Darshan fans: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿನ್ನೆಯಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ 51ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಕೂಡ ನಟಿಸಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಈ ಸಂದರ್ಭದಲ್ಲಿ ಮಾತನಾಡುತ್ತಾ ನಾನು ಇಷ್ಟೊಂದು ದಿನ ತಲೆ ಎತ್ತಿ ಓಡಾಡಿಕೊಂಡಿರುವುದಕ್ಕೆ ಅಭಿಮಾನಿಗಳಾದ ನೀವೇ ಕಾರಣ ಎಂಬುದಾಗಿ ಹೇಳುವ ಮೂಲಕ ಅಭಿಮಾನಿಗಳು ಕೂಡ ಭಾವುಕರಾಗುವಂತೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ನಾನು ನಿಮಗೆ ಕಳಂಕ ತರುವಂತಹ ಯಾವುದೇ ಕೆಲಸವನ್ನು ಕೂಡ ಮಾಡುವುದಿಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ವ್ಯಕ್ತಿತ್ವದಿಂದಲೇ ಮಾತ್ರ ನಾವು ದೊಡ್ಡವರಾಗೋದಕ್ಕೆ ಸಾಧ್ಯ ಎನ್ನುವ ಮಾತನ್ನು ಕೂಡ ಹೇಳಿದ್ದಾರೆ. ನಾನು ಕೂಡ ಈ ಸಿನೆಮಾ ರಂಗದಲ್ಲಿ ಮುಂದುವರೆದು ತಗ್ಗಿ ಬಗ್ಗಿ ನಡೆಯುವುದಕ್ಕೆ ಕಾರಣ ಆಗಿರೋದು ಕೂಡ ನಿಮ್ಮ ಈ ಅಭಿಮಾನ ಹಾಗೂ ಕೂಗು ಎಂಬುದಾಗಿ ಕಿಚ್ಚ ಅಭಿಮಾನಿಗಳ ಪರವಾಗಿ ಮಾತನಾಡಿದ್ದಾರೆ. ತಮ್ಮ ಅಭಿಮಾನಿಗಳ ಬಗ್ಗೆ ಕಿಚ್ಚ ಸುದೀಪ್ ರವರು ಆಡಿರುವಂತಹ ಈ ಮಾತುಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬೇರೇನೇ ರೂಪ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ.
ದರ್ಶನ್ ಅಭಿಮಾನಿಗಳು ಈ ಮಾತನ್ನು ಕಿಚ್ಚ ಸುದೀಪ್ ರವರು ಪರೋಕ್ಷವಾಗಿ ದರ್ಶನ್ ರವರು ಹಾಗೂ ಅವರ ಅಭಿಮಾನಿಗಳ ಬಗ್ಗೆ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಕೂಡ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನ ಹಾಗೂ ಅತಿಯಾದ ಅಭಿಮಾನ ಎರಡಕ್ಕೂ ಇರುವಂತಹ ವ್ಯತ್ಯಾಸವನ್ನು ಕಿಚ್ಚ ಸುದೀಪ್ ರವರು ಹೇಳಿರುವುದು ಕೂಡ ದರ್ಶನ್ ಅಭಿಮಾನಿಗಳಿಗೆ ಹೇಳಿದಂತಿದೆ ಎನ್ನುವ ರೀತಿಯಲ್ಲಿ ಕೂಡ ವ್ಯಕ್ತವಾಗುತ್ತಿದೆ. ಜನ್ಮದಿನಾಚರಣೆಯ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರು ಹೇಳಿರುವಂತಹ ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಕೆಲಸವನ್ನು ನಾನು ಯಾವತ್ತೂ ಕೂಡ ಮಾಡೋದಿಲ್ಲ ಎನ್ನುವಂತಹ ಮಾತು ದರ್ಶನ್ ರವರಿಗೆ ಟಾರ್ಗೆಟ್ ಆಗಿ ಹೇಳಿದಂತಿದೆ ಎನ್ನುವ ರೀತಿಯಲ್ಲಿ ಕೂಡ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿರುವುದು ಕೂಡ ಇತ್ತೀಚಿನ ಸಮಯದಲ್ಲಿ ಕಂಡು ಬರ್ತಾ ಇದ್ದು ನಿಜಕ್ಕೂ ಕೂಡ ಕಿಚ್ಚ ಇದೇ ಅರ್ಥದಲ್ಲಿ ಹೇಳಿದ್ದಾರ ಎನ್ನುವುದರ ಬಗ್ಗೆ ಕೂಡ ಪರ ವಿರೋಧ ಚರ್ಚೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಅವರು ಆಡಿರೋದು ಒಂದು ನೇರ ಮಾತಾಗಿದ್ರು ಕೂಡ ಇಲ್ಲಿ ಅಭಿಪ್ರಾಯಗಳು ಮಾತ್ರ ಉಳಿದವರು ಕಂಡಂತೆ ಎನ್ನುವ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಅನ್ನೋದೆ ಆಶ್ಚರ್ಯಕರವಾಗಿದೆ.
Comments are closed.