Farming Scheme: ರೈತರಿಗೆ ಆರ್ಥಿಕ ಸಹಾಯವನ್ನು ಘೋಷಿಸಿದ ಸರ್ಕಾರ; ಎಷ್ಟು ಸಿಗತ್ತೆ, ಹೇಗೆ ಅಪ್ಲೈ ಮಾಡೋದು?; ಇಲ್ಲಿದೆ ವಿವರ!

Farming Scheme: ದೇಶ ಅಥವಾ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬರಲಿ ಆದರೆ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಆಗಿರುವಂತಹ ನಷ್ಟಗಳನ್ನು ತುಂಬಿಕೊಡಲು ಅಥವಾ ಕೃಷಿ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಹೂಡಿಕೆ ಹಾಗೂ ಅನ್ವೇಷಣೆಗಳನ್ನು ಮಾಡಲಿ ಎನ್ನುವ ಕಾರಣಕ್ಕಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವುದನ್ನ ಈಗಾಗಲೇ ನೀವೆಲ್ಲರೂ ಸಾಕಷ್ಟು ಬಾರಿ ಗಮನಿಸಿದ್ದೀರಿ. ಸರ್ಕಾರ ಯಾವತ್ತು ಕೂಡ ರೈತರ ಕೈ ಬಿಡೋದಿಲ್ಲ. ಇನ್ನು ಸದ್ಯದ ಮಟ್ಟಿಗೆ ನಾವು ಮಾತನಾಡಲು ಹೊರಟಿರೋದು ರೈತರಿಗಾಗಿ ಸರ್ಕಾರ ಜಾರಿಗೆ ತಂದಿರುವಂತಹ ಹೊಸ ಯೋಜನೆ ಬಗ್ಗೆ. ಇನ್ನು ಮಳೆ ಬರದೆ ಬೆಳೆಯನ್ನು ಹಾಳು ಮಾಡಿಕೊಂಡಿರುವವರಿಗೂ ಕೂಡ ಪರಿಹಾರವನ್ನು ನೀಡುವುದಕ್ಕೆ ಸರ್ಕಾರ ಹೊರಟಿದೆ.

ಕೃಷಿಯನ್ನು ಯಾವ ರೀತಿಯಲ್ಲಿ ಮಾಡಬೇಕು ಎನ್ನುವುದಾಗಿ ಖಂಡಿತವಾಗಿ ರೈತರಿಗೆ ಮಾಹಿತಿ ತಿಳಿದಿರುತ್ತದೆ. ಯಾವ ಸಂದರ್ಭದಲ್ಲಿ ಏನನ್ನು ಬೆಳೆಸಿದರೆ ಯಾವ ರೀತಿಯಲ್ಲಿ ಇಳುವರಿಯನ್ನು ತೆಗೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣ ಮಾಹಿತಿ ಅವರ ಬಳಿ ಇರುತ್ತೆ. ಆದರೆ ಈ ರೀತಿಯ ಉಪಯುಕ್ತರು ಮಾಹಿತಿ ಅವರಿಗೆ ತಿಳಿಸುವುದಕ್ಕೆ ಯಾರಿಗೂ ಸಾಧ್ಯ ಇರೋದಿಲ್ಲ. ಹೀಗಾಗಿ ಇವತ್ತಿನ ಈ ಲೇಖನವನ್ನು ಆದಷ್ಟು ಅವರಿಗೆ ಶೇರ್ ಮಾಡುವಂತಹ ಕೆಲಸವನ್ನು ಮಾಡುವುದು ನಮ್ಮ ಕೆಲಸ ಹಾಗೂ ಕರ್ತವ್ಯವಾಗಿದೆ.

ಕೃಷಿ ವಿಕಾಸ ಯೋಜನೆ!

ಕೃಷಿ ವಿಕಾಸ ಯೋಜನೆ ಎನ್ನುವಂತಹ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಹಣ ಸಹಾಯವನ್ನು ಪಡೆದುಕೊಂಡರೆ 50 ಪ್ರತಿಶತ ಸಬ್ಸಿಡಿ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಕಾಲಿಡುತ್ತಿರುವಂತಹ ಯುವಕರನ್ನು ಪ್ರೋತ್ಸಾಹಿಸುವ ಕಾರಣಕ್ಕಾಗಿ ಈ ಸಾಲ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಕೃಷಿಯೇತರ ಕೆಲಸಗಳಿಗೆ ಈ ಲೋನ್ ಪಡೆದುಕೊಳ್ಳುವ ಮೂಲಕ ಹಣವನ್ನು ಕೃಷಿಯನ್ನು ಇನ್ನಷ್ಟು ಬಳಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಬಹುದಾಗಿದೆ.

ಒಂದು ವೇಳೆ ನೀವು ನೀರು ಸಂರಕ್ಷಣಾ ಹೊಂಡವನ್ನು ನಿರ್ವಹಣೆ ಮಾಡುವುದಕ್ಕೆ 75,000 ಪಡೆದುಕೊಂಡರೆ ಅದರಲ್ಲಿ ನೀವು ಕಟ್ಟಿ ಬೇಕಾಗಿರುವುದು ಕೇವಲ 37,500 ರೂಪಾಯಿಗಳನ್ನು ಮಾತ್ರ. ತೋಟಗಾರಿಕೆ ಹಾಗೂ ಪಶುಸಂಗೋಪನೆಯ ಕೆಲಸಕ್ಕೆ ಕೂಡ ಈ ಸಾಲ ದೊರೆಕಲಿದೆ ಹಾಗೂ ಅದರ ಮೇಲೆ ಸಬ್ಸಿಡಿಯನ್ನು ಕೂಡ ನೀವು ಪಡೆದುಕೊಳ್ಳಲಿದ್ದೀರಿ.

http://rkvystartups.nic.in ಇದು ಅಧಿಕೃತ ವೆಬ್ಸೈಟ್ನ ಲಿಂಕ್ ಆಗಿದ್ದು ಎಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿರುವವರು ಈ ಯೋಜನೆ ಅಡಿಯಲ್ಲಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಂಡು ಸಬ್ಸಿಡಿಯನ್ನು ಕೂಡ ಸಾಲದ ಮೇಲೆ ಪಡೆದುಕೊಳ್ಳಬಹುದಾಗಿದೆ.

Comments are closed.