Astrology:ಮುಂದಿನ ಒಂಬತ್ತು ತಿಂಗಳವರೆಗೆ ಗುರುಬಲದಿಂದಾಗಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ಲಕ್ಷ್ಮಿ ನಿಮಗೆ ಒಲಿದು ಬರಲಿದ್ದಾಳೆ!
Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವತೆಗಳ ಗುರುಬ್ರಹಸ್ಪತಿ ತನ್ನ ಚಲನೆಯನ್ನು ಬದಲಾಯಿಸಿದ್ದು ಇದರಿಂದಾಗಿ ಕೆಲವು ನಿರ್ದಿಷ್ಟ ರಾಶಿಯವರಿಗೆ ಸಾಕಷ್ಟು ಲಾಭದಾಯಕ ಫಲಿತಾಂಶಗಳು ಕಂಡು ಬರಲಿವೆ. 2025ರ ಮೇ ತಿಂಗಳ ವರೆಗೂ ಕೂಡ ಇರಲಿಲ್ಲ ಆ ಅದೃಷ್ಟವಂತ ರಾಶಿಯವರು ಯಾರು ಅನ್ನೋದನ್ನ ತಿಳಿಯೋಣ ಬನ್ನಿ.
ವೃಷಭ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಹುಡುಕಿಕೊಂಡು ಬರಲಿದೆ. ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಲಿದೆ. ಒಂದು ವೇಳೆ ಯಾವುದಾದ್ರೂ ಉದ್ಯೋಗ ಅಥವಾ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಈ ಸಮಯ ಹೇಳಿ ಮಾಡಿಸಿದ ಸಮಯ ಎಂದು ಹೇಳಬಹುದು. ಗುರುಬಲ ಚೆನ್ನಾಗಿರುವುದರಿಂದಾಗಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ನಿಮಗೆ ಲಾಭ ಸಿಗಲಿದೆ.
ಸಿಂಹ ರಾಶಿ
ಗುರುವಿನ ಈ ಚಲನೆಯನ್ನು ಸಿಂಹ ರಾಶಿಯವರ ಜೀವನದಲ್ಲಿ ಆರ್ಥಿಕ ಲಾಭವನ್ನು ಹೊತ್ತು ತರಲಿದೆ. ನಿಮ್ಮ ಲೈಫ್ ಪಾರ್ಟ್ನರ್ ಜೊತೆಗೆ ಇರುವಂತಹ ಎಲ್ಲಾ ಸಮಸ್ಯೆಗಳನ್ನು ಕೂಡ ನೀವು ಈ ಸಂದರ್ಭದಲ್ಲಿ ಪರಿಹಾರ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ನೀವು ಉಳಿತಾಯ ಮಾಡುವಂತಹ ಹಣದಲ್ಲಿ ನಿಮ್ಮ ಸಾಕಷ್ಟು ವರ್ಷಗಳ ಕನಸಿನ ಮನೆಯನ್ನು ಖರೀದಿ ಮಾಡಬಹುದಾಗಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷಿಗಳನ್ನು ಕೂಡ ಈ ಸಂದರ್ಭದಲ್ಲಿ ಈಡೇರಿಸಿಕೊಳ್ಳುವಂತಹ ಅವಕಾಶ ಇದೆ. ಕುಟುಂಬಸ್ಥರ ಜೊತೆಗೆ ನಿಮ್ಮ ಸಂಬಂಧ ಕೂಡ ಉತ್ತಮವಾಗಿರಲಿದೆ.
ಕನ್ಯಾ ರಾಶಿ
ಕೆಲಸದಲ್ಲಿ ಕೊನೆಗೂ ಕೂಡ ನಿಮಗೆ ಸಿಗಬೇಕಾಗಿರುವಂತಹ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಸಿಗಲಿದೆ. ಸಾಕಷ್ಟು ಸಮಯಗಳಿಂದ ಪೂರ್ತಿಯಾಗಬೇಕಾಗಿರುವಂತಹ ಕೆಲಸಗಳು ಪೂರ್ಣಗೊಳ್ಳಲಿವೆ. ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವಂತಹ ನಿಮ್ಮ ಕನಸು ಈ ಸಂದರ್ಭದಲ್ಲಿ ನನಸಾಗಲಿದೆ. ಪ್ರಾಪರ್ಟಿಯನ್ನು ಕೂಡ ಈ ಸಂದರ್ಭದಲ್ಲಿ ನೀವು ಖರೀದಿ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಭೌತಿಕ ಆಸೆ ಆಕಾಂಕ್ಷಿಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಹಣಕಾಸಿನ ಅರಿವು ಕೂಡ ಚೆನ್ನಾಗಿರುದರಿಂದಾಗಿ ಹಿಂದಿಗಿಂತ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿರಲಿದೆ. ಮನೆಯವರ ಜೊತೆಗೆ ಉತ್ತಮ ಕ್ಷಣಗಳನ್ನು ನೀವು ಕಳೆಯಬಹುದಾಗಿದ್ದು ವಿಶೇಷವಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಂತಹ ಅದೃಷ್ಟ ಕೂಡ ನಿಮ್ಮದಾಗಲಿದೆ. ಕೆಲಸದ ಒತ್ತಡ ಕೂಡ ಹೆಚ್ಚಾಗಿ ಈ ಸಂದರ್ಭದಲ್ಲಿ ನಿಮ್ಮನ್ನು ಕಾಡುವುದಿಲ್ಲ.
Comments are closed.