Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ಕಡೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಕಷ್ಟ ಪಡ್ತಾ ಇದ್ರೆ, ಇನ್ನೊಂದು ಕಡೆ ಅವರ ಹಳೆಯ ಸಿನಿಮಾಗಳ ನಿರ್ಮಾಪಕರು ಅವರ ಹೆಸರಿನಲ್ಲಿ ಆ ಸಿನಿಮಾಗಳನ್ನ ಮತ್ತೆ ಈಗ ಮರು ಬಿಡುಗಡೆ ಮಾಡಿ ಅಭಿಮಾನಿಗಳನ್ನ ಥಿಯೇಟರ್ ಗೆ ಕರೆಸಿ ಹಣ ಮಾಡಿಕೊಳ್ಳುವಂತಹ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಶಾಸ್ತ್ರಿ ಹಾಗೂ ಕರಿಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿರುವುದನ್ನು ನೀವು ಈ ಮೂಲಕ ನೋಡಿರಬಹುದಾಗಿದೆ.
ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ದರ್ಶನ್ ರವರ ಶಾಸ್ತ್ರಿ ಸಿನಿಮಾದ ಬಗ್ಗೆ. ಪಕ್ಕ ಮಾಸ್ ಕಮರ್ಷಿಯಲ್ ಸಿನಿಮಾ ಆಗಿರುವಂತಹ ಶಾಸ್ತ್ರಿ ಸಿನಿಮಾದಲ್ಲಿ ದರ್ಶನ್ ರವರು ಕಾಣಿಸಿಕೊಂಡಿರುವಂತಹ ವಿಭಿನ್ನ ಲುಕ್ ಹಾಗು ಮ್ಯಾನೇರಿಸಂ ಅಭಿಮಾನಿಗಳಿಗೆ ಫೇವರಿಟ್. ಪಿಎನ್ ಸತ್ಯ ನಿರ್ದೇಶನದಲ್ಲಿ ಹಾಗೂ ಸಾಧುಕೋಕಿಲ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಬಿಡುಗಡೆ ಆಗಿರೋದು 2005ರಲ್ಲಿ. ಅಣಜಿ ನಾಗರಾಜ್ ರವರ ನಿರ್ಮಾಣದಲ್ಲಿ ಮೂಡಿಬಂದಂತಹ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೆಡಿಕಲ್ ಸ್ಟೂಡೆಂಟ್ ನಿಂದ ಒಬ್ಬ ಗ್ಯಾಂಗ್ಸ್ಟರ್ ಆಗುವಂತಹ ವ್ಯಕ್ತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಆ ಸಮಯದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಈ ಸಿನಿಮಾ ಈಗ ಮತ್ತೆ ಮರು ಬಿಡುಗಡೆ ಕಂಡಿತ್ತು.
ಒಂದು ಕಡೆ ಕರಿಯ ಸಿನಿಮಾ ಮರು ಬಿಡುಗಡೆಯಾಗಿ ಸಾಕಷ್ಟು ಉತ್ತಮ ಪ್ರದರ್ಶನವನ್ನು ಕಾಣ್ತಾ ಇತ್ತು ಆದರೆ ಅದೇ ದರ್ಶನ್ ರವರ ಶಾಸ್ತ್ರಿ ಸಿನಿಮಾ ಮಾತ್ರ ಮರು ಬಿಡುಗಡೆಯಾಗಿ ನಾಲ್ಕು ಟಿಕೆಟ್ಗಳು ಕೂಡ ಸೇಲ್ ಆಗದೆ ಶೋ ಕ್ಯಾನ್ಸಲ್ ಆಗಿರುವಂತಹ ಘಟನೆ ಈಗ ನಡೆದಿರುವುದು ಕಂಡುಬಂದಿದೆ. ದರ್ಶನ್ ರವರಂತಹ ದರ್ಶನ್ ರವರ ಸಿನಿಮಾನೇ ಮರು ಬಿಡುಗಡೆಯಾಗಿ ಕೇವಲ ನಾಲ್ಕು ಟಿಕೆಟ್ಗಳನ್ನು ಕೂಡ ಸೇಲ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ ಎಂದರೆ ನಿಜಕ್ಕೂ ಕೂಡ ಬೇಸರದ ವಿಚಾರ. ಇದೇ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನಪ್ರಿಯತೆ ಕಡಿಮೆ ಆಯ್ತಾ ಅನ್ನೋದಾಗಿ ಕೂಡ ಕೆಲವರು ಕಾಮೆಂಟ್ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ.
ಯಾರೇ ಆಗಿರಲಿ ಯಾವ ದೊಡ್ಡ ಸ್ಟಾರ್ ಆಗಿರಲಿ ಸಿನಿಮಾ ನೋಡೋದಕ್ಕೆ ಜನ ಬಂದ್ರೆ ಮಾತ್ರ ಆತನ ಸ್ಟಾರ್ ಗಿರಿ ಉಳಿದುಕೊಳ್ಳುವುದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಬಹುದಾಗಿದೆ.
Comments are closed.