Darshan Case: ದರ್ಶನ್ ರವರನ್ನು ಜೈಲಿಗೆ ಹೋಗಿ ಭೇಟಿ ಮಾಡುವ ಬಗ್ಗೆ ಕಿಚ್ಚ ಸುದೀಪ್ ಮಾಧ್ಯಮದವರಿಗೆ ನೀಡಿದ ಕಡಕ್ ಉತ್ತರ ಎಂತದ್ದು ಗೊತ್ತಾ?
Darshan Case: ಆ ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಳ್ಳಾರಿ ಜೈಲಿಗೆ ಹೋಗಿದ್ದಾರೆ ಹಾಗೂ ಈ ಕಡೆ ಒಂದು ಕಾಲದ ಅವರ ಸ್ನೇಹಿತರಾಗಿರುವಂತಹ ಹಾಗೂ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ಆಗಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಇದ್ದಕ್ಕಿದ್ದಂತೆ ತಮ್ಮ ಜನ್ಮದಿನದ ಸಂಭ್ರಮಾಚರಣೆಯ ವಿಚಾರವಾಗಿ ಅನೌನ್ಸ್ ಮಾಡೋದಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದು ಈ ಪತ್ರಿಕಾಗೋಷ್ಠಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತಹ ಕೆಲಸವನ್ನು ಮಾಡಿದ್ದು ಅದೇ ಸಂದರ್ಭದಲ್ಲಿ ದರ್ಶನ್ ರವರ ವಿಚಾರ ಕೂಡ ಮಾಧ್ಯಮದಿಂದ ಕಂಡುಬಂದಿತು.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಒಂದು ಕಾಲದಲ್ಲಿ ಸಾಕಷ್ಟು ಉತ್ತಮ ಸ್ನೇಹಿತರಾಗಿದ್ದರು ಹಾಗೂ ಕುಚಿಕು ಗಳು ಎಂಬುದಾಗಿ ಕರೆಸಿಕೊಳ್ಳುತ್ತಿದ್ದರು. ಆದರೆ ಇಬ್ಬರ ನಡುವೆ ಕಂಡುಬಂದಂತಹ ಕೆಲವೊಂದು ಮನಸ್ತಾಪಗಳ ಕಾರಣದಿಂದಾಗಿ ಇಬ್ಬರೂ ಕೂಡ ಬೇರೆಯಾಗಿರುತ್ತಾರೆ. ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ರವರು ಪ್ರಮುಖವಾಗಿ ಜಯನಗರದ ಎಮ್ ಇಎಸ್ ಗ್ರೌಂಡ್ ನಲ್ಲಿ ಕೆಲವೊಂದು ನಿರ್ದಿಷ್ಟ ಸಮಯದ ವರೆಗೆ ತಮ್ಮ ಅಭಿಮಾನಿಗಳ ಜೊತೆಗೆ ಸೆಪ್ಟೆಂಬರ್ 2ನೇ ದಿನಾಂಕದಂದು ಬರ್ತಡೆಯನ್ನು ಆಚರಿಸಿಕೊಳ್ಳುತ್ತೇನೆ ಎನ್ನುವ ವಿಚಾರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖವಾಗಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಬಳಿ ಮಾಧ್ಯಮದವರು ದರ್ಶನ್ರವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ಬರುವಂತಹ ವಿಚಾರದ ಬಗ್ಗೆ ಕೂಡ ಪ್ರಶ್ನಿಸುತ್ತಾರೆ. ಅದಿಕ್ಕೆ ಕಿಚ್ಚ ಸುದೀಪ್ ರವರು ಅವರ ಕುಟುಂಬದವರು ಇದ್ದಾರೆ ಅವರ ಫ್ಯಾನ್ಸ್ ಇದ್ದಾರೆ ಅವರಿಗೆ ನೋಯಿಸುವಂತಹ ಕೆಲಸವನ್ನು ನಾನು ಮಾಡಲಾರೆ. ಕಾನೂನು ಇದೆ ಸರ್ಕಾರ ಇದೆ ಹಾಗೂ ನಿಮ್ಮ ಮಾಧ್ಯಮಗಳಲ್ಲಿ ಬರುವಂತಹ ಸುದ್ದಿಯನ್ನು ನೋಡಿ ನಾನು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ನಾವಿಬ್ಬರು ಒಟ್ಟಿಗೆ ಚೆನ್ನಾಗಿದ್ರೆ ಹೋಗಿ ನೋಡಿ ಮಾತನಾಡಿಕೊಂಡು ಬರುತ್ತಿದ್ದೆ. ಅವರು ಸರಿ ಇಲ್ಲ ನಾನು ಸರಿ ಇಲ್ಲ ಅಂತ ಅಲ್ಲ ನಮ್ಮಿಬ್ಬರ ನಡುವೆ ಸರಿ ಇಲ್ಲ ಸೂರ್ಯ ಬೆಳಗ್ಗೆ ಬಂದ್ರೆ ಚಂದ ಚಂದ್ರ ರಾತ್ರಿಗೆ ಬಂದ್ರೆನೇ ಚಂದ. ಇಬ್ಬರು ಒಟ್ಟಿಗೆ ಬರಬಾರದು ಎನ್ನುವಂತಹ ಮಾತನ್ನು ಹೇಳುವ ಮೂಲಕ ಪತ್ರಕರ್ತರ ಪ್ರಶ್ನೆಗೆ ಉತ್ತರವನ್ನು ನೀಡುವಂತಹ ಕೆಲಸವನ್ನು ಕಿಚ್ಚ ಸುದೀಪ್ ರವರು ಜಾಣ್ಮೆಯ ಮೂಲಕ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಗ್ ಬಾಸ್ ಬಗ್ಗೆ ಕೂಡ ಕಿಚ್ಚ ಸುದೀಪ್ ರವರು ಅಡ್ಡಗೋಡೆಯ ಮೇಲೆ ದೀಪ ಇಡುವಂತಹ ಉತ್ತರವನ್ನು ನೀಡುವ ಮೂಲಕ ಬಹುತೇಕ ಈ ಬಾರಿ ನಡೆಯಲಿರುವಂತಹ ಬಿಗ್ ಬಾಸ್ ಕೊನೆಯ ಬಿಗ್ ಬಾಸ್ ಆಗಬಹುದು ಅನ್ನುವಂತಹ ಸಂದೇಶವನ್ನ ಮಾಧ್ಯಮದ ಮೂಲಕ ನೀಡಿದ್ದಾರೆ ಎಂದು ಹೇಳಬಹುದಾಗಿದೆ.
Comments are closed.