Citroen c3:ಭಾರತದ ಆಟೋಮೊಬೈಲ್ ಮಾರುಕಟ್ಟೆಗೆ ಬಂತು ನೋಡಿ ಹೊಸ ಕಾರ್; ಉತ್ತಮ ಫೀಚರ್ ಗಳ ಜೊತೆಗೆ ಬೆಲೆ ಕೂಡ ಆಶ್ಚರ್ಯ ಪಡಿಸುತ್ತೆ!

Citroen c3:ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ಕೇವಲ ನಮ್ಮ ಭಾರತ ದೇಶದ ಕಾರುಗಳು ಮಾತ್ರವಲ್ಲದೆ ವಿದೇಶಿ ಕಂಪನಿಗಳು ಕೂಡ ಕಾಲಿಟ್ಟಿವೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾನು ನಿಮಗೆ ಹೇಳುವುದಕ್ಕೆ ಹೊರಟಿರುವುದು ಸಿಟ್ರನ್ ಕಂಪನಿಯ ಕಾರಿನ ಬಗ್ಗೆ. ಸಿಟ್ರಾನ್ C3 ನ ನವೀಕರಿಸಲಾಗಿರುವಂತಹ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಸಿಟ್ರಾನ್ C3 ಕಾರಿನ ವಿನ್ಯಾಸ ಪ್ರತಿಯೊಬ್ಬ ಹ್ಯಾಚ್ಬ್ಯಾಕ್ ಸೆಗ್ಮೆಂಟ್ ನ ಕಾರುಪ್ರಿಯರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದೆ ಎಂಬುದಾಗಿ ಕೊಡು ತಿಳಿದುಬಂದಿದೆ. ಮೊದಲಿಗಿಂತಲೂ ಕೂಡ ಫೀಚರ್ ಗಳಲ್ಲಿ ಸಾಕಷ್ಟು ಉತ್ತಮ ಫಲಿತಾಂಶವನ್ನು ಕಂಡಿದೆ ಎಂಬುದನ್ನು ಕೂಡ ಇಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ.

ಸಿಟ್ರಾನ್ C3 ಕಾರಿನ ಬೆಲೆ ಹಾಗೂ ವಿಶೇಷತೆಗಳು!

ಈ ಕಾರಿನಲ್ಲಿ ನೀವು ಎಲ್ಇಡಿ ಪ್ರಾಜೆಕ್ಟರ್ ಹೆಡ್ ಲೈಟ್ ಗಳನ್ನು ಕಾಣಬಹುದಾಗಿದೆ. ಲೆದರ್ ಸ್ಟೆರಿಂಗ್ ವೀಲ್, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಇನ್ನು ಸುರಕ್ಷತೆಯ ವಿಚಾರದಲ್ಲಿ 6 ಏರ್ ಬ್ಯಾಗ್ ಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆ.

ಈ ಕಾರಿನ ಬೇರೆ ವೇರಿಯಂಟ್ ಗಳಲ್ಲಿ ಪವರ್ ವಿಂಡೋ ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಸಪೋರ್ಟ್ ಆಗುವುದನ್ನು ನೀವು ಕಾಣಬಹುದಾಗಿದೆ. 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಗೆ ಕಾಣಿಸಿಕೊಳ್ಳುವಂತಹ ಈ ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಇಂಜಿನ್ ಹಾಗೂ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ 1.2 ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ ಆಪ್ಶನ್ ಜೊತೆಗೆ ಕೂಡ ಸಿಗುತ್ತದೆ.

ಕಾರಿನ ಬೆಲೆಯ ಬಗ್ಗೆ ಮಾತನಾಡುವುದಾದರೆ ಸಿಟ್ರಾನ್ C3 ಕಾರಿನ ಬೆಲೆಯನ್ನ ಈ ಬಾರಿಯ ರಕ್ಷಾಬಂಧನಕ್ಕೆ ರೂ.30,000ಗಳಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಈ ಕಾರಿನ ಬೆಲೆ 6.16 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗಲಿದೆ. ಈ ಕಾರಿನಲ್ಲಿ ನಿಮಗೆ ಎಂಟು ವೇರಿಯಂಟ್ ಗಳು ದೊರಕುತ್ತವೆ. ಸಿಟ್ರಾನ್ C3 ಕಾರಿನ ಟಾಪ್ ವೇರಿಯಂಟ್ ಬೆಲೆ ಕೂಡ 9.41 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಇದು ಕೂಡ ಮೂವತ್ತು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದ್ದು ಹೊಸ ಫೀಚರ್ಗಳನ್ನ ಕಾರಿನಲ್ಲಿ ಅಳವಡಿಸಿರುವ ನಂತರ ಇನ್ನಷ್ಟು ಬೆಲೆಯನ್ನು ಹೆಚ್ಚು ಮಾಡಲು ಕೂಡ ಕಂಪೆನಿ ನಿರ್ಧರಿಸಿದೆ ಎನ್ನುವಂತಹ ಮಾಹಿತಿ ದೊರಕಿದೆ.

Comments are closed.