Business Idea: ಸ್ವಂತ ಉದ್ಯೋಗ ಮಾಡ್ಬೇಕಾ? ಹಾಗಾದ್ರೆ ಕಡಿಮೆ ಬಡ್ಡಿದರದಲ್ಲಿ 2 ಲಕ್ಷಗಳವರೆಗೆ ಸಾಲ ಸಿಗತ್ತೆ; ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
Business Idea: ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬಹುದಾಗಿದ್ದು ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ನಿಮಗೆ ಈ ಸಾಲ ಸೌಲಭ್ಯ ದೊರಕುತ್ತಿದೆ. ಈ ಸಾಲ ಸೌಲಭ್ಯದ ಬಗ್ಗೆ ಇರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಸಂಪೂರ್ಣ ಮಾಹಿತಿ!
ರಾಜ್ಯದ ವಿವಿಧ ನಿಗಮಗಳಿಂದ ಈ ಸಾಲಕ್ಕೆ ಕಡಿಮೆ ಬಡ್ಡಿ ದರದ ಜೊತೆಗೆ ಸಬ್ಸಿಡಿ ಕೂಡ ದೊರಕುತ್ತದೆ. ಅಂದರೆ ಎರಡು ಲಕ್ಷ ರೂಪಾಯಿಗಳವರೆಗಿನ ಸಾಲದ ಮೇಲೆ 30,000 ಸಬ್ಸಿಡಿಯನ್ನು ನೀಡಲಾಗುತ್ತದೆ. ಉಳಿದ 1.70 ಲಕ್ಷದ ಸಾಲದ ಮೇಲೆ ಕೇವಲ ನಾಲ್ಕು ಪ್ರತಿಶತ ಬಡ್ಡಿಯನ್ನು ಮಾತ್ರ ಕಟ್ಟಬೇಕಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಎಲ್ಲಿ?
ಹತ್ತಿರದ ಗ್ರಾಮವನ್ ಅಥವಾ ಕರ್ನಾಟಕವನ್ನು ಇಲ್ಲವೇ ಯಾವುದೇ ಸೇವ ಕೇಂದ್ರಗಳಿಗೆ ಹೋಗಿ ಆನ್ಲೈನ್ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್ 31ರ ಒಳಗೆ ಅರ್ಜಿ ಸಲ್ಲಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
ಬೇಕಾಗುವ ಡಾಕ್ಯುಮೆಂಟ್ಸ್ ಗಳು.
- ಆಧಾರ್ ಕಾರ್ಡ್ ಜೆರಾಕ್ಸ್
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಫೋಟೋ
- ಜಾತಿ ಹಾಗೂ ಇನ್ಕಮ್ ಸರ್ಟಿಫಿಕೇಟ್
- ರೇಷನ್ ಕಾರ್ಡ್ ನಂಬರ್
- ನಿಮ್ಮ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಮಾರ್ಕ್ಸ್ ಕಾರ್ಡ್ ಗಳು.
ಈ ಸಾಲವನ್ನು ಪಡೆಯುವುದಕ್ಕೆ ಬೇಕಾಗಿರುವ ಅರ್ಹತೆಗಳು.
- ಈ ಯೋಜನೆಗಾಗಿ ಅರ್ಜಿ ಸಲ್ಲಿಸುವಂತಹ ಕುಟುಂಬ ಗ್ರಾಮೀಣ ಭಾಗದಲ್ಲಿ ಇದ್ದರೆ ಅವರ ವಾರ್ಷಿಕ ಆದಾಯ 98,000 ಗಿಂತ ಹಾಗೂ ನಗರ ಪ್ರದೇಶದಲ್ಲಿ ಇದ್ದರೆ 1.20 ಲಕ್ಷಕ್ಕಿಂತ ಹೆಚ್ಚಾಗಿರಬಾರದು.
- ಇವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಹಾಗೂ ವಯಸ್ಸು 18ರಿಂದ 55 ವರ್ಷಗಳ ನಡುವೆ ಇರಬೇಕಾಗಿರುತ್ತದೆ.
- ಇದಕ್ಕಿಂತ ಮುಂಚೆ ಯಾವುದೇ ರೀತಿಯ ಸರ್ಕಾರಿ ಯೋಜನೆಗಳಲ್ಲಿ ಸಾಲ ಸೌಲಭ್ಯವನ್ನು ಅಥವಾ ಯಾವುದೇ ರೀತಿಯ ಫಲಾನುಭವಿಗಳಾಗಿರಬಾರದು.
- ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅರ್ಜಿದಾರರು ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಅಕೌಂಟ್ ಹೊಂದಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
- ಒಂದು ಕುಟುಂಬದಲ್ಲಿ ಈ ಯೋಜನೆ ಅಡಿಯಲ್ಲಿ ಒಬ್ಬರಿಗೆ ಮಾತ್ರ ಸಾಲದ ದೊರಕುತ್ತದೆ.
- ಯಾವ ಉದ್ಯಮ ಅಥವಾ ಉದ್ಯೋಗಕ್ಕಾಗಿ ಈ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೋ ಆ ಅರ್ಜಿದಾರರು ಆ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಬೇಕು.
- ಇನ್ನು ಅವರು ನಿರುದ್ಯೋಗಿ ಆಗಿರಬೇಕು ಅನ್ನೋದನ್ನ ಇಲ್ಲಿ ಪ್ರಮುಖವಾಗಿ ತಿಳಿಸಲಾಗಿದ್ದು ಅದನ್ನು ಸೂಚಿಸುವಂತಹ ಸರ್ಟಿಫಿಕೇಟ್ ಕೂಡ ನಿಮ್ಮಲ್ಲಿರಬೇಕು.
Comments are closed.