Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿವಂತಿಕೆಯ ಅಧಿದೇವತೆ ಎಂಬುದಾಗಿ ಪರಿಗಣಿಸಲಾಗುವಂತಹ ಬುಧನ ಮಹಾ ದೆಸೆ ಎನ್ನುವುದು 17 ವರ್ಷಗಳ ಕಾಲ ಇರಲಿದೆ. ರಾಹು ಹಾಗು ಶುಕ್ರನ ನಂತರ ಅತ್ಯಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿರುವ ದಿಕ್ಕು ಅಂದ್ರೆ ಅದು ಬುಧ ದಿಕ್ಕು. ಈ ದೆಸೆ ಯಾರ ಜಾತಕದಲ್ಲಿ ಬಲವಾಗಿರುತ್ತದೆಯೋ ಅವರು ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಂಪಾದಿಸುತ್ತಾರೆ. 17 ವರ್ಷಗಳವರೆಗೂ ಕೂಡ ಅವರನ್ನು ತಡೆಯುವವರು ಯಾರು ಇಲ್ಲ. ಹಾಗಿದ್ರೆ ಅವರ್ಯಾರು ಅನ್ನೋದನ್ನ ತಿಳಿಯೋಣ ಬನ್ನಿ.
ವೃಷಭ ರಾಶಿ
ಕೆಲಸಗಳಲ್ಲಿ ಯಾವುದೇ ಅಡೆತಡೆ ಬಂದ್ರೂ ಕೂಡ ಅದನ್ನ ಹಿಮ್ಮೆಟ್ಟಿಸುವಂತಹ ಸಾಮರ್ಥ್ಯ ನಿಮ್ಮಲ್ಲಿದೆ. ಮುಂದುವರೆದು ಗೆಲುವನ್ನು ಪಡೆದುಕೊಳ್ಳುತ್ತೀರಿ. ಒಮ್ಮೆ ಒಂದು ಕೆಲಸವನ್ನು ಹೇಳಿದರೆ ಸಾಕು ವೃಷಭ ರಾಶಿಯವರು ಖಂಡಿತವಾಗಿ ಅದರಲ್ಲಿ ಗೆಲುವನ್ನು ಸಾಧಿಸುತ್ತಾರೆ. ಆರ್ಥಿಕವಾಗಿ ಯಾವುದೇ ಸಮಸ್ಯೆಗಳನ್ನು ಕೂಡ ನೀವು ಈ ಸಂದರ್ಭದಲ್ಲಿ ಹೊಂದಿರುವುದಿಲ್ಲ ಯಾಕೆಂದರೆ ಕೈತುಂಬ ಸಂಪಾದನೆ ಆಗಿರುತ್ತದೆ. ಭವಿಷ್ಯದ ದೃಷ್ಟಿಯಲ್ಲಿ ಹಣಕಾಸಿನ ಉಳಿತಾಯವನ್ನು ಕೂಡ ನೀವು ಮಾಡಬೇಕಾಗಿರುವುದು ಅಗತ್ಯವಾಗಿದೆ. ಹಣವನ್ನ ಹೂಡಿಕೆ ಮಾಡುವುದಕ್ಕೆ ಕೂಡ ಪ್ರಶಸ್ತವಾದ ಸಮಯವಾಗಿದೆ. ಮಾಡುವಂತಹ ಹೂಡಿಕೆ ಮೇಲೆ ಡಬಲ್ ಲಾಭ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಿಥುನ ರಾಶಿ
ಜೀವನದಲ್ಲಿ ನೀವು ಅಂದುಕೊಂಡಿರುವಂತಹ ಗುರಿಯನ್ನು ಸಾಧಿಸುವುದಕ್ಕೆ ಹೆಚ್ಚು ಕಷ್ಟ ಪಡಬೇಕಾದ ಅಗತ್ಯವಿಲ್ಲ. ಸ್ವಲ್ಪ ಪ್ರಯತ್ನ ಮಾಡಿದ್ರೆ ಸಾಕು, ನೀವು ಅಂದುಕೊಂಡಿದ್ದನ್ನೆಲ್ಲಾ ಸಾಧಿಸುವಂತಹ ಅವಕಾಶ ಈ ಸಂದರ್ಭದಲ್ಲಿದೆ. ನೀವು ಒಮ್ಮೆ ಒಂದು ಕೆಲಸವನ್ನು ಪೂರ್ತಿ ಮಾಡಬೇಕು ಎಂದರೆ ಅದನ್ನು ನೀವು ಪೂರ್ತಿ ಮಾಡುವ ನಡುವೆ ನಿಮ್ಮ ಕೆಲಸಕ್ಕೆ ಯಾರೇ ಅಡ್ಡ ಬಂದರೂ ಕೂಡ ನಿಮ್ಮ ದಾರಿಯನ್ನ ಅಡ್ಡಗಟ್ಟೋದಕ್ಕೆ ಸಾಧ್ಯವಿಲ್ಲ. ಒಮ್ಮೆ ಹಿಡಿದ್ರೆ ಸಾಕು ಆ ಕೆಲಸವನ್ನು ಮುಗಿಯುವವರೆಗೂ ಕೂಡ ನೀವು ಬಿಡುವುದಿಲ್ಲ. ಇನ್ನು ಈ ಸಂದರ್ಭದಲ್ಲಿ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳುವಂತಹ ಅವಕಾಶ ಕೂಡ ನಿಮಗೆ ಸಿಗಲಿದೆ. ಅದನ್ನ ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ನಿಮ್ಮ ಆದಾಯ ಕೂಡ ಗಣನೀಯವಾಗಿ ಹೆಚ್ಚಾಗಲಿದೆ.
ಕನ್ಯಾ ರಾಶಿ
ಈ ಸಂದರ್ಭದಲ್ಲಿ ಕನ್ಯಾ ರಾಶಿಯವರ ಮಾತುಗಾರಿಕೆಯ ವಿಚಾರದಲ್ಲಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ಹೀಗಾಗಿ ಈ ಸಂದರ್ಭದಲ್ಲಿ ಕನ್ಯ ರಾಶಿಯವರು ಆಡುವಂತಹ ಮಾತುಗಳು ಜನರನ್ನು ಇಂಪ್ರೆಸ್ ಮಾಡಲಿವೆ. ಈ ಸಂದರ್ಭದಲ್ಲಿ ಜನರಲ್ಲಿರುವಂತಹ ಬುದ್ಧಿವಂತಿಕೆ ಇನ್ನಷ್ಟು ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಯಾವುದೇ ಕೆಲಸವನ್ನು ಆರಂಭ ಮಾಡಬೇಕು ಅಂತ ಅಂದುಕೊಂಡಿದ್ದರೆ ಪ್ರಾರಂಭ ಮಾಡುವುದಕ್ಕೆ ಒಳ್ಳೆಯ ಸಮಯ ಇದೆ. ಅದು ವ್ಯಾಪಾರ ಅಥವಾ ಉದ್ಯೋಗವೇ ಆಗಿರಬಹುದು ಖಂಡಿತವಾಗಿ ನಿಮಗೆ ಲಾಭ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ಕೆಲಸ ಪ್ರಾರಂಭ ಮಾಡಿದ್ರು ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ
Comments are closed.