Astrology: ಮಲವ್ಯ ರಾಜಯೋಗದಿಂದಾಗಿ ಈ ರಾಶಿಯವರು ರಾತ್ರೋರಾತ್ರಿ ಶ್ರೀಮಂತರಾಗಲಿದ್ದಾರೆ. ಕೈತುಂಬ ಸಂಪಾದನೆ ಗ್ಯಾರಂಟಿ.

Astrology: ಸೆಪ್ಟೆಂಬರ್ ತಿಂಗಳಿನಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಡೆಯಲಿರುವಂತಹ ಬುಧ ಹಾಗೂ ಶುಕ್ರರ ಸಂಕ್ರಮಣದಿಂದಾಗಿ ಮಾಲವ್ಯ ಭದ್ರ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಕೆಲವು ನಿರ್ದಿಷ್ಟ ರಾಶಿಯವರಿಗೆ ಕೈತುಂಬಾ ದನ ಲಾಭವಾಗಲಿದೆ ಹಾಗೂ ಜೀವನದಲ್ಲಿ ಯಾವುದೇ ಕಷ್ಟಗಳು ಇದ್ದರೂ ಕೂಡ ಅವುಗಳು ನಿವಾರಣೆ ಆಗಲಿವೆ. ಬನ್ನಿ ಹಾಗಿದ್ರೆ ಆ ರಾಶಿಗಳು ಯಾವುವು ಅನ್ನೋದನ್ನ ತಿಳಿಯೋಣ.

ಮಿಥುನ ರಾಶಿ

ಈ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಹಣವನ್ನು ಸಂಪಾದನೆ ಮಾಡುವುದಕ್ಕೆ ಬೇರೆ ಬೇರೆ ಹೊಸ ಮಾರ್ಗಗಳು ಸಿಗಲಿವೆ. ವ್ಯಾಪಾರ ವ್ಯವಹಾರವನ್ನು ಮಾಡ್ತಾ ಇದ್ರೆ ಅದರಲ್ಲಿ ಕೂಡ ಗಣನೀಯವಾದ ಲಾಭವನ್ನು ನೀವು ಸಂಪಾದನೆ ಮಾಡುವಂತಹ ಅವಕಾಶ ಕೂಡ ಸೆಪ್ಟೆಂಬರ್ ತಿಂಗಳಲ್ಲಿ ಇದೆ. ಬರುವಂತಹ ಹಣ ಸಂಪಾದನೆಯ ಮೂಲಕ ನೀವು ಪ್ರಾಪರ್ಟಿ ಹಾಗೂ ನಿಮ್ಮ ನೆಚ್ಚಿನ ಹೊಸ ವಾಹನವನ್ನು ಕೂಡ ಖರೀದಿ ಮಾಡುವಂತಹ ಯೋಗ ನಿಮಗೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧ ಕೂಡ ಇನ್ನಷ್ಟು ಉತ್ತಮವಾಗಲಿದ್ದು ದಾಂಪತ್ಯ ಜೀವನ ಉತ್ತಮವಾಗಿ ಸಾಗಿ ಬರಲಿದೆ.

ಮಕರ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಮಕರ ರಾಶಿಯವರ ಕೆಲಸವನ್ನು ಗಮನಿಸಿ ಹಿರಿಯ ಅಧಿಕಾರಿಗಳು ಹೊಸ ಜವಾಬ್ದಾರಿಗಳನ್ನು ನೀಡುವಂತಹ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ನೀವು ನಿಮ್ಮ ಉದ್ಯೋಗದಲ್ಲಿ ಕೂಡ ಸಾಕಷ್ಟು ಅಭಿವೃದ್ಧಿಯನ್ನು ಕಾಣಲಿದ್ದೀರಿ ಹಾಗೂ ಯಾರೆಲ್ಲ ವ್ಯವಹಾರವನ್ನು ಮಾಡ್ತಾ ಇದಾರೋ ಅವರಿಗೂ ಕೂಡ ತಮ್ಮ ವ್ಯವಹಾರದಲ್ಲಿ ಅಭಿವೃದ್ಧಿ ಈ ಸಂದರ್ಭದಲ್ಲಿ ಕಂಡು ಬರಲಿದೆ. ಕೆಲಸ ಇಲ್ಲದೆ ಇರುವವರಿಗೆ ಅಥವಾ ಈಗಾಗಲೇ ಕೆಲಸದಲ್ಲಿ ಇದ್ದವರಿಗೂ ಕೂಡ ಒಳ್ಳೆಯ ಸಂಬಳದ ಉದ್ಯೋಗದ ಆಫರ್ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ. ಇರುವಂತಹ ಎಲ್ಲಾ ಬಾಕಿ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಸಂಪೂರ್ಣಗೊಳ್ಳಲಿವೆ.

ಕರ್ಕ ರಾಶಿ

ನಿಮ್ಮ ಕಷ್ಟದ ದಿನಗಳು ಮುಗಿದು ಒಳ್ಳೆಯ ದಿನಗಳು ಈ ಸಂದರ್ಭದಲ್ಲಿ ಪ್ರಾರಂಭವಾಗಲಿವೆ. ಭೌತಿಕ ಸುಖ ಸಂಪತ್ತುಗಳನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. ನಿಮ್ಮ ನಿರೀಕ್ಷಿತ ಎಲ್ಲಾ ಕೆಲಸಗಳು ಕೂಡ ಉತ್ತಮ ಫಲಿತಾಂಶಗಳನ್ನು ನೀಡಲಿವೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಉತ್ತಮ ಅವಕಾಶಗಳು ನಿಮ್ಮ ಕೆಲಸವನ್ನು ನೋಡಿ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಕರ್ಕ ರಾಶಿಯವರಿಗೆ ಈ ಸಂದರ್ಭದಲ್ಲಿ ತಾಯಿಯ ಜೊತೆಗಿನ ಸಂಬಂಧ ಇನ್ನಷ್ಟು ಉತ್ತಮವಾಗುವುದರಿಂದಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಭದ್ರ ಮಾಲವ್ಯ ರಾಜಯೋಗದಿಂದಾಗಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲಿರುವಂತಹ ಅದೃಷ್ಟವಂತ ರಾಶಿಯವರು ಇವರೇ.

Comments are closed.