೀಡಿ.

FoodKGFLifestyleRestaurant