Kannada Recipe: ಸಮಯವಿಲ್ಲದೆ ಇದ್ದಾಗ ಚಿಟಿಕೆ ಹೊಡೆಯುವಷ್ಟು ಸುಲಭದಲ್ಲಿ ಮಾಡಿ ವಿಶೇಷ ಅಕ್ಕಿ ರೊಟ್ಟಿ; ಮನೆ ಮಂದಿ ಎಲ್ಲ ಮತ್ತೆ ಮತ್ತೆ ಮಾಡು ಅಂತ ಕೇಳ್ತಾರೆ, ಹೇಗೆ ಮಾಡಬೇಕು ಗೊತ್ತೆ?
Kannada Recipe: ಬೆಳಿಗ್ಗೆ ಎದ್ದು ಮನೆ ಕೆಲಸವೆಲ್ಲ ಮುಗಿಸಿ ಕಚೇರಿಗೆ ಹೋಗುವ ಅವಸರದಲ್ಲಿದ್ದಾಗಲೋ, ಅಥವಾ ಸಂಜೆ ವೇಳೆ ಯಾವುದೋ ಕೆಲಸಕ್ಕೆ ಅರ್ಜೆಂಟಾಗಿ ಹೋಗುವ ವೇಳೆಯಲ್ಲಿ ಮಕ್ಕಳಿಗೆ ಹಸಿವಾಗಿದೆ. ಏನಾದರೂ ತಿಂಡಿ ಮಾಡಿಕೊಡಿ ಎಂದು ಕೇಳುತ್ತಾರೆ. ಅಂತಹ ಸಂದರ್ಭದಲ್ಲಿ ನಿಮಗೆ ತಿಂಡಿ ಮಾಡಿಕೊಟ್ಟೇ ಹೊರಡಬೇಕಾದ ಪ್ರಸಂಗ ಎದುರಾಗುತ್ತದೆ. ಈ ಸಮಯದಲ್ಲಿ ನೀವು ಅಕ್ಕಿ ರೊಟ್ಟಿ (Rice flour Rotti) ಯನ್ನು ಮಾಡುವುದು ನಿಮಗೆ ಅನುಕೂಲಕರ. ಇದು ತಿನ್ನಲೂ ರುಚಿಯಾಗಿರುತ್ತದೆ. ಅಲ್ಲದೆ ದೇಹದ ಆರೋಗ್ಯಕ್ಕೂ ಬಹಳ ಒಳ್ಳೆಯದು.
ತರಕಾರಿ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಅಕ್ಕಿ ಹಿಟ್ಟು
ಕ್ಯಾರೇಟ್
ಸೌತೇಕಾಯಿ
ಹಸಿಮೆಣಸಿನ ಕಾಯಿ
ಈರುಳ್ಳಿ
ಶುಂಠಿ ಒಂದು ಸ್ವಲ್ಪ
ಕೊತ್ತಂಬರಿ ಸೊಪ್ಪು
ಎಣ್ಣೆ ಅಥವಾ ತುಪ್ಪ. (ನಾವು ತಿಳಿಸಿದ ತರಕಾರಿಗಳನ್ನು ನಿಮಗೆ ಇಷ್ಟ ಬಂದ ಪ್ರಮಾಣದಲ್ಲಿ ಬಳಸಬಹುದು. ಇಲ್ಲವಾದಲ್ಲಿ ತರಕಾರಿಗಳನ್ನು ತುರಿದು ಅಥವಾ ಸಣ್ಣಗೆ ಹೆಚ್ಚಿ ಒಂದು ಕಪ್ ಅಕ್ಕಿ ಹಿಟ್ಟಿಗೆ ಅರ್ಧ ಕಪ್ ಆಗುವಷ್ಟು ಹೊಂದಿಸಿಕೊಳ್ಳಬೇಕು.) ಇದನ್ನೂ ಓದಿ:Kannada Recipe: ಮೊಸರು ಇಲ್ಲದೆ, ಕೇವಲ 10 ನಿಮಿಷದಲ್ಲಿ ದಿಡೀರ್ ಎಂದು ಸಾಫ್ಟ್ ಇಡ್ಲಿ ಮಾಡುವುದು ಹೇಗೆ ಗೊತ್ತೇ??
ಅಕ್ಕಿ ರೊಟ್ಟಿ ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ಒಂದು ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಹೆಚ್ಚಿಟ್ಟುಕೊಂಡ ಎಲ್ಲ ತರಕಾರಿಗಳನ್ನು ಸೇರಿಸಿ. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಈಗ ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಕಲಸಿ. ಸೌತೆಕಾಯಿ ನೀರನ್ನು ಬೀಡುವುದರಿಂದ ನೀರನ್ನು ಸ್ವಲ್ಪ ನೋಡಿಕೊಂಡು ಬಳಕೆ ಮಾಡಬೇಕು. ಚಪಾತಿ ಹಿಟ್ಟಿನಂತೆ ಮೃದುವಾಗಿ ಮಾಡಿಕೊಳ್ಳಿ. ಇದನ್ನೂ ಓದಿ:Kannada Recipe: ಮನೆಯಲ್ಲಿಯೇ ಹೋಟೆಲ್ ಗಿಂತ ಸೂಪರ್ ಆಗಿ ಮಸಾಲಾ ದೋಸಾ ಮಾಡುವುದು ಹೇಗೆ ಗೊತ್ತೇ?? ಸುಲಭ ವಿಧಾನ ಹೇಗೆ ಗೊತ್ತೇ??
ಈಗ ಒಂದು ತವಾವನ್ನು ಬಿಸಿಗೆ ಇಡಿ. ಹಿಟ್ಟನ್ನು ಮಧ್ಯಮ ಗಾತ್ರದ ಉಂಡೆಯಾಗಿ ಮಾಡಿಕೊಳ್ಳಬೇಕು. ಒಂದು ಬಟರ್ ಪೇಪರ್ ಅಥವಾ ಬಾಳೆ ಎಲೆ ಇದ್ದರೆ ತುಂಬಾ ಒಳ್ಳೆಯದು. ನೀರು ಮತ್ತು ಎಣ್ಣೆಯನ್ನು ಕೈಗೆ ಮುಟ್ಟಿಕೊಂಡು ತಟ್ಟಿ. ಇದನ್ನು ಬಿಸಿಯಾದ ತವಾದ ಮೇಲೆ ಹಾಕಬೇಕು. ನಂತರ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬೇಯಿಸಬೇಕು. ಹೀಗೆ ಮಾಡಿದರೆ ಬಿಸಿ ಅಕ್ಕಿ ರೊಟ್ಟಿ ಸವಿಯಲು ಸಿದ್ದವಾಗುತ್ತದೆ. ಇದಕ್ಕೆ ರುಚಿಯಾದ ಚಟ್ನಿ ಇದ್ದರೆ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ.
Comments are closed.