Darshan Case:ಬಳ್ಳಾರಿ ಜೈಲಿಗೆ ಹೋಗ್ತಿದ್ದಂತೆ ಹೊಸ ಟಾಯ್ಲೆಟ್ ಪ್ರಾಬ್ಲಮ್ ಪ್ರಾರಂಭ ಮಾಡಿದ ದರ್ಶನ್!

Darshan Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದರು. ಆದರೆ ಕೆಲವೊಂದು ರೌಡಿಗಳ ಜೊತೆಗೆ ಕೈನಲ್ಲಿ ಕಾಫಿ ಮಗ್ ಹಾಗೂ ಸಿಗರೇಟ್ ಹಿಡಿದುಕೊಂಡಿದ್ದಂತಹ ದೃಶ್ಯಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಈಗ ಬಳ್ಳಾರಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ಬಳ್ಳಾರಿ ಜೈಲಿನ ಡಿ ಐ ಜಿ ಕೂಡ ಇಲ್ಲಿ ಕ್ಯಾಮೆರಾ ಅಥವಾ ಡ್ರೋನ್ ನಲ್ಲಿ ಜೂಮ್ ಮಾಡೋದಕ್ಕೆ ಹೋಗ್ಬೇಡಿ ಏನಾಗ್ತಾ ಇದೆ ಅಂತ ನಮ್ಮತ್ರ ಕೇಳಿ ನಾವು ಸುಳ್ಳು ಹೇಳೋದಿಲ್ಲ ಇರೋದನ್ನೆ ಹೇಳ್ತೀವಿ ಅನ್ನೋದಾಗಿ ಅವರು ಹೇಳಿದ್ದಾರೆ.

ಇನ್ನು ಜೈಲಿನಲ್ಲಿ ದರ್ಶನ್ ರವರನ್ನ ಸಿಂಗಲ್ ಸೆಲ್ ನಲ್ಲಿ ಇಟ್ಟಿದ್ದೇವೆ ಎನ್ನುವಂತಹ ಮಾಹಿತಿಯನ್ನು ಕೂಡ ಜೈಲಾಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ದರ್ಶನ್ ಹಾಗೂ ಅವರ ಸಹಚರರು ಇರುವಂತಹ ಕಾರಿಡಾರ್ನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರುವಂತಹ ವಿಚಾರದ ಬಗ್ಗೆ ಕೂಡ ಮಾಧ್ಯಮದಲ್ಲಿ ಜೈಲಾಧಿಕಾರಿಗಳು ಹೇಳಿಕೊಂಡಿದ್ದಾರೆ. ಮೂವರು ಸಿಬ್ಬಂದಿಗಳಿಗೆ ಬಾಡಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಯಾರೇ ಬಂದರೂ ಕೂಡ ಅಲ್ಲಿ ದೃಶ್ಯವನ್ನು ಸೆರೆ ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೆನ್ನು ನೋವು ಇರುವ ಕಾರಣದಿಂದಾಗಿ ಇಂಡಿಯನ್ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಸರ್ಜಿಕಲ್ ಚೇರಿಗೆ ಮನವಿ ಮಾಡಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರೆ. ಇದನ್ನ ಮೆಡಿಕಲ್ ಟೆಸ್ಟ್ ನಡೆಸಿದ ನಂತರ ನೀಡಬೇಕು ಬೇಡವೋ ಎನ್ನುವಂತಹ ನಿರ್ಧಾರವನ್ನು ನಂತರ ಮಾಡುತ್ತೇವೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನು ಬಿಟ್ಟರೆ ದರ್ಶನ್ ರವರಿಗೆ ಅವರ ಸೆಲ್ ನಲ್ಲಿ ಒಂದು ಚೊಂಬು ಒಂದು ಲೋಟ ಒಂದು ತಟ್ಟೆ ಹಾಗೂ ಹೊದಿಕೆಯನ್ನು ನೀಡಲಾಗಿದೆ ಎಂಬಂತಹ ಮಾಹಿತಿಯನ್ನು ಕೂಡ ಜೈಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ದರ್ಶನ್ ರವರ ಬೇಡಿಕೆಯನ್ನು ಪೂರೈಸಲಾಗುತ್ತಾ ಇಲ್ವಾ ಅನ್ನೋದನ್ನ ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

ಬಳ್ಳಾರಿ ಜೈಲಿಗೆ ಬಂದ್ರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಷ್ಟ ಇನ್ನೂ ಕಡಿಮೆ ಆಗಿಲ್ಲ ಅನ್ನೋದು ಮತ್ತೆ ಮತ್ತೆ ಕಂಡು ಬರ್ತಾ ಇದೆ. ಈ ಬಾರಿ ದರ್ಶನ್ ರವರ ಜೈಲಿನಲ್ಲಿರುವಂತಹ ಪ್ರತಿಯೊಂದು ಚಾಲನ ವಾಲನಗಳನ್ನು ಕೂಡ 24 ಗಂಟೆ ಸೇವ್ ಮಾಡಿಕೊಳ್ಳುವಂತಹ ಆದೇಶವನ್ನು ಕೂಡ ನೀಡಲಾಗಿದೆಯಂತೆ.

Comments are closed.