Gold Purchase: ಈ ನಾಲ್ಕು ಶುಭದಿನ ಚಿನ್ನ ಖರೀದಿಸುವುದಕ್ಕೆ ಬೆಸ್ಟ್ ದಿನ. ಈ ದಿನ ಚಿನ್ನ ಖರೀದಿಸಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತೆ!

Gold Purchase: ಸಾಮಾನ್ಯವಾಗಿ ಚಿನ್ನ ಖರೀದಿಸುವಾಗ ಜನರು ಪ್ರಮುಖವಾಗಿ ಗಮನಿಸುವುದು ಯಾವ ದಿನ ಚಿನ್ನದ ಬೆಲೆ ಕಡಿಮೆಯಾಗಿದೆ ಎನ್ನುವುದನ್ನು ಮಾತ್ರ. ಯಾವಾಗ ಶಾಸ್ತ್ರಗಳ ಪ್ರಕಾರ ಚಿನ್ನ ಖರೀದಿಸುವುದಕ್ಕೆ ಶುಭದಿನ ಎನ್ನುವುದನ್ನು ಹೆಚ್ಚಾಗಿ ಜನರು ನೋಡೋದಿಕ್ಕೆ ಹೋಗೋದಿಲ್ಲ ಅನ್ನೋದು ಆಶ್ಚರ್ಯದ ವಿಚಾರ. ಶಾಸ್ತ್ರಗಳ ಪ್ರಕಾರ ಈ ಕೆಲವೊಂದು ನಿರ್ದಿಷ್ಟ ದಿನ ಚಿನ್ನ ಖರೀದಿಸುವುದಕ್ಕೆ ಹೋದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಹಾಗಿದ್ರೆ ಆ ಶುಭ ದಿನಗಳು ಯಾವುವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ಭಾರತದಲ್ಲಿ ಚಿನ್ನಾಭರಣಗಳು ಅಥವಾ ಚಿನ್ನ ಎನ್ನುವುದು ಕೇವಲ ಅಲಂಕಾರಿಕ ವಸ್ತುವಿನ ರೂಪದಲ್ಲಿ ಮಾತ್ರವಲ್ಲದೆ ಶುಭ ಸೂಚಕ ಎಂಬುದನ್ನು ಕೂಡ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಇದು ಅತ್ಯಂತ ಶುಭ ಸೂಚಕ ವಸ್ತುವಾಗಿರುವ ಕಾರಣದಿಂದಾಗಿ ಈ ಚಿನ್ನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕೂಡ ಕೆಲವೊಂದು ದಿನವನ್ನು ನೋಡಿ ನಂತರ ಆ ವಿಶೇಷ ದಿನದಂದು ಖರೀದಿ ಮಾಡಬೇಕು ಎನ್ನುವಂತಹ ಮಾತಿದೆ. ಉದಾಹರಣೆಗೆ ಅಕ್ಷಯ ತೃತೀಯದಂತಹ ದಿನದಲ್ಲಿ ಚಿನ್ನವನ್ನು ಖರೀದಿ ಮಾಡುವುದರಿಂದ ಅದು ಚಿನ್ನವನ್ನು ಇನ್ನಷ್ಟು ದುಪ್ಪಟ್ಟು ಮಾಡುತ್ತದೆ ಎಂಬುದಾಗಿ ನಂಬಿಕೆ ಇದೆ.

ಅದೇ ರೀತಿ ಇರುವಂತಹ ಏಳು ದಿನಗಳಲ್ಲಿ ಯಾವ ವಾರದ ಒಂದು ಚಿನ್ನವನ್ನು ಖರೀದಿ ಮಾಡಿದರೆ ಅದೃಷ್ಟ ಹೆಚ್ಚಾಗುತ್ತೆ ಅನ್ನೋದನ್ನ ನೋಡೋದಾದ್ರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಭಾನುವಾರದ ದಿನದಂದು ನೀವು ಚಿನ್ನವನ್ನ ಖರೀದಿ ಮಾಡಿದ್ರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗುವುದಕ್ಕಾಗಿ ನೀವು ಪೂಸ ನಕ್ಷತ್ರದಲ್ಲಿ ಚಿನ್ನವನ್ನು ಖರೀದಿ ಮಾಡಬೇಕು ಎಂಬುದಾಗಿ ಹೇಳಲಾಗುತ್ತದೆ. ಚಿನ್ನವನ್ನು ಸೂರ್ಯನ ಅಂಶ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಸೂರ್ಯ ಹಾಗೂ ಶನಿಯ ನಡುವೆ ವೈರತ್ವ ಇರುವ ಕಾರಣದಿಂದಾಗಿ ಶನಿವಾರದ ದಿನದಂದು ಅಪ್ಪಿ ತಪ್ಪಿಯು ಕೂಡ ಚಿನ್ನವನ್ನು ಖರೀದಿ ಮಾಡುವುದಕ್ಕೆ ಹೋಗಬೇಡಿ.

ಹೀಗಾಗಿ ಈ ಮೇಲಿನ ಮಾಹಿತಿಗಳ ಮೂಲಕ ನೀವು ಯಾವ ದಿನದಂದು ಚಿನ್ನವನ್ನು ಖರೀದಿ ಮಾಡಿದ್ರೆ ಶುಭವಾಗುತ್ತದೆ ಹಾಗೂ ಅದೃಷ್ಟ ಹೆಚ್ಚಾಗುತ್ತದೆ ಎಂಬುದನ್ನು ಹಾಗೂ ಯಾವ ದಿನದಂದು ಚಿನ್ನವನ್ನು ಖರೀದಿ ಮಾಡಬಾರದು ಎನ್ನುವಂತಹ ಮಾಹಿತಿಯನ್ನು ವೈದಿಕ ಶಾಸ್ತ್ರದ ಸಂಪ್ರದಾಯಗಳ ಪ್ರಕಾರ ತಿಳಿದುಕೊಂಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ.

Comments are closed.