Astrology:ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26ನೇ ದಿನಾಂಕದಂದು ಆಚರಿಸಲಾಗುತ್ತಿದೆ. ಹೀಗಾಗಿ ಈ ವಿಶೇಷವಾದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೃಷ್ಣನಿಗೆ ಇಷ್ಟ ಆಗಿರುವಂತಹ ನಾಲ್ಕು ರಾಶಿಯವರು ಯಾರು ಅನ್ನೋದರ ಬಗ್ಗೆ. ಹಾಗಿದ್ರೆ ಬನ್ನಿ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾರು ಅನ್ನೋದನ್ನ ತಿಳಿಯೋಣ.
ವೃಷಭ ರಾಶಿ
ಕೃಷ್ಣನಿಗೆ ಇಷ್ಟವಾಗಿರುವಂತಹ ರಾಶಿಗಳಲ್ಲಿ ವೃಷಭ ರಾಶಿಯವರು ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃಷ್ಣನ ಆಶೀರ್ವಾದದಿಂದಾಗಿ ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಅದೃಷ್ಟದ ಸಹಾಯದಿಂದಾಗಿ ಗೆಲುವನ್ನು ಸಂಪಾದಿಸುತ್ತಾರೆ. ಇನ್ನು ವೃಷಭ ರಾಶಿಯವರು ಅಪಾರವಾದ ದೈವಭಕ್ತರಾಗಿರುತ್ತಾರೆ. ಮಾತುಗಾರಿಕೆಯ ವಿಚಾರಕ್ಕೆ ಬಂದರೆ ವೃಷಭ ರಾಶಿಯವರನ್ನ ಮೀರಿಸುವವರು ಮತ್ತೊಬ್ಬರಿಲ್ಲ. ಇದರಲ್ಲಿ ಕೂಡ ಅವರು ಶ್ರೀಕೃಷ್ಣನ ಅಂಶವನ್ನು ಪ್ರತಿಫಲಿಸುತ್ತಾರೆ.
ಕರ್ಕ ರಾಶಿ
ಪ್ರೀತಿ ಹಾಗೂ ಕಾಳಜಿಯನ್ನುವುದು ಕರ್ಕ ರಾಶಿಯವರ ಗುಣ ವಿಶೇಷತೆಗಳಲ್ಲಿ ಒಂದಾಗಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ತಮ್ಮ ಪ್ರೀತಿ ಪಾತ್ರರ ಬಗ್ಗೆ ಕರ್ಕ ರಾಶಿಯವರು ಹೆಚ್ಚಾಗಿ ಯೋಚನೆ ಮಾಡುತ್ತಾರೆ ಹಾಗೂ ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಭಕ್ತಿಯ ಭಾವನೆ ಕೂಡ ಕರ್ಕ ರಾಶಿಯವರಲ್ಲಿ ಹೆಚ್ಚಾಗಿರುವುದನ್ನು ನೀವು ಕಾಣಬಹುದಾಗಿದೆ. ಒಡಹುಟ್ಟಿದವರು ಬಗ್ಗೆ ಕೂಡ ನೀವು ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತೀರಿ.
ಸಿಂಹ ರಾಶಿ
ಶ್ರೀಕೃಷ್ಣನ ವಿಶೇಷವಾದ ಅನುಗ್ರಹ ಅಥವಾ ಆಶೀರ್ವಾದ ಎನ್ನುವುದು ಸಿಂಹ ರಾಶಿಯವರ ಮೇಲೆ ಇರುವ ಕಾರಣದಿಂದಾಗಿ ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳುವುದು ನಿಶ್ಚಿತವಾಗಿದೆ. ಸಿಂಹ ರಾಶಿಯವರ ಕಠಿಣ ಪರಿಶ್ರಮದ ಮನೋಭಾವನೆಗೆ ಸರಿಯಾದ ರೀತಿಯಲ್ಲಿ ಪ್ರತಿಫಲವನ್ನ ಶ್ರೀ ಕೃಷ್ಣ ಪರಮಾತ್ಮ ಕರುಣಿಸುತ್ತಾನೆ. ನಾಯಕತ್ವದ ಗುಣಗಳು ಸಿಂಹ ರಾಶಿಯವರಲ್ಲಿ ಹೆಚ್ಚಾಗಿರುತ್ತದೆ ಹಾಗೂ ಬೇರೆಯವರ ಕಷ್ಟಕ್ಕೆ ಪ್ರತಿ ಸ್ಪಂದಿಸುವಂತಹ ವಾತ್ಸಲ್ಯದ ಮನೋಭಾವನೆ ಕೂಡ ಇವರಲ್ಲಿ ಹೆಚ್ಚಾಗಿರುವುದರಿಂದಾಗಿ ಕೃಷ್ಣ ಪರಮಾತ್ಮನಿಗೆ ಇವರು ಹೆಚ್ಚಾಗಿ ಇಷ್ಟವಾಗುತ್ತಾರೆ. ಸಮಾಜದಲ್ಲಿ ಇವರು ತಮ್ಮ ವ್ಯಕ್ತಿತ್ವದ ಮೂಲಕವೇ ಪ್ರಭಾವಿ ವ್ಯಕ್ತಿಗಳಾಗಿ ಕಾಣಿಸುತ್ತಾರೆ. ಬೇರೆಯವರನ್ನ ಜೀವನದಲ್ಲಿ ಮುಂದೆ ಬಂದು ಏನಾದರು ಸಾಧಿಸಬೇಕು ಎನ್ನುವ ರೀತಿಯಲ್ಲಿ ಪ್ರೇರೇಪಣೆ ಮಾಡುವಂತಹ ಸ್ಪೂರ್ತಿದಾಯಕ ಮನೋಭಾವನೆಯನ್ನು ಕೂಡ ಸಿಂಹ ರಾಶಿಯವರು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಂದಿರುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರ ಮೇಲೆ ಕೂಡ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಖಂಡಿತವಾಗಿ ಇದ್ದೇ ಇರುತ್ತದೆ. ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದದಿಂದಾಗಿ ಜೀವನದಲ್ಲಿ ಸಿಗಬೇಕಾಗಿರುವಂತಹ ಪ್ರತಿಯೊಂದು ಸುಖ ಸಂತೋಷ ನೆಮ್ಮದಿಯನ್ನು ತುಲಾ ರಾಶಿ ಅವರು ಪಡೆದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ತುಲಾ ರಾಶಿಯವರು ಶ್ರೀಕೃಷ್ಣ ಪರಮಾತ್ಮನಿಗೆ ಸಂಬಂಧಪಟ್ಟಂತಹ ಮಂತ್ರ ಅಥವಾ ಶ್ಲೋಕಗಳನ್ನು ಹೇಳುವುದರಿಂದಾಗಿ ಅದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅವರಿಗೆ ಶುಭ ಲಾಭವನ್ನು ತಂದು ಕೊಡುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಕೂಡ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇವುಗಳೆ ಸ್ನೇಹಿತರೆ ಶ್ರೀಕೃಷ್ಣ ಪರಮಾತ್ಮನಿಗೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಷ್ಟವಾಗಿರುವಂತಹ ನಾಲ್ಕು ಅಚ್ಚುಮೆಚ್ಚಿನ ರಾಶಿಗಳು.
Comments are closed.