Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಕಾರಕ ಆಗಿರುವಂತಹ ಶುಕ್ರ ಹಸ್ತ ನಕ್ಷತ್ರದಲ್ಲಿ ಪ್ರವೇಶ ಮಾಡಲಿದ್ದಾನೆ. ಇದೇ ಸಪ್ಟೆಂಬರ್ 2ಕ್ಕೆ ಶುಕ್ರ ನಕ್ಷತ್ರ ಪರಿವರ್ತನೆ ಮಾಡುವ ಕಾರಣದಿಂದಾಗಿ ಇದರಿಂದ ಶುಭ ಫಲಿತಾಂಶ ಉಂಟಾಗಲಿದ್ದು ಕೆಲವೊಂದು ರಾಶಿಯವರಿಗೆ ವಿಶೇಷವಾದ ಲಾಭ ಸಿಗಲಿದ್ದು ಆ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸಿಂಹ ರಾಶಿ
ಈ ಸಂದರ್ಭದಲ್ಲಿ ಸಿಂಹ ರಾಶಿಯವರ ಆದಾಯದಲ್ಲಿ ಗಣನೀಯವಾದ ಹೆಚ್ಚಳ ಕಂಡುಬರುತ್ತದೆ ಹಾಗಾಗಿ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಎಷ್ಟು ಹಣವನ್ನು ಖರ್ಚು ಮಾಡಿದರೂ ಕೂಡ ಅವರು ತಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಸಿಂಹ ರಾಶಿಯವರು ಮಾಡುವಂತಹ ಕೆಲಸದಲ್ಲಿ ಅವರಿಗೆ ಗೆಲುವು ನಿಶ್ಚಿತವಾಗಿದೆ. ಯಶಸ್ವಿ ಜೀವನವನ್ನು ನಡೆಸುವಂತಹ ಅವಕಾಶ ಕೂಡ ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಸಿಗಲಿದೆ.
ಕನ್ಯಾ ರಾಶಿ
ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳ ವಿರುದ್ಧ ಕೂಡ ಕನ್ಯಾ ರಾಶಿಯವರಿಗೆ ಈ ಸಂದರ್ಭದಲ್ಲಿ ಗೆಲುವು ಸಿಗಲಿದೆ ಹಾಗೂ ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಕೂಡ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವಂತಹ ಒಳ್ಳೆಯ ಕೆಲಸಗಳಿಗಾಗಿ ನೀವು ಹಿರಿಯ ಅಧಿಕಾರಿಗಳಿಂದ ಹಾಗೂ ಸಹೋದ್ಯೋಗಿಗಳಿಂದ ಮೆಚ್ಚುಗೆಗೆ ಒಳಗಾಗಲಿದ್ದೀರಿ. ಎಲ್ಲಕ್ಕಿಂತ ವಿಶೇಷವಾಗಿ ಕನ್ಯಾ ರಾಶಿ ಅವರು ಈ ಸಂದರ್ಭದಲ್ಲಿ ಆರ್ಥಿಕವಾಗಿ ಸದೃಢವಾಗಲಿದ್ದಾರೆ ಅನ್ನೋದೇ ಪ್ರಮುಖವಾಗಿರುವಂತಹ ವಿಚಾರವಾಗಿದೆ.
ಮಕರ ರಾಶಿ
ಶುಕ್ರನ ನಕ್ಷತ್ರ ಪರಿವರ್ತನೆ ಯಿಂದಾಗಿ ವಿಶೇಷವಾಗಿ ಮಕರ ರಾಶಿಯವರು ಆರ್ಥಿಕವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭ ಸಂಪಾದನೆ ಮಾಡಲಿದ್ದಾರೆ ಹಾಗೂ ತಮ್ಮ ಅಗತ್ಯತೆಗಳನ್ನು ಈ ಸಂದರ್ಭದಲ್ಲಿ ಪೂರೈಸಿ ಕೊಳ್ಳಬಹುದಾಗಿದೆ. ಕೆಲಸದಲ್ಲಿ ಪ್ರಮೋಷನ್ ಜೊತೆಗೆ ಸಂಬಳದಲ್ಲಿ ಹೆಚ್ಚಳವನ್ನು ಕೂಡ ಕಾಣಬಹುದಾಗಿದೆ. ಹೀಗಾಗಿ ಉದ್ಯೋಗಸ್ಥ ಆಗಿರಲಿ ಅಥವಾ ವ್ಯಾಪಾರಿಗಳೇ ಆಗಲಿ ಮಕರ ರಾಶಿಯವರಿಗೆ ಈ ಸಂದರ್ಭದಲ್ಲಿ ಕೈ ತುಂಬ ಧನ ಲಾಭವನ್ನು ಮಾಡಿಕೊಳ್ಳಲಿದ್ದಾರೆ. ಆರ್ಥಿಕ ಧನ ಲಾಭದ ಜೊತೆಗೆ ನಿಮ್ಮ ಆರೋಗ್ಯ ಕೂಡ ಈ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಸ್ಥಿತಿಯಲ್ಲಿ ಇರುತ್ತದೆ.
ಶುಕ್ರನ ನಕ್ಷತ್ರ ಪರಿವರ್ತನೆದಾಗಿ ಈ ಮೂರು ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆರ್ಥಿಕ ಧನ ಲಾಭ ಹಾಗೂ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಿಕೊಳ್ಳುವಂತಹ ಅದೃಷ್ಟದ ಅವಕಾಶವನ್ನು ಹೊಂದಲಿದ್ದಾರೆ. ಶುಕ್ರ ಶುಭಕಾರಕ ಆಗಿರುವುದರಿಂದಾಗಿ ಆತ ಬಲಿಷ್ಠ ವಾಗಿರುವಂತಹ ಪ್ರತಿಯೊಂದು ವಿಚಾರಗಳಲ್ಲಿ ಕೂಡ ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲಿದ್ದಾರೆ.
Comments are closed.