Astrology: ಇನ್ನು ಇವರನ್ನು ತಡೆಯೋರು ಯಾರು ಇಲ್ಲ- ದೀಪಾವಳಿಗೂ ಈ ರಾಶಿಗಳಿಗೆ ಅದೃಷ್ಟ, ಹಣ ಹುಡುಕಿಕೊಂಡು ಬರುತ್ತೆ!

Astrology:ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರ ಜೀವನಚಕ್ರ ಯಾವ ರೀತಿಯಲ್ಲಿ ಇರುತ್ತದೆ ಅನ್ನೋದನ್ನ ಮೊದಲೇ ನಾವು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಗ್ರಹಗತಿಗಳ ಲೆಕ್ಕಾಚಾರದ ಪ್ರಕಾರ ದೀಪಾವಳಿಯವರೆಗೂ ಕೂಡ ಈ ಕೆಲವೊಂದು ರಾಶಿಯವರ ಜೀವನ ಚಕ್ರದಲ್ಲಿ ಕೇವಲ ಹಣ ಹಾಗೂ ಲಾಭ ಮಾತ್ರ ಕಂಡುಬರುತ್ತದೆ. ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ

ಮೇಷ ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತವೆ ಹೀಗಾಗಿ ಅದರಿಂದ ಅವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಕೂಡ ಎದ್ದು ಕಾಣುತ್ತವೆ ಎಂದು ಹೇಳಬಹುದಾಗಿದೆ. ಕೆಲಸದಲ್ಲಿ ಕೂಡ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಕಂಡುಬರುವುದರಿಂದ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಉತ್ತಮವಾಗಲಿದೆ. ಮನಸಿನಲ್ಲಿರುವಂತಹ ಎಲ್ಲಾ ಚಿಂತೆ ಹಾಗೂ ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಲಿವೆ.

ವೃಷಭ ರಾಶಿ

ಈ ಸಂದರ್ಭದಲ್ಲಿ ಹೊಸ ಹೊಸ ಜವಾಬ್ದಾರಿಗಳನ್ನ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ವೃಷಭ ರಾಶಿಯವರು ಪಡೆದುಕೊಳ್ಳಬಹುದಾಗಿದೆ. ಅಂದರೆ ಈ ಸಂದರ್ಭದಲ್ಲಿ ನಿಮ್ಮನ್ನು ಇನ್ನಷ್ಟು ಉತ್ತಮ ಜವಾಬ್ದಾರಿಗೆ ಪ್ರಮೋಷನ್ ಮಾಡುವಂತಹ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಬಹುದಾಗಿದೆ. ನಿಮ್ಮ ಜೀವನದಲ್ಲಿ ಎಷ್ಟೇ ಸಾಲವನ್ನು ಮಾಡಿಕೊಂಡಿದ್ದರು ಕೂಡ ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ ಹಾಗೂ ಹೆಚ್ಚಿನ ಆದಾಯ ಹರಿದು ಬರುವುದರಿಂದಾಗಿ ನೀವು ಈ ಸಾಲಗಳನ್ನು ತೀರಿಸಿಕೊಳ್ಳಬಹುದಾಗಿದೆ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ.

ಕರ್ಕ ರಾಶಿ

ಕೆಲಸಗಳಲ್ಲಿ ಯಾವುದೇ ಅಡೆತಡೆ ಇದ್ರು ಕೂಡ ಕರ್ಕ ರಾಶಿಯವರು ಅದನ್ನೆಲ್ಲ ಮೀರಿ ನಿಲ್ಲಲಿದ್ದಾರೆ. ಕರ್ಕ ರಾಶಿಯವರು ಜೀವನದಲ್ಲಿ ಏನೇ ಅಂದುಕೊಂಡರೂ ಕೂಡ ಅವುಗಳನ್ನು ಈಡೇರಿಸುವುದಕ್ಕೆ ಅವರಿಗೆ ಈ ಸಂದರ್ಭದಲ್ಲಿ ಸಾಧ್ಯವಾಗಲಿದೆ. ಎಲ್ಲಾ ಆಸೆ ಆಕಾಂಕ್ಷಿಗಳನ್ನು ಕೂಡ ಕರ್ಕ ರಾಶಿಯವರು ಈಡೇರಿಸಿಕೊಳ್ಳಲಿದ್ದಾರೆ.

ಸಿಂಹ ರಾಶಿ

ಗುರುವಿನ ವಕ್ರ ಚಾಲನೆ ಅನ್ನೋದು ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಲಾಭದಾಯಕವಾಗಿ ಸಾಬೀತಾಗಲಿದೆ ಅನ್ನೋದನ್ನ ನೀವು ಕಾಣಬಹುದಾಗಿದೆ. ಹೊಸ ಹೊಸ ಉದ್ಯೋಗಾವಕಾಶಗಳು ಕೂಡ ಸಿಂಹ ರಾಶಿಯವರಿಗೆ ಹುಡುಕಿಕೊಂಡು ಬರಲಿದ್ದು ಅದರ ವಿಶೇಷವಾಗಿ ನಿರುದ್ಯೋಗಿಗಳಿಗೆ ಇದು ಲಾಭದಾಯಕವಾಗಲಿದೆ. ಆರ್ಥಿಕವಾಗಿ ಬಲಿಷ್ಠರಾಗುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಅವಕಾಶಗಳನ್ನು ಕೂಡ ಸಿಂಹ ರಾಶಿ ಅವರಿಗೆ ನೀಡಲಾಗುತ್ತದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅವರು ಉಪಯೋಗಿಸಿಕೊಳ್ಳಬೇಕು ಅಷ್ಟೇ.

ಕನ್ಯಾ ರಾಶಿ

ಈ ಸಂದರ್ಭದಲ್ಲಿ ಕನ್ಯಾ ರಾಶಿಯ ವ್ಯಾಪಾರಸ್ಥರಿಗೆ ಕೈತುಂಬ ಲಾಭ ಸಂಪಾದನೆ ಮಾಡುವಂತಹ ಅವಕಾಶ ಸಿಗಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕನ್ಯಾ ರಾಶಿಯವರ ಕುಟುಂಬದಲ್ಲಿ ಇರುವಂತಹ ಎಲ್ಲಾ ಅಶಾಂತಿಗಳು ದೂರವಾಗಿ ಶಾಂತಿ ನೆಲೆಸಲಿದೆ. ಮನಸ್ಸಿನಲ್ಲಿ ನೆಮ್ಮದಿ ಕೂಡ ಇದೇ ಕಾರಣಕ್ಕಾಗಿ ಹೆಚ್ಚುತ್ತದೆ.

ವೃಶ್ಚಿಕ ರಾಶಿ

ಸಾಕಷ್ಟು ಸಮಯಗಳಿಂದ ವೃಶ್ಚಿಕ ರಾಶಿಯವರು ಎದುರಿಸುತ್ತಿರುವಂತಹ ಹಣಕಾಸಿನ ಸಮಸ್ಯೆಯನ್ನ ಈ ಸಂದರ್ಭದಲ್ಲಿ ಬಗೆ ಹರಿಸಿಕೊಳ್ಳುವಂತಹ ಅವಕಾಶ ಸಿಗಲಿದೆ. ಆರೋಗ್ಯ ಕೂಡ ಉತ್ತಮವಾಗಲಿದ್ದು ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಕರ ರಾಶಿ

ದೀಪಾವಳಿಗಿಂತ ಮುಂಚೆ ಮಕರ ರಾಶಿಯವರ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಿ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗುವುದರಿಂದಾಗಿ ಮಕರ ರಾಶಿಯವರ ಜೀವನಶೈಲಿ ಹಾಗೂ ಆರ್ಥಿಕ ಪರಿಸ್ಥಿತಿ ಕೂಡ ಅತ್ಯುತ್ತಮವಾಗಲಿದೆ. ಪ್ರತಿಯೊಂದು ಸಮಸ್ಯೆಗಳನ್ನು ಕೂಡ ನಿವಾರಿಸಿ ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ.

Comments are closed.