Astrology:ಸೂರ್ಯ ಶುಕ್ರ ಸಂಯೋಗದಿಂದಾಗಿ ಆಗಸ್ಟ್ ತಿಂಗಳಲ್ಲಿ ಈ ರಾಶಿಯವರಿಗೆ ಸಿಗಲಿದೆ ಕೈತುಂಬ ಹಣ ಹಾಗೂ ಕೆಲಸದಲ್ಲಿ ಪ್ರಮೋಷನ್!
Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 31 ರಂದು ಶುಕ್ರ ಸೂರ್ಯನ ರಾಶಿ ಆಗಿರುವಂತಹ ಸಿಂಹ ರಾಶಿಗೆ ಕಾಲಿಟ್ಟಿದ್ದಾನೆ. ಇದಾದ ನಂತರ ಆಗಸ್ಟ್ 16ನೇ ತಾರೀಕಿನಂದು ಗ್ರಹಗಳ ರಾಜ ಆಗಿರುವಂತಹ ಸೂರ್ಯ ತನ್ನ ಸ್ವಂತ ರಾಶಿ ಆಗಿರುವಂತಹ ಸಿಂಹ ರಾಶಿಗೆ ಕಾಲಿಡುವ ಮೂಲಕ ಶುಕ್ರನ ಜೊತೆಗೆ ಸಂಯೋಗವನ್ನು ನಿರ್ಮಿಸಲಿದ್ದಾನೆ. ಈ ವಿಶೇಷವಾದ ಸಂಯೋಗದಿಂದಾಗಿ ಕೆಲವು ನಿರ್ದಿಷ್ಟ ರಾಶಿಯವರಿಗೆ ಕೈ ತುಂಬಾ ಹಣ ಸಂಪಾದನೆ ಹಾಗೂ ಬೇರೆ ಬೇರೆ ರೀತಿಯ ಲಾಭಗಳು ದೊರಕುವಂತಹ ಸಾಧ್ಯತೆ ಇದ್ದು, ಬನ್ನಿ ಆ ಲಾಭಗಳು ಏನು ಅನ್ನೋದನ್ನ ಹಾಗೂ ರಾಶಿಯವರು ಯಾರು ಅನ್ನೋದನ್ನ ತಿಳಿಯೋಣ.
ವೃಷಭ ರಾಶಿ
ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ತಮ್ಮ ಜೀವನದಲ್ಲಿ ಸಾಕಷ್ಟು ಸುಖದಾಯದ ಸೌಕರ್ಯಗಳು ದೊರಕಲಿವೆ. ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಕೆಲಸದಲ್ಲಿ ನೀವು ಪ್ರಮೋಷನ್ ಪಡೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನೀವು ಗಳಿಸುವಂತಹ ಹಣದಿಂದ ವಾಹನ ಅಥವಾ ಪ್ರಾಪರ್ಟಿಯನ್ನು ಖರೀದಿ ಮಾಡುವಂತಹ ಅವಕಾಶ ನಿಮಗೆ ಸಿಗಲಿದೆ.
ಧನು ರಾಶಿ
ಸೂರ್ಯ ಹಾಗೂ ಶುಕ್ರನ ಸಂಯೋಗದಿಂದಾಗಿ ಧನು ರಾಶಿಯ ಜನರಲ್ಲಿ ಈ ಸಂದರ್ಭದಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗುವಂತಹ ಸಾಧ್ಯತೆ ದಟ್ಟವಾಗಿದೆ. ಕುಟುಂಬದ ಸದಸ್ಯರ ಜೊತೆಗೆ ನಿಮ್ಮ ಸಂಬಂಧ ಸಾಕಷ್ಟು ಉತ್ತಮವಾಗಲಿದೆ ಹಾಗೂ ದಾಂಪತ್ಯ ಜೀವನ ಕೂಡ ಸುಖವಮಯವಾಗಿರಲಿದೆ. ನಿಮ್ಮ ಕನಸಿನ ವಿದೇಶ ಪ್ರಯಾಣವನ್ನು ಕೂಡ ಈ ಸಂದರ್ಭದಲ್ಲಿ ಮಾಡಬಹುದಾಗಿದ್ದು, ನಿಮ್ಮ ಒಲವು ಧಾರ್ಮಿಕ ಕ್ರಿಯೆಗಳ ಬಗ್ಗೆ ಹೆಚ್ಚಾಗಿ ಕಂಡು ಬರಲಿದ್ದು ಧಾರ್ಮಿಕ ಕ್ಷೇತ್ರಗಳ ಭೇಟಿಯನ್ನು ಕೂಡ ನೀವು ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಅದೃಷ್ಟದ ಸಹಾಯದಿಂದಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
ಕರ್ಕ ರಾಶಿ
ಸೂರ್ಯ ಹಾಗೂ ಶುಕ್ರರ ಸಂಯೋಗ ಎನ್ನುವುದು ಕರ್ಕ ರಾಶಿಯವರಿಗೆ ಆಕಸ್ಮಿಕ ಧನ ಲಾಭವನ್ನು ಹೊತ್ತು ತರಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಜೀವನದಲ್ಲಿ ಅಂದುಕೊಂಡಿರುವಂತಹ ಗುರಿಯನ್ನು ಸಾಧಿಸುವುದಕ್ಕಾಗಿ ಹೆಚ್ಚು ಕಷ್ಟ ಪಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಸ್ವಲ್ಪ ಮಟ್ಟಿಗೆ ಪರಿಶ್ರಮ ಪಟ್ಟರು ಕೂಡ ನಿಮ್ಮ ಅದೃಷ್ಟದ ಸಹಾಯದಿಂದಾಗಿ ನೀವು ಗುರಿಯನ್ನು ವೇಗವಾಗಿ ಸಾಧಿಸಬಹುದಾಗಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಕರ್ಕ ರಾಶಿಯ ವ್ಯಕ್ತಿಗಳಿಗೆ ಸಾಕಷ್ಟು ಪದವಿ ಹಾಗೂ ಗೌರವಗಳನ್ನು ಹೊಂದುವಂತಹ ಅವಕಾಶ ಇದೆ. ಸಮಾಜದಲ್ಲಿ ಜನರ ನಡುವೆ ನಿಮ್ಮ ಜನಪ್ರಿಯತೆ ಹಾಗೂ ಗೌರವ ಹೆಚ್ಚಾಗಲಿದೆ. ವ್ಯಾಪಾರಿಗಳು ಈ ಸಂದರ್ಭದಲ್ಲಿ ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಇನ್ನು ನಿಮ್ಮ ಮಾತು ಈ ಸಂದರ್ಭದಲ್ಲಿ ಜನರ ಮೇಲೆ ಪ್ರಭಾವ ಬೀರುವುದಕ್ಕೆ ಯಶಸ್ವಿಯಾಗುತ್ತದೆ.
Comments are closed.