Bigg Boss: ಕಿಚ್ಚನ ಬದಲಿಗೆ ಬಿಗ್ ಬಾಸ್ ಹೋಸ್ಟ್ ಮಾಡುವುದಕ್ಕೆ ಈ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ನಟನಿಗೆ ಬಂದಿದೆ ಬಿಗ್ ಆಫರ್!

Bigg Boss: ಇನ್ನೇನು ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದ 11ನೇ ಸೀಸನ್ ಪ್ರಾರಂಭ ಆಗುವಂತಹ ಸಮಯ ಹತ್ತಿರ ಬಂದಿದೆ. ಕಳೆದ 10 ಸೀಜನ್ ಗಳನ್ನು ಕೂಡ ಆರಂಭದಿಂದ ಇಂದಿನವರೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿರೂಪಣೆ ಮಾಡಿಕೊಂಡು ಬಂದಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ತಾನೊಬ್ಬ ಬೆಸ್ಟ್ ನಿರೂಪಣೆ ಎಂಬುದನ್ನ ಈ ಮೂಲಕ ಕಿಚ್ಚ ಸುದೀಪ್ ಸಾಬೀತುಪಡಿಸಿ ತೋರಿಸಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇನ್ಮುಂದೆ ಅವರು ನಿರೂಪಣೆ ಮಾಡ್ತಾರ ಇಲ್ವಾ ಎನ್ನುವುದಕ್ಕೆ ಅವರು ಇತ್ತೀಚಿಗಷ್ಟೇ ನೀಡಿರುವಂತಹ ಹೇಳಿಕೆ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿದೆ ಎಂದು ಹೇಳಬಹುದಾಗಿದೆ.

ಕಿಚ್ಚನ ಸ್ಥಾನಕ್ಕೆ ಮತ್ತೊಬ್ಬ ಸೂಪರ್ ನಿರೂಪಕ ಆಗಿರುವಂತಹ ರಮೇಶ್ ಅರವಿಂದ್ ರವರು ಬರ್ತಾರೆ ಎನ್ನುವಂತಹ ಮಾತು ಕೇಳಿಬಂದಿದ್ದು ಆದರೆ ಖುದ್ದಾಗಿ ಅವರೇ ನನಗೆ ಆ ರೀತಿಯ ಯಾವುದೇ ಆಫರ್ ಬಂದಿಲ್ಲ ಎಂಬಂತಹ ಸ್ಪಷ್ಟನೆಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಕಿಚ್ಚ ಸುದೀಪ್ ರವರ ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಕಾಂತಾರ ಸಿನಿಮಾದ ಸ್ಟಾರ್ ಆಗಿರುವಂತಹ ರಿಷಬ್ ಶೆಟ್ಟಿ ಅವರ ಹೆಸರು ಈಗ ಕೇಳಿ ಬರ್ತಾ ಇದ್ದು ಮುಂದಿನ ದಿನಗಳಲ್ಲಿ ಬಿಗ್ ಬಾಸ್ ನಿರೂಪಕರಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿವೆ.

ಆರಂಭದಿಂದಲೂ ಕೂಡ ಕಿಚ್ಚ ಸುದೀಪ್ ರವರು ಒಬ್ಬರೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕನ ಸ್ಥಾನದಲ್ಲಿ ಕಿಚ್ಚ ಸುದೀಪ್ ರವರನ್ನು ಹೊರತುಪಡಿಸಿ ಬೇರೆಯವರನ್ನು ನೋಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿಯೇ ಬಿಗ್ ಬಾಸ್ ಕಾರ್ಯಕ್ರಮದ ವೀಕ್ಷಕರು ಹೇಳ್ತಾರೆ. ಆದರೆ ಕಿಚ್ಚ ಸುದೀಪ್ ರವರ ಕಳೆದ ಕೆಲವು ಸಮಯಗಳ ಹೇಳಿಕೆಯನ್ನು ಗಮನಿಸಿದರೆ ಅವರಿಗೆ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಅಷ್ಟೊಂದು ಇಂಟರೆಸ್ಟ್ ಇದ್ದಂತಿಲ್ಲ. ಹೀಗಾಗಿ ಅವರ ಜಾಗಕ್ಕೆ ಮತ್ತೊಬ್ಬ ನಿರೂಪಕ ಬರಬೇಕಾಗಿರುವುದು ಅನಿವಾರ್ಯವಾಗಿದೆ.

ಸದ್ಯಕ್ಕೆ ಬೇರೆ ಭಾಷೆಗಳಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವಂತಹ ನಟ ಅಂದ್ರೆ ಅದು ರಿಷಬ್ ಶೆಟ್ಟಿ. ಹೀಗಾಗಿ ಅವರೇ ಈ ಕಾರ್ಯಕ್ರಮವನ್ನು ಮುಂದಿನ ಸೀಸನ್ ಗಳಲ್ಲಿ ನಡೆಸಿಕೊಂಡು ಹೋಗಲಿದ್ದಾರೆ ಅನ್ನುವಂತಹ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಕಾಲವೇ ಇದಕ್ಕೆ ಉತ್ತರ ನೀಡಬೇಕಾಗಿದೆ.

Comments are closed.