Darshan case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸರಿಸುಮಾರು ನೂರು ದಿನಗಳಿಗಿಂತಲೂ ಕೂಡ ಹೆಚ್ಚು ಸಮಯದಿಂದ ಜೈಲುವಾಸವನ್ನ ಅನುಭವಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ರೇಣುಕಾ ಸ್ವಾಮಿ ಅವರ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ರೀತಿ ಸಿಲುಕಿಕೊಂಡಿರುವುದು ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು ಎಂದು ಹೇಳಬಹುದಾಗಿದೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ರವರನ್ನು ವರ್ಗಾವಣೆ ಮಾಡಲಾಗಿತ್ತು ಆದರೆ ಅದಾದ ನಂತರ ಅಲ್ಲಿ ವೈರಲ್ ಆಗಿರುವಂತಹ ಫೋಟೋ ಕಾರಣದಿಂದಾಗಿ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು.
ಈಗ ಬೆಳಗಾವಿ ಜೈಲಿನಲ್ಲಿ ದರ್ಶನ್ ರವರಿಗೆ ಕೇಳುವಂತಹ ಕೆಲವೊಂದು ಸೌಕರ್ಯಗಳನ್ನು ಜೈಲಾಧಿಕಾರಿಗಳು ನೀಡುತ್ತಿಲ್ಲ ಎನ್ನುವಂತಹ ಕೆಲವೊಂದು ಮಾಹಿತಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಓಡಾಡುತ್ತಿವೆ. ಅದರ ನಡುವಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜಾಮೀನು ಪ್ರಕ್ರಿಯೆ ಕೂಡ ತೆರೆ ಮರೆಯಲ್ಲಿ ನಡೆಯುತ್ತಿರುವುದು ಕೂಡ ಕೇಳಿಬಂದಿದೆ. ಹೌದು ಹೈಕೋರ್ಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿರುವ ಬಗ್ಗೆ ಕೂಡ ಅಪ್ಡೇಟ್ ಸಿಕ್ಕಿದೆ. ಇದರ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಜಾಮೀನು ಸಿಕ್ಕ ನಂತರ ಯಾವ ರೀತಿ ಕರೆತರಬೇಕು ಎನ್ನುವುದರ ಬಗ್ಗೆ ಕೂಡ ಪ್ಲಾನಿಂಗ್ ನಡೆದಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ನಲ್ಲಿ ಕರೆತರಬೇಕು ಎನ್ನುವಂತಹ ತಯಾರಿಗಳು ಕೂಡ ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಇದು ವೆಲ್ಕಮ್ ಗಾಗಿ ಈ ರೀತಿ ಮಾಡಲಾಗುತ್ತಿದೆ ಎಂಬುದಾಗಿ ಭಾವಿಸುವಂತಹ ಅಗತ್ಯವಿಲ್ಲ ಇದರ ಹಿಂದೆ ಇನ್ನೊಂದು ನಿಜವಾದ ಕಾರಣ ಕೂಡ ಇದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಬೆಳಗಾವಿಯಿಂದ ಬೆಂಗಳೂರಿಗೆ ರೋಡ್ ಮೂಲಕ ಬಂದರೆ ಆಗ ದಾರಿ ಮಧ್ಯ ಅಭಿಮಾನಿಗಳು ಸ್ವಾಗತ ಮಾಡುವಂತಹ ನೆನಪದಲ್ಲಿ ಬೇರೆ ಸಮಸ್ಯೆಗಳು ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರವನ್ನು ಕೈ ತೆಗೆದುಕೊಳ್ಳಲಾಗುತ್ತಿದೆ ಎನ್ನುವಂತಹ ಮಾಹಿತಿ ಕೂಡ ದೊರಕಿದೆ. ಸದ್ಯಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದ್ದು ಇದು ಯಾವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ತಿರು ಪಡೆದುಕೊಳ್ಳುತ್ತದೆ ಅಥವಾ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments are closed.