Darshan Case: ಚಾರ್ಜ್ ಶೀಟ್ ಸಲ್ಲಿಕೆ ಬಂದಲ್ಲಿ ಪತ್ನಿಗೆ ಕರೆ ಮಾಡಿದ ದರ್ಶನ್, ಫೋನಲ್ಲೇ ಕಣ್ಣೀರು!

Darshan Case: ರೇಣುಕ ಸ್ವಾಮಿ ಅವರ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಂಗಡಿಗರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ನ್ಯಾಯಾಂಗ ಎಲ್ಲಕ್ಕಿಂತ ಪ್ರಮುಖವಾಗಿ ಈ ಪ್ರಕರಣದಲ್ಲಿ ಈಗ ಪೊಲೀಸರು ನೆನ್ನೆ ಅಷ್ಟೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಸಲಿಕ್ಕೆ ಆದ ಬೆನ್ನಲ್ಲೆ ಡಿ ಬಾಸ್ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ನಿನ್ನೆ ಮಧ್ಯಾಹ್ನ 2:30ರ ಸುಮಾರಿಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫೋಟೋ ವೈರಲ್ ಆದ ನಂತರ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಿದ ನಂತರ ಕೂಡ ದರ್ಶನ್ ರವರನ್ನು ಮಾತನಾಡಿಸುವುದಕ್ಕಾಗಿ ಅವರ ಪತ್ನಿ ಮೊದಲ ದಿನವೇ ಬಂದಿದ್ರು ಅನ್ನೋದನ್ನ ಕೂಡ ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು.

ಇನ್ನು ದರ್ಶನ್ ರವರು ತಮ್ಮ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ಅವರ ಜೊತೆಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ವಿಚಾರದಲ್ಲಿ ಕೂಡ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂದರ್ಭದಲ್ಲಿ ಜೈಲಿನ ಅಧಿಕಾರಿಗಳು ಜೈಲಿನ ನಿಯಮಗಳಂತೆ ತಮ್ಮ ಪತ್ನಿಯ ಜೊತೆಗೆ ದರ್ಶನ್ ರವರು 5 ನಿಮಿಷ ಮಾತನಾಡಿರುವುದನ್ನ ಸಂಪೂರ್ಣವಾಗಿ ರೆಕಾರ್ಡ್ ಕೂಡ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ದರ್ಶನ್ ರವರನ್ನು ರಾಜಾಥಿತ್ಯ ನೀಡ್ತಾ ಇದ್ದಾರೆ ಎನ್ನುವ ಕಾರಣಕ್ಕಾಗಿ ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ಇನ್ನು ಅವರ ಉಳಿದ ಸಂಗಡಿಗರನ್ನು ಶಿವಮೊಗ್ಗ, ತುಮಕೂರು, ಮೈಸೂರು ಹಾಗೂ ವಿಜಯಪುರ ಅಂತ ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಕೂಡ ದೊರಕಿದೆ. ಈಗಾಗಲೇ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಸಲ್ಲಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ದರ್ಶನ್ ರವರಿಗೆ ಯಾವಾಗ ಜಾಮೀನು ಸಿಗಬಹುದು ಅಥವಾ ಈ ಪ್ರಕರಣ ಯಾವ ರೀತಿಯ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸದ್ಯಕ್ಕಂತು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರಕರಣ ಎನ್ನುವುದು ಕನ್ನಡ ಚಿತ್ರರಂಗ ಕಂಡಂತಹ ದೊಡ್ಡ ಮಟ್ಟದ ಬದಲಾವಣೆ ಅಂದರೆ ತಪ್ಪಾಗಲಾರದು. ದರ್ಶನ್ ರವರು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಕ್ವೆಸ್ಟ್ ಮಾಡಿದ್ದ ಸರ್ಜಿಕಲ್ ಚೇರ್ ಅನ್ನು ಕೂಡ ವೈದ್ಯರು ದರ್ಶನ್ ರವರಿಗೆ ತಪಾಸಣೆಯ ನಂತರ ನೀಡುವಂತಹ ಕೆಲಸವನ್ನು ಮಾಡಿದ್ದಾರೆ.

Comments are closed.