Kannada Recipe: ರಾತ್ರಿ ಅಕ್ಕಿ ನೆನೆಸೋದಕ್ಕೆ ಮರೆತುಹೋಯ್ತಾ? ಚಿಂತೆ ಯಾಕೆ ಹತ್ತೇ ನಿಮಿಷದಲ್ಲಿ ತಯಾರಿಸಿ ಮಸಾಲಾ ಅಪ್ಪಂ, ಹೇಗೆ ಗೊತ್ತಾ?

Kannada Recipe: ನಾವು ಎಷ್ಟೊಂದು ಬಗೆಯ ದೋಸೆ (Dose)ಯನ್ನು ಮಾಡ್ತೇವೇ ಅಲ್ವಾ? ದೇಶದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ದೋಸೆ ವೆರೈಟಿ (variety) ಇದೆ. ಅದರಲ್ಲೂ ಬೆಳಗಿನ ಉಪಹಾರಕ್ಕೆ ಸೂಟ್ ಆಗುವ ಏಕೈಕ ಫುಡ್ ಅಂದ್ರೆ ಅದು ದೋಸೆ. ಕರ್ನಾಟಕದಲ್ಲಿ ದೋಸೆ ಮಾಡಿದಂತೆ ಕೇರಳ (Kerala)ದಲ್ಲಿ ಅಪ್ಪಂ ಫೇಮಸ್. ಇದು ತಿನ್ನೋದಕ್ಕೂ ರುಚಿಕರ. ಅದರಲ್ಲೂ ಮಸಾಲಾ ಅಪ್ಪಂ ಮಾಡಿದ್ರಂತೂ ಜನ ಚಪ್ಪರಿಸಿಕೊಂಡು ತಿಂತಾರೆ. ಮಸಾಲಾ ಅಪ್ಪಂ ರೆಸಿಪಿ (Appam Recipe) ಇಲ್ಲಿದೆ ನೋಡಿ.

JYO 1 | Live Kannada News
Kannada Recipe: ರಾತ್ರಿ ಅಕ್ಕಿ ನೆನೆಸೋದಕ್ಕೆ ಮರೆತುಹೋಯ್ತಾ? ಚಿಂತೆ ಯಾಕೆ ಹತ್ತೇ ನಿಮಿಷದಲ್ಲಿ ತಯಾರಿಸಿ ಮಸಾಲಾ ಅಪ್ಪಂ, ಹೇಗೆ ಗೊತ್ತಾ? https://sihikahinews.com/easy-masala-appam-recipe/

ಮಸಾಲಾ ಅಪ್ಪಂ ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ಕಪ್ ರವೆ

ಮುಕ್ಕಾಲು ಕಪ್ ಅವಲಕ್ಕಿ

ಅರ್ಧ ಕಪ್ ತುರಿದ ತಾಜಾ ತೆಂಗಿನಕಾಯಿ

ಕೆಂಪು ಮೆಣಸಿನಕಾಯಿ (ನೆನೆಸಿದ್ದು 4-5)

ಅರ್ಧ ಚಮಚ ಜೀರಿಗೆ

ಒಂದು ಚಮಚ ಕೊತ್ತಂಬರಿ ಬೀಜ

ಕಾಲು ಚಮಚ ಮೆಂತ್ಯ

ಬೆಲ್ಲ ಸ್ವಲ್ಪ

ಹುಣಸೆಹಣ್ಣು ಸ್ಪಲ್ಪ

ಕಾಲು ಕಪ್ ಮೊಸರು

ಉಪ್ಪು ರುಚಿಗೆ

ನೀರು

ಈನೋ ಒಂದು ಸಣ್ಣ ಪ್ಯಾಕ್

ಮಾಡುವ ವಿಧಾನ:

ಮೊದಲಿಗೆ ಮಿಕ್ಸರ್ ಜಾರ್‌ ಗೆ ರವೆ, ಅವಲಕ್ಕಿ, ತೆಂಗಿನಕಾಯಿ ತುರಿ, ನೆನೆಸಿದ  ಕೆಂಪು ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ, ಮೆಂತ್ಯ, ಬೆಲ್ಲ, ಹುಣಸೆಹಣ್ಣು ಇವಿಷ್ಟನ್ನೂ ಹಾಕಿ. ಬಳಿಕ ಮೊಸರು, ಉಪ್ಪು, ಸ್ವಲ್ಪ ನೀರನ್ನೂ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಈಗ ರುಬ್ಬಿದ ಹಿಟ್ಟನ್ನು  ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹತ್ತು ನಿಮಿಷ ನೆನೆಯಲು ಬಿಡಿ.

ನಂತರ ಒಂದು ಪ್ಯಾಕ್ ಇನೋ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಒಮ್ಮೆ ಹಿಟ್ಟು ನೊರೆಯಾಗಿ ಬಂದ ನಂತರ ಒಂದು ತವಾ ಬಿಸಿ ಮಾಡಿ ಸ್ವಲ್ಪ ದಪ್ಪವಾಗಿ ಹಿಟ್ಟನ್ನು ತವಾ ಮೇಲೆ ಹುಯ್ಯಿರಿ. ಎಣ್ಣೆ ಬೇಕಿದ್ದರೆ ಹಾಕಬಹುದು. ಈಗ ರುಚಿಯಾದ ಅಪ್ಪಂ ನ್ನು ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.

Comments are closed.