Darshan: ವಿನೋದ ಆಳ್ವ ಕನ್ನಡ ಮೂಲದ ಬಹುಭಾಷಾ ನಟ ಆಗಿದ್ದು ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಾಟೇರ ಸಿನಿಮಾದಲ್ಲಿ ಪ್ರಮುಖ ಕಳನಾಯಕ ರಲ್ಲಿ ಒಬ್ಬರ ಪಾತ್ರವನ್ನು ನಿರ್ವಹಿಸಿದ್ದಾರೆ ಹೀಗಾಗಿ ಇತ್ತೀಚಿಗಷ್ಟೇ ದರ್ಶನ್ ರವರ ಜೈಲಿನ ಪ್ರಕರಣದ ಬೆಳವಣಿಗೆಗಳನ್ನು ನೋಡಿ ತಾವು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ವಿಚಾರದ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಂಗಡಿಗರು ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜರ ಹಾಗೆ ಕುಳಿತು ಕಾಪಿ ಹಾಗೂ ಸಿಗರೇಟ್ ಸೇವಿಸುತ್ತಿದ್ದುದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಾತ್ರವಲ್ಲದೆ ಅಭಿಮಾನಿಯ ಜೊತೆಗೆ ವಿಡಿಯೋ ಕಾಲ್ ನಲ್ಲಿ ದರ್ಶನ್ ರವರು ಮಾತನಾಡಿರುವುದು ಕೂಡ ಕಂಡು ಬಂದಿದೆ. ಇದೇ ಕಾರಣಕ್ಕಾಗಿ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ವಿಚಾರದಲ್ಲಿ ದರ್ಶನರವರ ಬಗ್ಗೆ ಮಾತನಾಡುತ್ತಾ ನಟ ವಿನೋದ್ ಆಳ್ವ, ದರ್ಶನ್ ಎಲ್ಲರನ್ನೂ ಪ್ರೀತಿಯಿಂದ ಕಾಣುವಂತಹ ನಟ. 20 ರಿಂದ 25 ದಿನಗಳ ಕಾಲ ಕಾಟೇರದಲ್ಲಿ ನಾನು ತೊಡಗಿಸಿಕೊಂಡಿದ್ದೆ ಆ ಸಂದರ್ಭದಲ್ಲಿ ನಾನು ಕಂಡ ಹಾಗೆ ದರ್ಶನ್ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿ ಎಂಬುದಾಗಿ ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಏನಾಯ್ತು ಗೊತ್ತಿಲ್ಲ ಆದರೆ ಹೊರ ಬರುವಾಗ ಅವರು ಕಿಂಗ್ ರೀತಿಯಲ್ಲಿ ಹೊರ ಬರ್ತಾರೆ ಎಂದಿದ್ದಾರೆ. ನಾನು ಕೂಡ ಜೈಲಿಗೆ ಹೋಗಿ ಬಂದವನೇ, ಏನೋ ಕಾಫಿ ಸಿಗರೇಟ್ ಸೇದ್ತಾರೇ ಅಂದ್ರೆ ಅದಕ್ಕೆ ಬಳ್ಳಾರಿ ಜೈಲಿಗೆ ಕಳಿಸೋದ ಅದಕ್ಕೆ ಒಂದು ಕಾನೂನು ನಿಯಮ ಇದೆ ಅಂತ ದರ್ಶನರವರ ಪರವಾಗಿ ನಟ ವಿನೋದ್ ಆಳ್ವ ತಮ್ಮ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಹೊರಹಾಕಿದ್ದಾರೆ.
ಈ ಹಿಂದೆ ವಿನೋದ್ ಆಳ್ವ ಅವರು ಕೂಡ ದರ್ಶನ್ ರವರ ರೀತಿಯಲ್ಲಿ ಕೊ-ಲೆ ಪ್ರಕರಣದಲ್ಲಿ ಜೈಲುವಾಸವನ್ನು ಮಾಡಿಕೊಂಡು ಬಂದವರಾಗಿರುತ್ತಾರೆ. ತಮ್ಮ ಮಾಜಿ ಕೆಲಸಗಾರನ ಮುಗಿಸುವುದಕ್ಕೆ ಸಂಚು ಹೂಡಿದ್ದಾರೆ ಎನ್ನುವಂತಹ ಆರೋಪದ ಅಡಿಯಲ್ಲಿ ಜೈಲಿಗೆ ಹೋಗಿ ಬಂದಿದ್ದರು ಆದರೆ ನಂತರ ಜಾಮೀನು ಮಂಜೂರು ಮಾಡಿಕೊಂಡು ಹೊರ ಬಂದಿರುತ್ತಾರೆ. ಈಗಾಗಲೇ ದರ್ಶನ್ ರವರು ಎರಡು ತಿಂಗಳಿಗಿಂತಲೂ ಹೆಚ್ಚಿನ ಕಾಲ ಜೈಲುವಾಸವನ್ನ ಅನುಭವಿಸಿದ್ದು ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
Comments are closed.